
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಘಟಕ ವತಿಯಿಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿ ಕೆ ಶಿವಕುಮಾರ್, ಸರ್ಕಾರ ಒಂದು ವರ್ಷ ಪೂರೈಸಿದ್ದು ಮುಖ್ಯವಲ್ಲ, ನಾಲ್ಕು ವರ್ಷಗಳಲ್ಲಿ ನನ್ನ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿರುವುದು ಮುಖ್ಯ ಎಂದರು.
ಬೂತ್ ಮಟ್ಟದಲ್ಲಿ ಲೀಡ್ ಕೊಡಿ: ಬೂತ್ ಮಟ್ಟದಲ್ಲಿ ಲೀಡ್ ಕೊಡಬೇಕು, ಇಲ್ಲಾಂದ್ರೆ ಅಧಿಕಾರ ಯಾರೂ ಕೇಳಬಾರದು. ಖಾದಿ ಬಟ್ಟೆ, ಒಂದು ಕಾರ್ ಇಟ್ಕೊಂಡು ಎಂಎಲ್ಎ, ಎಂಎಲ್‌ಸಿ ಮಾಡಿ ಅಂದ್ರೆ ಆಗಲ್ಲ. ಲೀಡ್ ತಂದುಕೊಡಬೇಕು. ಇಲ್ಲಾಂದ್ರೆ ಹೊಸಬರನ್ನ ತಯಾರಿ ಮಾಡ್ತೀವಿ. ಮೂರ್ನಾಲ್ಕು ತಿಂಗಳಲ್ಲಿ ಪ್ಲ್ಯಾನ್ ಆಫ್ ಆಕ್ಷನ್ ರೆಡಿ ಮಾಡ್ತೀವಿ. ಎಲ್ಲದಕ್ಕೂ ತಾವು ತಯಾರಾಗಿರಬೇಕು. ನಾಲ್ಕು ವೋಟ್ ಹಾಕಿಸದೆ ಬಂದು ಸ್ಥಾನ ಕೇಳ್ತಿರಾ ಎಂದು ಗರಂ ಆದರು.
ಬೂತ್ ಮಟ್ಟದಲ್ಲಿ ಸಂಘಟನೆ ಮಾಡಿ. ಬೂತ್ ಲೀಡ್ ಕೊಡಿಸಿ ಬಂದು ನಾಯಕತ್ವ ಕೇಳಿ. ಇಲ್ಲದೆ ಹೊದ್ರೆ ನಾಯಕತ್ವ ಕೊಡಲ್ಲ. ಬಿಳಿ ಜುಬ್ಬಾ, ಬಿಳಿ ಕಾರು ತೆಗೆದುಕೊಂಡು ಬಂದು ಸ್ಥಾನ ಕೇಳೋದಲ್ಲ. ಮೊದಲು ಸಂಘಟನೆ ಮಾಡಿ, ಇಲ್ಲ ಜಾಗ ಖಾಲಿ ಮಾಡಿ. ನಾವು ಹೊಸ ನಾಯಕತ್ವ ಬೆಳೆಸುತ್ತೇವೆ. ನಾನು ಸದ್ಯ ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಇನ್ನೂ ಎಷ್ಟು ದಿನ ಇರ್ತೇನೆ ಅನ್ನುವುದು ಗೊತ್ತಿಲ್ಲ. ನಮ್ಮ ಪಕ್ಷದ ನಾಯಕತ್ವ ಬುನಾದಿ ಗಟ್ಟಿ ಮಾಡಬೇಕು. ಬೂತ್ ಮಟ್ಟದಲ್ಲಿ ಗಟ್ಟಿ ಮಾಡಬೇಕು ಎಂದು ಕರೆ ನೀಡಿದರು.
ಬಿಬಿಎಂಪಿ ಎಲೆಕ್ಷನ್ ಬಗ್ಗೆ ಈಗ ಚರ್ಚೆ ಬೇಡ. ಇನ್ನೂ ಟೈಮ್ ಇದೆ. ರಾಜೀವ್ ಗಾಂಧಿ ತಂದ ತಿದ್ದುಪಡಿಯಿಂದಲೇ ಸ್ಥಳೀಯ ಸಂಸ್ಥೆಗಳಿಗೆ ಎಲೆಕ್ಷನ್ ನಡೀತಿರೋದು. ಇದಕ್ಕೆಲ್ಲಾ ನೀವು ತಯಾರಿ ಮಾಡಿಕೊಳ್ಳಬೇಕು. ಎಂಪಿ ಎಲೆಕ್ಷನ್‌ನಲ್ಲಿ ಗೆದ್ವೋ ಸೋತ್ವೋ ಮುಖ್ಯವಲ್ಲ. ಎಲ್ಲಾ ಸೆಲ್‌ಗಳಲ್ಲಿ ಲೀಡರ್‌ಗಳು ಆ್ಯಕ್ಟೀವ್ ಆಗಿರಬೇಕು. ಇಲ್ಲಾಂದ್ರೆ ಡಿಸಾಲ್ವ್ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ಹುಟ್ಟಿಸಿದರು.
Advertisement