ಕುಮಾರಸ್ವಾಮಿಗೆ 'ಕರಿಯಾ' ಎಂದಿದ್ದಕ್ಕೆ ಜಮೀರ್ ಅಹ್ಮದ್ ಖಾನ್ ಕ್ಷಮೆಯಾಚನೆ
ಮೈಸೂರು: ಕೇಂದ್ರ ಸಚಿವ ಮತ್ತು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರನ್ನು 'ಕಾಲಿಯಾ' ಎಂದು ಕರೆದಿದ್ದ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್ ಅವರು ಮಂಗಳವಾರ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
ಜಮೀರ್ ಅಹ್ಮದ್ ಖಾನ್ ಅವರ ಕಾಲಿಯಾ ಹೇಳಿಕೆಯನ್ನು ಎನ್‌ಡಿಎ "ಜನಾಂಗೀಯ" ನಿಂದನೆ ಎಂದು ಟೀಕಿಸಿತ್ತು.
ವಸತಿ ಮತ್ತು ವಕ್ಫ್ ಸಚಿವರು ಜಮೀರ್ ಅಹ್ಮದ್ ಖಾನ್ ಅವರು ಈ ಹಿಂದೆ JD(S)ನಲ್ಲಿದ್ದರು ಮತ್ತು ಆ ಸಮಯದಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಕುಮಾರಸ್ವಾಮಿಯವರಿಗೆ ಅತ್ಯಂತ ಆಪ್ತರಾಗಿದ್ದರು.
ಪ್ರೀತಿಯಿಂದ ಅವರು ನನ್ನನ್ನು 'ಕುಳ್ಳ' ಎಂದು ಕರೆಯುತ್ತಿದ್ದರು. ನಾನು ಅವರನ್ನು ಕರಿಯಣ್ಣ ಎಂದು ಕರೆಯುತ್ತಿದ್ದೆ. ನನ್ನ ಹೇಳಿಕೆಯಿಂದ ಜೆಡಿಎಸ್ ಕಾರ್ಯಕರ್ತರಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ" ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ಪ್ರೀತಿಯಿಂದ ಹಾಗೆ ಕರೆಯುತ್ತಿದ್ದೆ. ಅವರು ಕುಳ್ಳ ಎಂದು ಕರೆಯುತ್ತಿದ್ದರು. ನಾನು ಕರಿಯಣ್ಣ ಎಂದು ಕರೆಯುತ್ತಿದ್ದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯ ಮೇಲೆ ಅವರ ಹೇಳಿಕೆ ಪ್ರಭಾವ ಬೀರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಖಾನ್, "ಅದು ಏಕೆ ಪರಿಣಾಮ ಬೀರುತ್ತದೆ? ನಾನು ಮೊದಲ ಬಾರಿಗೆ ಹಾಗೆ ಕರೆದಿಲ್ಲ. ಕುಮಾರಸ್ವಾಮಿ ಮತ್ತು ನಾನು ಆಪ್ತರಾಗಿದ್ದಾಗ ಅವರು ನನ್ನನ್ನು ‘ಕುಳ್ಳ’ ಎಂದು ಕರೆಯುತ್ತಿದ್ದರು ಎಂದರು.
"ಜನಾಂಗೀಯ ನಿಂದನೆ" ಗಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಜೆಡಿ(ಎಸ್) ಮತ್ತು ಬಿಜೆಪಿ ಒತ್ತಾಯಿಸಿದ್ದವು.