2ನೇ ಹಂತದ ಚುನಾವಣೆ: ಲಿಂಗಾಯತ ಪ್ರಾಬಲ್ಯದ ಮೂರು ಭದ್ರಕೋಟೆಗಳನ್ನು ಉಳಿಸಿಕೊಳ್ಳುತ್ತಾ ಬಿಜೆಪಿ?

ಮೇ 7 ರಂದು ದೇಶದಲ್ಲಿ 3ನೇ ಹಂತದ ಮತ್ತು ರಾಜ್ಯದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ರಾಜ್ಯದ 28 ಕ್ಷೇತ್ರಗಳ ಪೈಕಿ ಉಳಿದ 14 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಬಸವರಾಜ ಬೊಮ್ಮಾಯಿ - ಪ್ರಹ್ಲಾದ್ ಜೋಶಿ - ಜಗದೀಶ್ ಶೆಟ್ಟರ್
ಬಸವರಾಜ ಬೊಮ್ಮಾಯಿ - ಪ್ರಹ್ಲಾದ್ ಜೋಶಿ - ಜಗದೀಶ್ ಶೆಟ್ಟರ್

ಬೆಳಗಾವಿ: ಮೇ 7 ರಂದು ದೇಶದಲ್ಲಿ 3ನೇ ಹಂತದ ಮತ್ತು ರಾಜ್ಯದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ರಾಜ್ಯದ 28 ಕ್ಷೇತ್ರಗಳ ಪೈಕಿ ಉಳಿದ 14 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಲಿಂಗಾಯತ ಪ್ರಾಬಲ್ಯದ ಮೂರು ಭದ್ರಕೋಟೆಗಳಾದ ಧಾರವಾಡ, ಬೆಳಗಾವಿ ಮತ್ತು ಹಾವೇರಿಯತ್ತ ಎಲ್ಲರ ಚಿತ್ತ ನೆಟ್ಟಿದ್ದು, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಉತ್ತರ ಕರ್ನಾಟಕದಲ್ಲಿ ಮೂವರು ಯುವ ಕಾಂಗ್ರೆಸ್ ಪ್ರತಿಸ್ಪರ್ಧಿಗಳ ವಿರುದ್ಧ ಕಣಕ್ಕಿಳಿದಿದ್ದಾರೆ.

ಕ್ರಮವಾಗಿ ಶೆಟ್ಟರ್, ಬೊಮ್ಮಾಯಿ ಮತ್ತು ಜೋಶಿ ಕಣದಲ್ಲಿರುವ ಬೆಳಗಾವಿ, ಹಾವೇರಿ ಮತ್ತು ಹುಬ್ಬಳ್ಳಿ ಕ್ಷೇತ್ರಗಳ ಚುನಾವಣೆಯು ಲಿಂಗಾಯತ ಸಮುದಾಯದ ಮತಗಳು ಯಾವ ರೀತಿಯಲ್ಲಿ ಬದಲಾಗುತ್ತವೆ ಎಂಬುದರ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುತ್ತದೆ.

ಬಿಜೆಪಿಯ ಈ ಮೂರು ಘಟಾನುಘಟಿ ನಾಯಕರು ಕ್ಷೇತ್ರದ ಅಭಿವೃದ್ಧಿಗಿಂತ 'ಮೋದಿ ಅಲೆಯನ್ನೇ' ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ.

ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಬೆಳಗಾವಿ ಮತ್ತು ಹಾವೇರಿ ಕ್ಷೇತ್ರಗಳಲ್ಲಿ ಲಿಂಗಾಯತ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ.

ಲಿಂಗಾಯತ ಮತಗಳನ್ನು ಸೆಳೆಯಲು ಎರಡು ಪಕ್ಷಗಳು ಮಾಡುತ್ತಿರುವ ಪ್ರಯತ್ನಗಳು ಫಲ ನೀಡುತ್ತವೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಗದಗ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮಿಗಳು, “ಬಿಜೆಪಿಯು ಹೆಚ್ಚಾಗಿ ಲಿಂಗಾಯತರನ್ನು ಅವಲಂಬಿಸಿದೆ. ಈ ಚುನಾವಣೆಯಲ್ಲಿ ಲಿಂಗಾಯತರನ್ನು ಓಲೈಸುವ ಪ್ರಯತ್ನಗಳು ನಡೆಯುತ್ತಿವೆಯಾದರೂ, ಲಿಂಗಾಯತ ಅಂಶವು ಪ್ರಮುಖ ಪಾತ್ರ ವಹಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ”ಎಂದು ಹೇಳಿದ್ದಾರೆ.

