ಲೋಕಸಭಾ ಚುನಾವಣೆ: ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಚಾರದ ಅಖಾಡ ರಂಗೇರುತ್ತಿದೆ. ಕೆಲವೆಡೆ ಈಗಾಗಲೇ ಸುಡುಬಿಸಿಲಿನ ನಡುವೆಯೇ ಅಭ್ಯರ್ಥಿಗಳು ಪ್ರಚಾರಕ್ಕೆ ಚಾಲನೆ ನೀಡುವ ಮೂಲಕ ಮತದಾರರನ್ನು ಓಲೈಸಿಕೊಳ್ಳಲು ಮುಂದಾಗಿದ್ದಾರೆ.
ಕಾಂಗ್ರೆಸ್ ಸ್ಟಾರ್ ಪ್ರಚಾರಕರು
ಕಾಂಗ್ರೆಸ್ ಸ್ಟಾರ್ ಪ್ರಚಾರಕರು
Updated on

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಚಾರದ ಅಖಾಡ ರಂಗೇರುತ್ತಿದೆ. ಕೆಲವೆಡೆ ಈಗಾಗಲೇ ಸುಡುಬಿಸಿಲಿನ ನಡುವೆಯೇ ಅಭ್ಯರ್ಥಿಗಳು ಪ್ರಚಾರಕ್ಕೆ ಚಾಲನೆ ನೀಡುವ ಮೂಲಕ ಮತದಾರರನ್ನು ಓಲೈಸಿಕೊಳ್ಳಲು ಮುಂದಾಗಿದ್ದಾರೆ.

ಪ್ರಮುಖ ರಾಜಕೀಯ ಪಕ್ಷಗಳು ಸ್ಟಾರ್ ಪ್ರಚಾರಕರೊಂದಿಗೆ ಮತಬೇಟಿಗೆ ನಿರ್ಧರಿಸಿದ್ದು, ಅಬ್ಬರದ ಪ್ರಚಾರದ ಮೂಲಕ ಮತದಾರರ ಮನಗೆಲ್ಲುವ ಕಸರತ್ತಿನಲ್ಲಿ ತೊಡಗಿವೆ. ಅದಕ್ಕೆ ಪೂರಕವೆಂಬಂತೆ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಕಾಂಗ್ರೆಸ್‌ ಲೋಕಸಭಾ ಚುನಾವಣೆಯ ಸ್ಟಾರ್ ಕ್ಯಾಂಪೇನ‌ರ್ ಪಟ್ಟಿಯಲ್ಲಿ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯಿಂದ ಹಿಡಿದು ಅನೇಕ ರಾಜ್ಯ ನಾಯಕರ ಹೆಸರಿದೆ.

ಕಾಂಗ್ರೆಸ್ ಸ್ಟಾರ್ ಪ್ರಚಾರಕರು
BJP ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ; ಸದಾನಂದ ಗೌಡ, ಪ್ರತಾಪ್ ಸಿಂಹ ಸೇರಿ ಟಿಕೆಟ್ ವಂಚಿತರಿಗೆ ಸ್ಥಾನ

ಆ ಪೈಕಿ, ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಪ್ರಿಯಾಂಕ ಗಾಂಧಿ, ರಣದೀಪ್ ಸುರ್ಜೆವಾಲಾ, ಕೆ.ಸಿ.ವೇಣುಗೋಪಾಲ್, ವೀರಪ್ಪ ಮೊಯ್ಲಿ, ಬಿವಿ ಶ್ರೀನಿವಾಸ್, ಲಕ್ಷ್ಮಣ ಸವದಿ, ಈಶ್ವರ್ ಖಂಡ್ರೆ, ವಿನಯಕುಮಾರ್ ಸೊರಕೆ, ಬಿಕೆ ಹರಿಪ್ರಸಾದ್, ಆರ್ ವಿ ದೇಶಪಾಂಡೆ, ಡಾ.ಜಿ ಪರಮೇಶ್ವರ್, ಎಚ್ ಕೆ ಪಾಟೀಲ್, ಎಂಬಿ ಪಾಟೀಲ್ ಸಹ ಸೇರಿದ್ದಾರೆ.

ಇನ್ನು, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ಎಚ್ ಎಂ ರೇವಣ್ಣ, ಪಿಜಿ ಆರ್ ಸಿಂಧ್ಯಾ, ಬಿ ಸೋಮಶೇಖರ್, ಎಲ್ ಹನುಮಂತಯ್ಯ, ಜಿಸಿ ಚಂದ್ರಶೇಖರ, ಸೈಯದ್ ನಾಸಿರ್ ಹುಸೇನ್, ಅಭಿಷೇಕ್ ದತ್, ಜಮೀರ್ ಅಹಮದ್ ಖಾನ್, ಮಧು ಬಂಗಾರಪ್ಪ, ಪಿಟಿ ಪರಮೇಶ್ವರ್ ನಾಯಕ್, ವಿ ಎಸ್ ಉಗ್ರಪ್ಪ, ಸತೀಶ್ ಜಾರಕಿಹೊಳಿ, ತನ್ವೀರ್ ಸೇಠ್, ಪುಷ್ಪಾ ಅಮರನಾಥ್, ಉಮಾಶ್ರೀ, ಸಹ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com