Nikhil Kumaraswamy
ನಿಖಿಲ್ ಕುಮಾರಸ್ವಾಮಿ

ಜೊತೆಯಲ್ಲಿದ್ದುಕೊಂಡೆ ಬೆನ್ನಿಗೆ ಚೂರಿ ಹಾಕಿದರು; ಕಳೆದ ಚುನಾವಣೆಗಳ ಸೋಲಿಗೆ ಕಾಂಗ್ರೆಸ್ ಪಿತೂರಿ ಕಾರಣ: ನಿಖಿಲ್ ಕುಮಾರಸ್ವಾಮಿ (ಸಂದರ್ಶನ)

Published on

ಸತತ ಎರಡು ಬಾರಿ ಸೋಲಿನ ರುಚಿ ಕಂಡಿರುವ ನಿಖಿಲ್ ಕುಮಾರಸ್ವಾಮಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ವಿರುದ್ಧ ಕಣಕ್ಕಿಳಿದಿದ್ದಾರೆ. ರಾಜಕೀಯ ಜಿದ್ದಾಜಿದ್ದಿಗೆ ಹೆಸರುವಾಸಿಯಾಗಿರುವ ಚನ್ನಪಟ್ಟಣ ಕ್ಷೇತ್ರದಲ್ಲಿ ಹಲವು ಘಟಾನುಘಟಿಗಳು ಏಳು -ಬೀಳು ಕಂಡಿದ್ದಾರೆ. ವಾರದ ವರೆಗೂ ಕ್ಷೇತ್ರದಲ್ಲಿ ಸಿಪಿ ಯೋಗೇಶ್ವರ್ ಪರ ವ್ಯಾಪಕ ಅಲೆಯಿದ್ದಿತು. ಆದರೆ ಯಾವಾಗ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಎಂಟ್ರಿಯಾಯಿತೋ ಅಲ್ಲಿಂದ ಕ್ಷೇತ್ರದ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿದೆ. ಇದರ ನಡುವೆ ಎನ್ ಡಿ ಅಭ್ಯರ್ಥಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗ ನೀಡಿದ ಸಂದರ್ಶನದಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

Q

ಜನರ ಪ್ರತಿಕ್ರಿಯೆ ಹೇಗಿದೆ?

A

ಮಹಿಳೆಯರು ಮತ್ತು ಯುವಕರು ಸೇರಿದಂತೆ ಎಲ್ಲಾ ವರ್ಗದ ಜನರು ನನ್ನನ್ನು ತಲುಪುತ್ತಿರುವುದು ನನ್ನ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ. ನನ್ನ ಗೆಲುವಿಗಾಗಿ ಎರಡೂ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಎನ್‌ಡಿಎ ಮೈತ್ರಿ ಕೆಲಸ ಮಾಡಿದೆ.

ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿಕೆ ಸುರೇಶ್ ಅವರು ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ, ಅವರ ಸಹಾಯ ಪಡೆದು ಯೋಗೇಶ್ವರ್ ಎನ್‌ಡಿಎ ಟಿಕೆಟ್ ತಿರಸ್ಕರಿಸಿದರು. ಚನ್ನಪಟ್ಟಣ ಎಚ್‌ಡಿ ಕುಮಾರಸ್ವಾಮಿ ಅವರ ಸ್ವಂತ ಕ್ಷೇತ್ರ. ಬಿಜೆಪಿ ಅವರನ್ನು (ಯೋಗೇಶ್ವರ) ಎಂಎಲ್‌ಸಿ ಮಾಡಿತ್ತು, ಜೆಡಿಎಸ್ ಟಿಕೆಟ್ ನೀಡಿದ್ದೆವು ಮತ್ತು ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಲು ನಾವು ಅವಕಾಶ ನೀಡಿದ್ದೆವು, ಆದರೆ ಅವರು ಕಾಂಗ್ರೆಸ್ ಸೇರಿದರು. ಅವರ ರಾಜಕೀಯ ಭವಿಷ್ಯವನ್ನು ಜನ ನಿರ್ಧರಿಸುತ್ತಾರೆ.

Q

ದೇವೇಗೌಡರ ಕುಟುಂಬವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಅನ್ನಿಸುತ್ತಿದೆಯೇ?

