ರಾಯ್ಬರೇಲಿಯಲ್ಲೂ ಸೋಲು ಖಚಿತ; SDPI ಬೆಂಬಲದಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ: ಅಮಿತ್ ಶಾ

ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮಿತ್ರ ಸಂಘಟನೆಯಾದ ಎಸ್ ಡಿಪಿಐ ಬೆಂಬಲದಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಶುಕ್ರವಾರ ಪ್ರತಿಪಾದಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ“ದೇಶ ವಿರೋಧಿ ಶಕ್ತಿಗಳು” ಭಾಗಿಯಾಗಿವೆ ಎಂದು ಆರೋಪಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ
Updated on

ಹುಕ್ಕೇರಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮಿತ್ರ ಸಂಘಟನೆಯಾದ ಎಸ್ ಡಿಪಿಐ ಬೆಂಬಲದಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಶುಕ್ರವಾರ ಪ್ರತಿಪಾದಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ“ದೇಶ ವಿರೋಧಿ ಶಕ್ತಿಗಳು” ಭಾಗಿಯಾಗಿವೆ ಎಂದು ಆರೋಪಿಸಿದರು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಒತ್ತಾಯಿಸಿದರು.

"ಮೋದಿ ಜಿ ದೇಶದಿಂದ ಭಯೋತ್ಪಾದನೆಯನ್ನು ಕೊನೆಗೊಳಿಸಿದರು. ಪಿಎಫ್‌ಐ ಅನ್ನು ನಿಷೇಧಿಸಿದರು. ಕರ್ನಾಟಕದಲ್ಲಿ ಎಸ್ ಡಿಪಿಐ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪರಿಣಾಮ ನೋಡಿ, ಅವರು ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ" ಎಂದು ಮಾರ್ಚ್ 1 ರಂದು ನಡೆದಿದ್ದ ರಾಮೇಶ್ವರಂ ಕೆಫೆ ಸ್ಫೋಟವನ್ನು ಉಲ್ಲೇಖಿಸಿದರು.

ಕಾಂಗ್ರೆಸ್ ಸರ್ಕಾರ ಮೊದಲು ಇದು ಸಿಲಿಂಡರ್ ಸ್ಫೋಟ ಎಂದು ಹೇಳಿದರು. ಇದು ಸಿಲಿಂಡರ್ ಸ್ಫೋಟವಲ್ಲ, ಇದು ರಾಷ್ಟ್ರವಿರೋಧಿಗಳು ನಡೆಸಿದ ಬಾಂಬ್ ಸ್ಫೋಟವಾಗಿದೆ. ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಹಸ್ತಾಂತರಿಸಿದಾಗ, ರಾಷ್ಟ್ರ ವಿರೋಧಿಗಳ ಕುಕೃತ್ಯ ಎಂಬುದು ತಿಳಿದುಬಂದಿದೆ. ಚಿಂತೆ ಮಾಡಬೇಡಿ, ಕಾಂಗ್ರೆಸ್ ಸರ್ಕಾರ ಏನೇ ಮಾಡಲಿ. ನರೇಂದ್ರ ಮೋದಿ ಸರ್ಕಾರವು ಕರ್ನಾಟಕವನ್ನು ಸುಭದ್ರವಾಗಿರಿಸುತ್ತದೆ ಎಂದು ಅವರು ಹೇಳಿದರು. ಚಿಕ್ಕೋಡಿ ಮತ್ತು ರಾಜ್ಯದ ಇತರ 13 ಲೋಕಸಭಾ ಕ್ಷೇತ್ರಗಳಿಗೆ ಮೇ 7 ರಂದು ಚುನಾವಣೆ ನಡೆಯಲಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ
ನೇಹಾ ಹಿರೇಮಠ್ ಹತ್ಯೆ: ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು- ಜೆಪಿ ನಡ್ಡಾ

ನೇಹಾ ಹಿರೇಮಠ್ ಅವರ ಕೊಲೆಯನ್ನು ಉಲ್ಲೇಖಿಸಿದ ಶಾ, ಸರ್ಕಾರದ ಕೆಲವರು ವೈಯಕ್ತಿಕ ಸಮಸ್ಯೆಗಳಿಂದ ಹತ್ಯೆಯಾಗಿದೆ ಎಂದು ಹೇಳಿದರು. “ಏನಿದು ವೈಯುಕ್ತಿಕ ಸಮಸ್ಯೆ, ಮತಾಂತರಕ್ಕೆ ಇಷ್ಟವಿಲ್ಲದ ಹುಡುಗಿಯನ್ನು ಕೊಲೆ ಮಾಡಲಾಗಿದೆ.

