ಪರಂಪರೆ ಮುಂದುವರಿಸಿದ ನಿಖಿಲ್: ಕಣ್ಣೀರು ಹಾಕುವುದು ನಾಯಕನ ಲಕ್ಷಣವಲ್ಲ, ಇದು ರಾಜಕೀಯ ಗಿಮ್ಮಿಕ್- ಯೋಗೇಶ್ವರ್

ಒಬ್ಬ ವ್ಯಕ್ತಿ ಯುದ್ಧದಲ್ಲಿ ಸೋಲುತ್ತಿರುವಾಗ ಅವನ ಕೊನೆ ಅಸ್ತ್ರವೇ ಕಣ್ಣೀರು. ಒಬ್ಬ ನಾಯಕ ಜನರ ಕಣ್ಣೀರು ಒರೆಸಬೇಕೇ ಹೊರತು ಕಣ್ಣೀರು ಹಾಕಬಾರದು ಎಂದು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವ್ ಕಿಡಿ ಕಾರಿದ್ದಾರೆ.
nikhil and yogeeshwar
ನಿಖಿಲ್ ಮತ್ತು ಯೋಗೇಶ್ವರ್
Updated on

ಬೆಂಗಳೂರು: ಚನ್ನಪಟ್ಟಣದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗುರುವಾರ ಕನ್ನಮಂಗಲದಲ್ಲಿ ರೋಡ್‌ಶೋನಲ್ಲಿ ಕಣ್ಣೀರು ಹಾಕಿರುವುದು ಕಾಂಗ್ರೆಸ್ ಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ.

ಒಬ್ಬ ವ್ಯಕ್ತಿ ಯುದ್ಧದಲ್ಲಿ ಸೋಲುತ್ತಿರುವಾಗ ಅವನ ಕೊನೆ ಅಸ್ತ್ರವೇ ಕಣ್ಣೀರು. ಒಬ್ಬ ನಾಯಕ ಜನರ ಕಣ್ಣೀರು ಒರೆಸಬೇಕೇ ಹೊರತು ಕಣ್ಣೀರು ಹಾಕಬಾರದು ಎಂದು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವ್ ಕಿಡಿ ಕಾರಿದ್ದಾರೆ. ನಿಖಿಲ್ ಕುಮಾರಸ್ವಾಮಿ ಈಗ ತಾನೆ ನನ್ನ ತಾಲೂಕಿಗೆ ಬಂದಿದ್ದಾರೆ. ಕ್ಷೇತ್ರದ ಜೊತೆ ಯಾವುದೇ ಸಂಬಂಧವಿಲ್ಲ. ಏನೂ ಪರಿಚಯವಿಲ್ಲದೆ ಇಲ್ಲಿ ಕಣ್ಣೀರಿಡುವುದು ಪೊಲಿಟಿಕಲ್ ಗಿಮಿಕ್.​ ಯಾವುದೇ ಅಭ್ಯರ್ಥಿ ಕಣ್ಣೀರು ಹಾಕಿ ಮತದಾರರ ಮನಸ್ಸು ಗೆಲ್ಲಲು ಆಗಲ್ಲ. ಅವರ ತಂದೆ ಮಾಡಿದ ಅವ್ಯವಸ್ಥೆಗೆ ಸಾವಿರಾರು ಜನ ಕಣ್ಣೀರಾಕುತ್ತಿದ್ದಾರೆ. ಕಣ್ಣೀರಿಡುವುದು ಒಬ್ಬ ನಾಯಕನ ಗುಣವಲ್ಲ ಎಂದು ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಎರಡು ಬಾರಿ ಗೆದ್ದು ಮುಖ್ಯಮಂತ್ರಿಯಾಗಿದ್ದರೂ ಕೊಟ್ಟ ಭರವಸೆ ಈಡೇರಿಸದ ತಂದೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ದುರಾಡಳಿತಕ್ಕೆ ನಿಖಿಲ್ ಬೆಲೆ ತೆರುತ್ತಿದ್ದಾರೆ ಎಂದು ಯೋಗೇಶ್ವರ ಹೇಳಿದರು. ನಾನು ಎರಡು ಚುನಾವಣೆಗಳಲ್ಲಿ ಒಂದರ ಹಿಂದೊಂದರಂತೆ ಸೋತಿದ್ದೇನೆ (2019 ರಲ್ಲಿ ಮಂಡ್ಯ ಲೋಕಸಭಾ ಚುನಾವಣೆ ಮತ್ತು 2023 ರಲ್ಲಿ ರಾಮನಗರ). ನಾನೇನು ತಪ್ಪು ಮಾಡಿದೆ? ಮಾಜಿ ಮುಖ್ಯಮಂತ್ರಿಯ ಮಗನಾಗಿ ಮತ್ತು ಮಾಜಿ ಪ್ರಧಾನಿಯ ಮೊಮ್ಮಗನಾಗಿ ಹುಟ್ಟಿದ್ದು ತಪ್ಪೇ? ಜನರು ನನಗೆ ಮತ ಹಾಕಿದ್ದಾರೆ, ಆದರೆ ಕಾಂಗ್ರೆಸ್ ನನ್ನನ್ನು ಸೋಲಿಸಲು ಷಡ್ಯಂತ್ರ ಮಾಡಿದೆ ಎಂದು ಹೇಳಿ ನಿಖಿಲ್ ಕಣ್ಣೀರು ಹಾಕಿದ್ದರು. ಚನ್ನಪಟ್ಟಣದಲ್ಲಿ ಜನಿಸಿದ ಯೋಗೇಶ್ವರ ಅವರು ನೀರಾವರಿ ಯೋಜನೆಗಳಲ್ಲಿ ಕೆಲಸ ಮಾಡಿದರೂ ಕುಮಾರಸ್ವಾಮಿ ವಿರುದ್ಧ ಎರಡು ಬಾರಿ ಸೋತಿದ್ದಾರೆ. ನಿಖಿಲ್ ಇನ್ನೂ ಹುಡುಗ ಕೃಷಿ ಸಚಿವ ಚಲವರಾಯಸ್ವಾಮಿ ಹೇಳಿದ್ದಾರೆ. ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ಚುನಾವಣಾ ಸಮಯದಲ್ಲಿ ತಮ್ಮ ತಂದೆ ಮತ್ತು ತಾತ ಏನು ಮಾಡುತ್ತಾರೋ ಅದನ್ನೇ ನಿಖಿಲ್ ಮಾಡಿದ್ದಾರೆ. "ಅದೇ ರಕ್ತಸಂಬಂಧ," ಅವರು ಲೇವಡಿ ಮಾಡಿದರು.

nikhil and yogeeshwar
ಮಾಜಿ ಪ್ರಧಾನಿ ಮೊಮ್ಮಗ, ಮಾಜಿ ಸಿಎಂ ಮಗನಾಗಿ ಹುಟ್ಟಿರುವುದೇ ನನ್ನ ದುರದೃಷ್ಟ: ಕಣ್ಣೀರಿಟ್ಟ ನಿಖಿಲ್ ಕುಮಾರಸ್ವಾಮಿ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com