A

ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ನೀಡಿಲ್ಲ. ಮೂರು ಬಾರಿ ಬೆಂಗಳೂರು ಗ್ರಾಮಾಂತರ ಸಂಸದರಾಗಿದ್ದ ಡಿ.ಕೆ.ಸುರೇಶ್ ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ, ಆದರೆ ನಮ್ಮ ಕುಟುಂಬವನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಆದರೆ ನನ್ನ ಇಡೀ ಪ್ರಚಾರದ ಅವಧಿಯಲ್ಲಿ ಕ್ಷೇತ್ರದ ಸಮಸ್ಯೆಗಳು ಮತ್ತು ಎಚ್‌ಡಿ ಕುಮಾರಸ್ವಾಮಿ ಅವರ ಕೊಡುಗೆಗಳ ಕುರಿತು ನಾನು ಭಾಷಣ ಮಾಡಿದ್ದೇನೆ

Q

ಇಗ್ಗಲೂರು ಬ್ಯಾರೇಜ್ ಅನುಷ್ಠಾನಕ್ಕೂ ಎಚ್‌ಡಿ ದೇವೇಗೌಡರಿಗೂ ಯಾವುದೇ ಸಂಬಂಧವಿಲ್ಲ ಎಂದು ಯೋಗೇಶ್ವರ್ ಹೇಳಿದ್ದಾರಲ್ಲ?

A

ದೇವೇಗೌಡರು ಸ್ಥಳ ಪರಿಶೀಲನೆ ನಡೆಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗೌಡರ ಪ್ರಮುಖ ಪಾತ್ರಕ್ಕೆ ಸಾಕ್ಷಿಯಾಗಿರುವ ಆ ಚಿತ್ರವನ್ನು ಅಮೂಲ್ಯವಾಗಿಟ್ಟುಕೊಂಡ ವ್ಯಕ್ತಿಗೆ ಹ್ಯಾಟ್ಸ್ ಆಫ್.

Q

ನಿಮ್ಮ ಪ್ರತಿಸ್ಪರ್ಧಿ ಯೋಗೇಶ್ವರ ಅವರು ನಿಮ್ಮನ್ನು ಹೊರಗಿನವರು ಎಂಬ ಹಣೆಪಟ್ಟಿ ಕಟ್ಟುತ್ತಿದ್ದಾರೆ...?

A

ನನ್ನ ತಾತ ಮತ್ತು ಕುಟುಂಬದವರು ಚನ್ನಪಟ್ಟಣ ಸೇರಿದಂತೆ ರಾಮನಗರ ಜಿಲ್ಲೆಯೊಂದಿಗೆ ನಾಲ್ಕು ದಶಕಗಳ ಬಾಂಧವ್ಯ ಹೊಂದಿದ್ದು, ಅಪಾರ ಕೊಡುಗೆ ನೀಡಿದ್ದಾರೆ. ಇದು ಮತದಾರರನ್ನು ವಿಭಜಿಸಲು ಆಡಿದ ತಂತ್ರ. ಇದು ವಿಫಲಗೊಳ್ಳುತ್ತದೆ. ನನ್ನ ತಂದೆ ಎರಡು ಬಾರಿ ಸೀಟು ಗೆದ್ದಿಲ್ಲವೇ?

Q

ಜನರು ನಿಮ್ಮನ್ನು ಏಕೆ ಆರಿಸಬೇಕು?

A

ಕಾಂಗ್ರೆಸ್‌ನ ಷಡ್ಯಂತ್ರದಿಂದ ನಾನು ಎರಡು ಚುನಾವಣೆಯಲ್ಲಿ ಸೋತಿದ್ದೇನೆ. ಜನರು ನನಗೆ ಸೇವೆ ಮಾಡಲು ಅವಕಾಶ ನೀಡುತ್ತಾರೆ ಮತ್ತು ಯುವಕರಿಗೆ ಉದ್ಯೋಗವನ್ನು ಸೃಷ್ಟಿಸುವ ಮೂಲಕ ನಾನು ಅವರನ್ನು ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ . ಮಂಡ್ಯದಲ್ಲಿ ಕುಮಾರಸ್ವಾಮಿ ನಡೆಸಿದ ಉದ್ಯೋಗ ಮೇಳದಿಂದ 1200 ಅಭ್ಯರ್ಥಿಗಳಿಗೆ ಆಫರ್ ಲೆಟರ್ ಸಿಕ್ಕಿದೆ. ಕೇಂದ್ರದ ಉಕ್ಕು ಮತ್ತು ಕೈಗಾರಿಕೆ ಸಚಿವರಾಗಿ ರಾಮನಗರ ಮತ್ತು ಚನ್ನಪಟ್ಟಣ ನಡುವೆ ಕೈಗಾರಿಕೆ ಸ್ಥಾಪಿಸುವ ಯೋಜನೆ ನನ್ನ ತಂದೆಯವರಿಗಿದೆ.

X

Advertisement

X
Kannada Prabha
www.kannadaprabha.com