ದುರದೃಷ್ಟವಶಾತ್, ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಧ್ರುವೀಕರಿಸುವ ಪ್ರಯತ್ನಗಳನ್ನು ಮಾಡುತ್ತಿವೆ. ಮತದಾರರು ಅದೆಲ್ಲದಕ್ಕೂ ಮೋಸ ಹೋಗಬಾರದು ಮತ್ತು ಕಣದಲ್ಲಿರುವ ಎಲ್ಲಾ ಸಮರ್ಥ ಅಭ್ಯರ್ಥಿಗಳನ್ನು ಪಕ್ಷಪಾತವಿಲ್ಲದೆ ಬೆಂಬಲಿಸಬೇಕು ಎಂದು ಸಿದ್ದರಾಮ ಸ್ವಾಮಿಗಳು ಹೇಳಿದ್ದಾರೆ.

ಬೆಳಗಾವಿ, ಧಾರವಾಡ ಮತ್ತು ಹಾವೇರಿ ಕ್ಷೇತ್ರಗಳಲ್ಲಿ ಲಿಂಗಾಯತ ಮತದಾರರೇ ಹೆಚ್ಚಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಅವರೇ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಬಸವರಾಜ ಬೊಮ್ಮಾಯಿ - ಪ್ರಹ್ಲಾದ್ ಜೋಶಿ - ಜಗದೀಶ್ ಶೆಟ್ಟರ್
ಹಿಂದುಳಿದ ವರ್ಗ, ದಲಿತ ಮತಗಳ ಮೇಲೆ ಬಿಜೆಪಿ ಕಣ್ಣು: ಲಿಂಗಾಯತ ಉಪ ಪಂಗಡಗಳ ಸೆಳೆಯಲು ಕಾಂಗ್ರೆಸ್ ಮುಂದು!

ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಶಿರಹಟ್ಟಿಯ ಭಾವೈಕ್ಯ ಪೀಠದ ದಿಂಗಾಲೇಶ್ವರ ಶ್ರೀಗಳು ಸ್ಪರ್ಧೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಜೋಶಿ ಹಾಗೂ ಯುವ ಕಾಂಗ್ರೆಸ್ ಮುಖಂಡ ವಿನೋದ ಅಸೂಟಿ ನಡುವೆ ನೇರ ಪೈಪೋಟಿ ಕುತೂಹಲ ಮೂಡಿಸಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಲಿಂಗಾಯತೇತರರನ್ನು ಕಣಕ್ಕಿಳಿಸಿದ್ದು, ಜೋಶಿ ಅವರು ಬ್ರಾಹ್ಮಣರಾಗಿದ್ದರೆ, ಅಸೂಟಿ ಕುರುಬ ಸಮುದಾಯಕ್ಕೆ ಸೇರಿದ್ದಾರೆ. ಹೀಗಾಗಿ ಹುಬ್ಬಳ್ಳಿಯಲ್ಲಿ ಲಿಂಗಾಯತ ಸಮುದಾಯದ ಮತಗಳು ಯಾವ ಕಡೆಗೆ ತಿರುಗುತ್ತವೆ ಎಂಬುದು ಕುತೂಹಲ ಮೂಡಿಸಿದೆ.

ಆದರೆ, ಹುಬ್ಬಳ್ಳಿ-ಧಾರವಾಡ ಸಂಸದರಾಗಿ ಐದನೇ ಗೆಲುವು ದಾಖಲಿಸುವ ವಿಶ್ವಾಸದಲ್ಲಿ ಪ್ರಹ್ಲಾದ್ ಜೋಶಿ ಇದ್ದಾರೆ.

ಎರಡೂ ಪಕ್ಷಗಳು ಲಿಂಗಾಯತೇತರರನ್ನು ಕಣಕ್ಕಿಳಿಸಿರುವುದರಿಂದ ಹುಬ್ಬಳ್ಳಿ ಕ್ಷೇತ್ರದಲ್ಲಿ ಲಿಂಗಾಯತರ ಹೆಚ್ಚಾಗಿ ಬಿಜೆಪಿಗೆ ಮತ ಹಾಕಬಹುದು ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮತ್ತು ರಾಜಕೀಯ ವಿಮರ್ಶಕ ಮೋಹನ್ ಕಾತರಕಿ ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿ - ಪ್ರಹ್ಲಾದ್ ಜೋಶಿ - ಜಗದೀಶ್ ಶೆಟ್ಟರ್
ಜೋಶಿಗೆ ಬಿಸಿತುಪ್ಪವಾದ ಸ್ವಾಮೀಜಿ: 30 ವರ್ಷಗಳ ನಂತರ ಮೊದಲ ಬಾರಿಗೆ ಬಿಜೆಪಿಗೆ ಲಿಂಗಾಯತ ಸಮುದಾಯದ ವಿರೋಧ!