ಮೊನ್ನೆ ಹುಬ್ಬಳ್ಳಿಯಲ್ಲಿ ಅವರ ಫೋಷಕರನ್ನು ಭೇಟಿಯಾದೆ. ತನ್ನ ಮಗಳನ್ನು ಮತಾಂತರಕ್ಕೆ ಒಳಗಾಗುವಂತೆ ಒತ್ತಡ ಹೇರಿದ್ದಾಳೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಲು ಬಯಸುತ್ತೇನೆ, ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಲು ನಿಮಗೆ ಸಾಧ್ಯವಾಗದಿದ್ದರೆ ಸಿಬಿಐಗೆ ನೀಡಿ. ನೇಹಾ ಹಿರೇಮಠ್‌ಗೆ ಅನ್ಯಾಯ ಮಾಡಿದವರಿಗೆ ಶಿಕ್ಷೆಯಾಗುವುದನ್ನು ಬಿಜೆಪಿ ಖಾತ್ರಿಪಡಿಸುತ್ತದೆ ಎಂದು ಅವರು ಹೇಳಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದರೂ ಅಯೋಧ್ಯೆಯ ರಾಮಲಲ್ಲಾ ಪ್ರತಿಷ್ಠಾಪನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿಲ್ಲ. ತಮ್ಮ ಮತ ಬ್ಯಾಂಕ್‌ಗೆ ಹೆದರಿ" ಕಾರ್ಯಕ್ರಮ ಬಿಟ್ಟರು ಎಂದು ಆರೋಪಿಸಿದರು.

"ಕಾಶ್ಮೀರ ನಮಗೆ ಸೇರಿದೆಯೇ ಅಥವಾ ಇಲ್ಲವೇ" ಎಂದು ಸಭೆಯನ್ನು ಪ್ರಶ್ನಿಸಿದ ಶಾ ಮತ್ತು ಕರ್ನಾಟಕ ಮತ್ತು ರಾಜಸ್ಥಾನದ ಜನರು ಕಾಶ್ಮೀರಕ್ಕೂ ಏನು ಸಂಬಂಧ ಹೊಂದಿದ್ದಾರೆ ಎಂದು ಖರ್ಗೆ ಕೇಳಿದರು. “ಖರ್ಗೆ ಸಾಬ್, ನಿಮಗೆ 80 ವರ್ಷ ದಾಟಿದೆ, ಆದರೆ ಚಿಕ್ಕೋಡಿಯ ಜನರನ್ನು ನೀವು ಅರ್ಥಮಾಡಿಕೊಂಡಿಲ್ಲ, ಇಲ್ಲಿನ ಪ್ರತಿ ಮಗುವೂ ಕಾಶ್ಮೀರಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧವಾಗಿದೆ. ಅಧಿಕಾರಕ್ಕೆ ಬಂದ 10 ತಿಂಗಳಲ್ಲಿ ಕರ್ನಾಟಕವನ್ನು ಕಾಂಗ್ರೆಸ್ ಸರ್ವನಾಶ ಮಾಡಿದೆ ಎಂದು ಆರೋಪಿಸಿದ ಶಾ, ಮತ್ತೊಮ್ಮೆ ಮೋದಿಯನ್ನು ನಂಬಿ, ಕರ್ನಾಟಕವನ್ನು ಮುಂದೆ ಕೊಂಡೊಯ್ಯುತ್ತಾರೆ ಎಂದು ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ
LokSabha Election 2024: ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ; ಸೋನಿಯಾ, ಖರ್ಗೆ ಉಪಸ್ಥಿತಿ!

ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಮೇಥಿಯಿಂದ ಓಡಿಹೋಗಿ ಉತ್ತರ ಪ್ರದೇಶದ ರಾಯಬರೇಲಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಅಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಭಾರಿ ಅಂತರದಿಂದ ಸೋಲುತ್ತಾರೆ ಎಂದು ಅಮಿತ್ ಶಾ ಭವಿಷ್ಯ ನುಡಿದರು. ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿಯನ್ನು "ಲಾಂಚ್" ಮಾಡಲು ನಡೆಸಿದ ಬಹು ಪ್ರಯತ್ನಗಳು ವಿಫಲವಾಗಿವೆ ಮತ್ತು ಇದು ಇಪ್ಪತ್ತೊಂದನೇ ಪ್ರಯತ್ನ ಎಂದರು.

"ಮೋದಿ ಅವರ ಪ್ರಯತ್ನದಿಂದ ಒಂದೇ ಬಾರಿಗೆ ಚಂದ್ರಯಾನ ಉಡಾವಣೆಯಾಯಿತು. ಸೋನಿಯಾ ಗಾಂಧಿ ಅವರು ರಾಹುಲ್ ಬಾಬಾ ಹೆಸರಿನ ಈ 'ಯಾನ್' ಉಡಾವಣೆಗೆ ಇಪ್ಪತ್ತು ಬಾರಿ ಪ್ರಾರಂಭಿಸಿದರು, ಆದರೆ ಯಶಸ್ವಿಯಾಗಲಿಲ್ಲ.

ಇಂದು ಇಪ್ಪತ್ತೊಂದನೇ ಬಾರಿಗೆ ಅಮೇಥಿಯಿಂದ ಓಡಿಹೋಗಿ, ರಾಯ್ಬರೇಲಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್ ವಿರುದ್ಧ ಭಾರೀ ಅಂತರದಿಂದ ಸೋಲನುಭವಿಸುತ್ತೀರಿ. ನನ್ನ ಮಾತನ್ನು ಬರೆದಿಟ್ಟುಕೊಳ್ಳಿ ಎಂದು ಅಮಿತ್ ಶಾ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com