ಡೀಲ್ ನಮ್ಮದು, ಹಣ ನಿಮ್ಮದು- ಭ್ರಷ್ಟರಿಗೆ ಜಾಗವಿಲ್ಲ: ಶಿರಸಿಯಲ್ಲಿ ಹೆಬ್ಬಾರ್ ವಿರುದ್ಧ ಪೋಸ್ಟರ್!

ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರ ಕಾಂಗ್ರೆಸ್‌ ಸೇರ್ಪಡೆಗೆ ವಿರೋಧ ವ್ಯಕ್ತವಾಗಿದೆ. ‘ನಮ್ಮ‌‌ ಪಕ್ಷ, ನಮ್ಮ ಹಕ್ಕು, ಭ್ರಷ್ಟರಿಗಿಲ್ಲಿ ಜಾಗವಿಲ್ಲ’ ಎಂಬ ಪೋಸ್ಟರ್ ಅಂಟಿಸಿ, ಕೆಲವರು ಅಸಮಾಧಾನ ಹೊರಹಾಕಿದ್ದಾರೆ.
ಶಿವರಾಮ್ ಹೆಬ್ಬಾರ್ ವಿರುದ್ಧ ಪೋಸ್ಟರ್
ಶಿವರಾಮ್ ಹೆಬ್ಬಾರ್ ವಿರುದ್ಧ ಪೋಸ್ಟರ್

ಶಿರಸಿ: ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರ ಕಾಂಗ್ರೆಸ್‌ ಸೇರ್ಪಡೆಗೆ ವಿರೋಧ ವ್ಯಕ್ತವಾಗಿದೆ. ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯ ಗೋಡೆಯ ಮೇಲೆ ಸೋಮವಾರ ‘ನಮ್ಮ‌‌ ಪಕ್ಷ, ನಮ್ಮ ಹಕ್ಕು, ಭ್ರಷ್ಟರಿಗಿಲ್ಲಿ ಜಾಗವಿಲ್ಲ’ ಎಂಬ ಪೋಸ್ಟರ್ ಅಂಟಿಸಿ, ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

ಶಿವರಾಮ ಹೆಬ್ಬಾರ್ ಮತ್ತೆ ಕಾಂಗ್ರೆಸ್ ಸೇರುವ ನಿರೀಕ್ಷೆಯಲ್ಲಿದ್ದಾರೆ, ಆದರೆ ಬಿಜೆಪಿಯಿಂದ ನಮಗೆ ಕಸ ಬೇಕಾಗಿಲ್ಲ ಎಂಬ ಪೋಸ್ಟರ್‌ಗಳು ಶಿರಸಿ ಪಟ್ಟಣದಾದ್ಯಂತ ಕಾಣಿಸಿಕೊಂಡಿದ್ದು ಮುಜುಗರ ಉಂಟು ಮಾಡಿದೆ.

ಪ್ರಸಿದ್ಧ ಮಾರಿಕಾಂಬಾ ಜಾತ್ರೆಯ ಸ್ಥಳದಲ್ಲೂ ಪೋಸ್ಟರ್‌ಗಳು ಕಂಡು ಬಂದಿವೆ. ಹೆಬ್ಬಾರ್ ಅವರು ಬಿಜೆಪಿ ಸಂಪುಟದಲ್ಲಿ ಭ್ರಷ್ಟ ಸಚಿವರೆಂದು ಪೋಸ್ಟರ್ ನಲ್ಲಿ ತೋರಿಸಲಾಗಿದೆ. 2023 ರ ವಿಧಾನಸಭೆ ಚುನಾವಣೆಯ ಮೊದಲು ಕಾಂಗ್ರೆಸ್ ಆರಂಭಿಸಿದ್ದ "PayCM" ಅಭಿಯಾನದ ಫೋಟೋ ಕೂಡ ಇದೆ. ಪೋಸ್ಟರ್‌ನಲ್ಲಿ ಆಹಾರ ಕಿಟ್ ಹಗರಣವನ್ನು ಉಲ್ಲೇಖಿಸಲಾಗಿದೆ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚಿತ್ರದೊಂದಿಗೆ ಹೆಬ್ಬಾರ್ ಅವರ ಫೋಟೋ ತೋರಿಸಲಾಗಿದೆ. , “ಡೀಲ್ ನಮ್ಮದು; ಹಣ ನಿಮ್ಮದು ಎಂಬ ಪೋಸ್ಟರ್ ಹೆಬ್ಬಾರ್ ಅವರನ್ನು ಅಣಕಿಸುವಂತಿದೆ.

ಶಿವರಾಮ್ ಹೆಬ್ಬಾರ್ ವಿರುದ್ಧ ಪೋಸ್ಟರ್
ರಾಜ್ಯಸಭಾ ಚುನಾವಣೆ: ಅಡ್ಡ ಮತದಾನದ ಭೀತಿ; ಬಿಜೆಪಿ- ಜೆಡಿಎಸ್‌ಗೆ ತಲೆನೋವಾದ ಶಾಸಕ ಶಿವರಾಮ್ ಹೆಬ್ಬಾರ್!

