ಅಪ್ಪಾ ನಿಖಿಲಾ, ಸಾಬ್ರ ಓಟಿನಿಂದಲೇ ನಿಮ್ಮಪ್ಪ CM ಆಗಿದ್ದು; ನಿಮ್ಮಜ್ಜ, ನಿಮ್ಮಪ್ಪನ್ನ 'ಶಾ' ಹತ್ತಿರ ಕರ್ಕೊಂಡು ಹೋಗಿದ್ದು ನೀನೆ ಅಲ್ವೇನಪ್ಪಾ?

ನಿನಗೆ ಇರೋ ಬಂಡವಾಳ ನಿಮ್ಮಜ್ಜ. ನಿಮ್ಮಜ್ಜನವರಿಗೆ ಇದ್ದಿದ್ದು ಸಿದ್ದಾಂತ ಅದನ್ನ ಬಲಿಕೊಡಿಸಿದ್ರಿ. ಅಹಿಂದ ದಲಿತ ಮತ ಇಲ್ವಾ ? ನಿಮ್ಮ ದೌರ್ಬಲ್ಯ ಮುಚ್ಚಿಕೊಳ್ಳೊಕೆ ಯಾಕೆ ಮುಸ್ಲಿಮರ ಮೇಲೆ ಅಪಾದನೆ ಮಾಡುತ್ತೀರಾ ಎಂದು ಕಿಡಿಕಾರಿದರು.
Nikhil Kumaraswamy
ನಿಖಿಲ್ ಕುಮಾರಸ್ವಾಮಿ
Updated on

ಬೆಂಗಳೂರು: ಅಪ್ಪಾ ನಿಖಿಲಾ, ಎಷ್ಟಿದ್ದಾರಪ್ಪ ಅಲ್ಪಸಂಖ್ಯಾತರು? ರಾಮನಗರದಲ್ಲಿ ನಿಮ್ಮಜ್ಜನಿಗೆ ಅಲ್ಪಸಂಖ್ಯಾತರು ಮತ ಕೊಟ್ಟಿದ್ದಕ್ಕೆ ಸಿಎಂ ಆಗಿದ್ದು. ಪ್ರಧಾನಿಯಾಗಲು ಅಲ್ಪಸಂಖ್ಯಾತರ ಕೊಡುಗೆ ಇದೆ ಎಂದು ನಿಖಿಲ್ ಕುಮಾರಸ್ವಾಮಿಗೆ ಸಿ.ಎಂ ಇಬ್ರಾಹಿಂದ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ ಒಂದು ಸಮುದಾಯ ನಮ್ಮನ್ನು ಕೈ ಹಿಡಿಯಲಿಲ್ಲ ಎಂದು ಪರೋಕ್ಷವಾಗಿ ತಮ್ಮ ಸೋಲಿಗೆ ಮುಸ್ಲಿಂ ಸಮುದಾಯದ ಮತಗಳು ಬರದಿರುವುದೇ ಕಾರಣವೆಂದು ನಿಖಿಲ್​ ಹೇಳಿಕೆಗೆ ಇಬ್ರಾಹಿಂ ಟಾಂಗ್ ನೀಡಿದ್ದಾರೆ. ನಿಮ್ಮಪ್ಪ(ಕುಮಾರಸ್ವಾಮಿ) ಸಾಬ್ರ ಮತಗಳಿಂದಲೇ ಗೆದ್ದು ಸಿಎಂ ಆಗಿದ್ದು. ನಾನಿದ್ದಾಗ ಕುಮಾರಸ್ವಾಮಿ 25 ಸಾವಿರ ಮತಗಳಿಂದ ಗೆಲ್ಲಿಸಿದ್ರು, ಈಗ ನಿಖಿಲ್ ಕುಮಾರಸ್ವಾಮಿಯನ್ನು 20 ಸಾವಿರ ಮತಗಳಿಂದ ಸೋಲಿಸಿದ್ದಾರೆ. ಚನ್ನಪಟ್ಟಣದಲ್ಲಿ ಮುಸ್ಲಿಮರು ವೋಟು ಕೊಟ್ಟಾಗ ನಿಮ್ಮಜ್ಜ ಸಿಎಂ ಆದ್ರು, 16 ಜನ ಸಂಸದರಾದಾಗ ಪಿಎಂ ಆದ್ರು. ಆಗ ನೀನು ಇನ್ನೂ ಹುಟ್ಟಿರಲಿಲ್ಲ, ಬೆಳೆಯೋ ಹುಡುಗ ನೀನು. ಸುದ್ದಿಗೋಷ್ಠಿ ನೋಡಿ ಅಯ್ಯೋ ಅನಿಸಿತು, ಚಿಕ್ಕವಯಸ್ಸಿಗೆ ಹೀಗೆ ಆಗಬಾರದಿತ್ತು ಎಂದು ನಿಖಿಲ್​ ಗೆ ತಿವಿದಿದ್ದಾರೆ.