ಕಾಂಗ್ರೆಸ್ ಲಿಂಗಾಯತರ ಲಾಭ ಪಡೆಯಲು ಹುಬ್ಬಳ್ಳಿಯ ಲಿಂಗಾಯತ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ, ಹಾವೇರಿಯಲ್ಲಿ ಒಬಿಸಿ ಅಭ್ಯರ್ಥಿಗೆ ಟಿಕೆಟ್ ನೀಡಬೇಕಿತ್ತು. ಹಾವೇರಿ ಮತ್ತು ಬೆಳಗಾವಿಯಲ್ಲಿ ಸಮುದಾಯದ ಮತಗಳು ಎರಡು ಪಕ್ಷಗಳ ನಡುವೆ ವಿಭಜನೆಯಾಗುತ್ತವೆ. ಆದರೆ ಹುಬ್ಬಳ್ಳಿಯಲ್ಲಿ ಜೋಶಿ ಅವರಿಗೆ ಲಾಭವಾಗಲಿದೆ" ಎಂದು ಕಾತರಕಿ ತಿಳಿಸಿದ್ದಾರೆ.

ಗದಗ-ಹಾವೇರಿ ಕ್ಷೇತ್ರದಲ್ಲಿ ಅಷ್ಟೊಂದು ಜನಪ್ರಿಯತೆ ಇಲ್ಲದ ಲಿಂಗಾಯತ ಕಾಂಗ್ರೆಸ್ ಅಭ್ಯರ್ಥಿ ಆನಂದಯ್ಯ ಗಡ್ಡದೇವರಮಠ ಕೂಡ ಬೊಮ್ಮಾಯಿ ವಿರುದ್ಧ ತೀವ್ರ ಪೈಪೋಟಿ ನಡೆಸುವ ನಿರೀಕ್ಷೆ ಇದ್ದು, ಲಿಂಗಾಯತ ಮತಗಳು ಭಾರೀ ವಿಭಜನೆಯಾಗುವ ಸಾಧ್ಯತೆ ಇದೆ. ಬೊಮ್ಮಾಯಿ ಹೆಚ್ಚಿನ ಅಂತರದಿಂದ ಗೆಲ್ಲುತ್ತಾರೆ ಎಂದು ಬಿಜೆಪಿ ನಾಯಕರು ಭಾವಿಸಿದ್ದಾರೆ. ಆದರೆ ಲಿಂಗಾಯತ ಮತಗಳು ವಿಭಜನೆಯಾಗಿ ಮಾಜಿ ಸಿಎಂ ಗೆಲುವಿನ ಅಂತ ಕಡಿಮೆಯಾಗಬಹುದು ಎನ್ನಲಾಗುತ್ತಿದೆ.

ಜಾತಿ ಆಧಾರದ ಮೇಲೆ ಯುವ ಕಾಂಗ್ರೆಸ್‌ನ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಎದುರಿಸುತ್ತಿರುವ ಜಗದೀಶ್ ಶೆಟ್ಟರ್ ಅವರು, ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತ ಅಂಶ ಯಾವುದೇ ಪ್ರಮುಖ ಪಾತ್ರವನ್ನು ವಹಿಸುವುದಿಲ್ಲ ಎಂದಿದ್ದಾರೆ.

ಹಿಂದಿನ ಚುನಾವಣೆಗಳ ಹೋರಾಟದ ರೀತಿಯನ್ನು ನೀವು ನೋಡಿದರೆ, ರಾಷ್ಟ್ರೀಯ ಸಮಸ್ಯೆಗಳು ಇಲ್ಲಿ ಪ್ರಾಮುಖ್ಯತೆಯನ್ನು ಪಡೆದಿವೆ. ಮತದಾರರು ಇತರರಿಗಿಂತ ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಎಂದು ಮಾಜಿ ಸಿಎಂ ಹೇಳಿದ್ದಾರೆ.

ಆದಾಗ್ಯೂ, ಬೆಳಗಾವಿ ಕ್ಷೇತ್ರದಲ್ಲಿ ಲಿಂಗಾಯತ ಮತದಾರರನ್ನು ಸೆಳೆಯಲು ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com