ಮಾರಿಕಾಂಬಾ ಜಾತ್ರೆಯ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗೆ ಅತೃಪ್ತಿ ವ್ಯಕ್ತಪಡಿಸಿದ ಹೆಬ್ಬಾರ್, ನಾನು ಕಾಂಗ್ರೆಸ್ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿಲ್ಲ. ಯಾರೂ ಯಾವುದೇ ಪಕ್ಷವನ್ನು ಗುತ್ತಿಗೆಗೆ ತೆಗೆದುಕೊಂಡಿಲ್ಲ. ಬಿಜೆಪಿಯಿಂದ ಅಸಮಾಧಾನಗೊಂಡವರು ಕಾಂಗ್ರೆಸ್ ಸೇರುತ್ತಾರೆ. ಕಾಂಗ್ರೆಸ್‌ನಲ್ಲಿ ಅತೃಪ್ತರು ಬಿಜೆಪಿ ಸೇರುತ್ತಾರೆ ಎಂದು ಸಿಡಿಮಿಡಿಗೊಂಡರು.

ಲೋಕಸಭೆ ಚುನಾವಣೆಗೂ ಮುನ್ನ ಹೆಬ್ಬಾರ್ ಮತ್ತೆ ಕಾಂಗ್ರೆಸ್ ಸೇರಲು ಯತ್ನಿಸುತ್ತಿರುವ ಹೊತ್ತಿನಲ್ಲಿಯೇ ಈ ಪೋಸ್ಟರ್ ಪ್ರಚಾರ ನಡೆದಿದೆ. ಆದರೆ ಕಾಂಗ್ರೆಸ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ ಸೇರಿದಂತೆ ಹಲವರು ಹೆಬ್ಬಾರ್ ಮರಳಿ ಪಕ್ಷಕ್ಕೆ ಸೇರಬೇಕು ಎಂದು ಬಯಸಿದ್ದಾರೆ. ಅವರು ಮತ್ತೆ ಸೇರಲು ಬಯಸಿದರೆ ಪಕ್ಷಕ್ಕೆ ಸ್ವಾಗತ. ಅವನು ನನ್ನ ಗೆಳೆಯ ಎಂದು ಮಂಕಾಳ್ ವೈದ್ಯ ಹೇಳಿದ್ದಾರೆ. ಹೆಬ್ಬಾರ್ ಅವರಿಗೆ ಬಿಜೆಪಿಯಲ್ಲಿ ನೆಮ್ಮದಿಯಿಲ್ಲದ ಕಾರಣ ಬಿಜೆಪಿಯಲ್ಲಿ ಉಳಿಯುವುದಿಲ್ಲ ಎಂದು ಹೇಳುತ್ತಿದ್ದಾರೆ.

ಇತ್ತೀಚೆಗಷ್ಟೇ ನಡೆದ ರಾಜ್ಯಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಹೆಬ್ಬಾರ್ ನೆರವಾಗಿದ್ದಾರೆ. ಚುನಾವಣೆಯಿಂದ ದೂರ ಉಳಿಯಲು ಆರೋಗ್ಯದ ಕಾರಣ ಎಂದು ಬಿಜೆಪಿ ಹೈಕಮಾಂಡ್‌ಗೆ ತಿಳಿಸಿದ್ದರು, ಅದಾದ ನಂತರವು ಅವರು, ಬಿಜೆಪಿಯಲ್ಲೇ ಉಳಿದುಕೊಂಡಿದ್ದಾರೆ. ಬಿಜೆಪಿ ಮುಂದೆ ಹೋಗಿ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತು, ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ.

ಶಿವರಾಮ್ ಹೆಬ್ಬಾರ್ ವಿರುದ್ಧ ಪೋಸ್ಟರ್
ಸೋಮಶೇಖರ್, ಹೆಬ್ಬಾರ್ ಬೆಂಬಲ ಕಾಂಗ್ರೆಸ್ ಅಭ್ಯರ್ಥಿಗೆ?: ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿದ ಬಿಜೆಪಿ ಶಾಸಕರು

ಮಾರ್ಚ್ 6 ರಂದು ಕದಂಬೋತ್ಸವ ಉತ್ಸವಕ್ಕಾಗಿ ಶಿರಸಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಮುಖಂಡರನ್ನು ಭೇಟಿಯಾದಾಗ ಹೆಬ್ಬಾರ್ ಅವರ ಪ್ರಯತ್ನವು ತೀವ್ರವಾಗಿತ್ತು,

ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಶಿರಸಿಗೆ ಆಗಮಿಸಿದ್ದು, ಅಂದು ಹೆಬ್ಬಾರ್ ಸೇರ್ಪಡೆ ಅಂತಿಮಗೊಳ್ಳಲಿದೆ ಎಂದು ಊಹಿಸಲಾಗಿತ್ತು.

ಆದರೆ ಕಾಂಗ್ರೆಸ್‌ನ ಸಿರ್ಸಿ ಶಾಸಕ ಭೀಮಣ್ಣ ನಾಯ್ಕ್ ಮತ್ತು ಹಳಿಯಾಳ ಶಾಸಕ ಆರ್‌ವಿ ದೇಶಪಾಂಡೆ ಹೆಬ್ಬಾರ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಶಿವಕುಮಾರ್ ಸುಮ್ಮನೆ ವಾಪಸಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com