ನಿಮ್ಮಜ್ಜ, ನಿಮ್ಮಪ್ಪನ ಅಮಿತ್ ಶಾ ಹತ್ತಿರ ಕರೆದುಕೊಂಡು ಹೋಗಿದ್ದು ನೀನೆ ಅಲ್ವೇನಪ್ಪಾ? ನಾನು ಅಧ್ಯಕ್ಷ ಇದ್ದಾಗ ನನಗೆ ಹೇಳದೇ ಹೋಗಿದ್ರಿ, ಯೋಗೇಶ್ವರ್ ಲೊಕಲ್ ಅಭ್ಯರ್ಥಿ. ಆತ ಒಕ್ಕಲಿಗ ಜನಾಂಗದವರಾಗಿದ್ದಾರೆ. ನಿನಗೆ ಇರೋ ಬಂಡವಾಳ ನಿಮ್ಮಜ್ಜ. ನಿಮ್ಮಜ್ಜನವರಿಗೆ ಇದ್ದಿದ್ದು ಸಿದ್ದಾಂತ ಅದನ್ನ ಬಲಿಕೊಡಿಸಿದ್ರಿ. ಅಹಿಂದ ದಲಿತ ಮತ ಇಲ್ವಾ ? ನಿಮ್ಮ ದೌರ್ಬಲ್ಯ ಮುಚ್ಚಿಕೊಳ್ಳೊಕೆ ಯಾಕೆ ಮುಸ್ಲಿಮರ ಮೇಲೆ ಅಪಾದನೆ ಮಾಡುತ್ತೀರಾ ಎಂದು ಕಿಡಿಕಾರಿದರು. ಜಿಟಿ ದೇವೇಗೌಡರು ಇವತ್ತು ಸತ್ಯವನ್ನ ನುಡಿದಿದ್ದಾರೆ ಜಿಟಿಡಿ ನಮ್ಮ ಪಾರ್ಟಿಗೆ ಬಂದಿರಲಿಲ್ಲ ನಾನೇ ಅವರ ಮನೆಗೆ ನಿಮ್ಮಜ್ಜನ ಕರ್ಕೊಂಡು ಹೋಗಿದ್ದು. ಇನ್ನು ಚುನಾವಣೆಯಲ್ಲಿ 60 ಬರಬೇಕಿದ್ದ ಸೀಟು, 19 ಬಂತು. ನಿಮ್ಮಪ್ಪ ಚುನಾವಣಾ ಪೂರ್ವದಲ್ಲಿ ಅಮಿತ್ ಶಾ ಜೊತೆ ಮಾತಾಡಿದ್ದು ಗೊತ್ತಾಗಿ ಕಡಿಮೆ ಬಂತು. ನಿಮ್ಮಪ್ಪ ಗೆದ್ದಿದ್ದು ಸಾಬರ ವೋಟಿಂದ ಅನ್ನೋದು ಗೊತ್ತಾಯ್ತು. ಒಂದು ಸಮುದಾಯದವರು ಕೊಟ್ಟಿಲ್ಲಾ ಅಂತ ಮಗ ಹೇಳಿದ್ದಾರೆ. ಯೋಗಿಶ್ವರ್‌ಗೆ ಬಂದಿದ್ದು 1.05 ವೋಟ್. ಇದರಲ್ಲಿ ಅಹಿಂದ, ದಲಿತ ಮತ ಇಲ್ವಾ? ನಿಮ್ಮ ದೌರ್ಬಲ್ಯ ಮುಚ್ಚಿಕೊಳ್ಳೊಕೆ ಯಾಕೆ ಮುಸ್ಲಿಮರ ಮೇಲೆ ಅಪಾದನೆ ಮಾಡ್ತಿರಾ? ಅಂತ ಇಬ್ರಾಹಿಂ ಗುಡುಗಿದ್ರು. ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಮಂತ್ರಿ ಆದರೆ ಏನ್ ಪ್ರಯೋಜನವಾಯ್ತು? ಭದ್ರಾವತಿ ಸ್ಟೀಲ್ ಫ್ಯಾಕ್ಟರಿ ಪುನಃ ತೆರೆಯಲಾಯ್ತಾ? ಹೆಸರಿಗಷ್ಟೇ ಮಂತ್ರಿ ಗಿರಿ, ಆದ್ರೆ ನಿಸ್ಸಹಾಯಕ. ಪ್ರೈವೇಟ್ ಸೆಕ್ರೆಟರಿ ಇಟ್ಕೊಳ್ಳೋಕೂ ಸ್ವಾತಂತ್ರ್ಯ ಇಲ್ಲ. ಬರೀ ಗೋಯಿಂಗ್, ಕಮಿಂಗ್ ಅಷ್ಟೇ ಎಂದು ಕುಮಾರಸ್ವಾಮಿ ವಿರುದ್ದ ವ್ಯಂಗ್ಯವಾಡಿದರು.

Nikhil Kumaraswamy
ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶ: ನಿಖಿಲ್ ಸೋಲಿನ ಚರ್ಚೆಯಿಂದ ದೂರ ಉಳಿದ ಹೆಚ್.ಡಿ ದೇವೇಗೌಡ!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com