ಎಲ್ಲ ನ್ಯಾಯಾಲಯಗಳಿಗಿಂತಲೂ ಆತ್ಮಸಾಕ್ಷಿ ದೊಡ್ಡದು: ಮಹಾತ್ಮ ಗಾಂಧಿ ಮಾತು ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ

"ಪ್ರಸ್ತುತ ಹೋರಾಟ"ದಲ್ಲಿ ಗಾಂಧಿಯವರ ಜೀವನ ಮತ್ತು ಆಲೋಚನೆಗಳು ನನಗೆ ಧೈರ್ಯ, ಶಕ್ತಿ ಮತ್ತು ಭರವಸೆಯನ್ನು ನೀಡಿವೆ ಎಂದು ಸಿಎಂ ಹೇಳಿದರು.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಬೆಂಗಳೂರು: ಮುಡಾ ಸೈಟು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಡಿ ಮತ್ತು ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಮಹಾತ್ಮ ಗಾಂಧಿ ಅವರ ಮಾತನ್ನು ಉಲ್ಲೇಖಿಸಿ, "ಆತ್ಮಸಾಕ್ಷಿಯ ನ್ಯಾಯಾಲಯ" ಎಲ್ಲಾ ನ್ಯಾಯಾಲಯಗಳಿಗಿಂತ ದೊಡ್ಡದು ಎಂದು ಹೇಳಿದ್ದಾರೆ.

ಇಂದು ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ಪ್ರಸ್ತುತ ಹೋರಾಟ"ದಲ್ಲಿ ಗಾಂಧಿಯವರ ಜೀವನ ಮತ್ತು ಆಲೋಚನೆಗಳು ನನಗೆ ಧೈರ್ಯ, ಶಕ್ತಿ ಮತ್ತು ಭರವಸೆಯನ್ನು ನೀಡಿವೆ ಎಂದು ಹೇಳಿದರು.

“ನಮ್ಮ ಎಲ್ಲಾ ನ್ಯಾಯಾಲಯಗಳಿಗಿಂತ ಅತ್ಯುನ್ನತ ನ್ಯಾಯಾಲಯವೊಂದಿದೆ. ಅದು ಆತ್ಮಸಾಕ್ಷಿಯ ನ್ಯಾಯಾಲಯ. ಅದು ಇತರ ಎಲ್ಲ ನ್ಯಾಯಾಲಯಗಳನ್ನು ಮೀರಿಸುತ್ತದೆ ಎಂದು ಮಹಾತ್ಮ ಗಾಂಧಿಜಿ ಹೇಳಿದ್ದರು.... ಕೆಲವೊಮ್ಮೆ ಎಲ್ಲರಿಗೂ ನ್ಯಾಯಾಲಯಗಳಿಂದ ನ್ಯಾಯ ಸಿಗದಿರಬಹುದು. ಆದರೆ ನಾನು ಸ್ಪಷ್ಟವಾಗಿ ಹೇಳಬಲ್ಲೆ, ಗಾಂಧೀಜಿ ಹೇಳಿದಂತೆ ನಾವು ನೋಡುವ ನ್ಯಾಯಾಲಯಗಳು ಈ ಆತ್ಮಸಾಕ್ಷಿಯ ನ್ಯಾಯಾಲಯಕ್ಕಿಂತ ಮೇಲಿರಲು ಸಾಧ್ಯವಿಲ್ಲ" ಎಂದು ಹೇಳಿದರು.

ಸಿದ್ದರಾಮಯ್ಯ
ಮುಡಾ ಹಗರಣ: 14 ನಿವೇಶನಗಳನ್ನು ವಾಪಸ್ ನೀಡುವಂತೆ ಸಿದ್ದರಾಮಯ್ಯ ಪತ್ನಿಗೆ ಸಲಹೆ ನೀಡಿದ್ದು ಕಪಿಲ್ ಸಿಬಲ್!

‘ಇತರರು ಇಷ್ಟ ಪಡಲಿ, ಪಡದಿರಲಿ, ವಿರೋಧಿಸಲಿ, ನಾವೆಲ್ಲರೂ ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಲು ಪ್ರಯತ್ನಿಸಬೇಕು. ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಲು ಪ್ರಯತ್ನಿಸಬೇಕು" ಎಂದು ಸಿಎಂ ಹೇಳಿದರು.

ಮಹಾತ್ಮ ಗಾಂಧಿ ಸತ್ಯ ಮತ್ತು ಅಹಿಂಸಾ ಮಾರ್ಗದಲ್ಲಿ ನಡೆದವರು. ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯ ಅವರ ಹೋರಾಟದ ಫಲ. ಅಂತಹ ಮಹಾತ್ಮ ಹುಟ್ಟಿದ ದೇಶದಲ್ಲಿ ನಾವು ಜನಿಸಿರುವುದು ನಮಗೆ ಹೆಮ್ಮೆಯ ವಿಚಾರ ಎಂದರು.

ಗಾಂಧೀಜಿ ಕೇವಲ ಭಾರತಕಷ್ಟೇ ನಾಯಕರಲ್ಲ ಅವರು ಇಡೀ ವಿಶ್ವಕ್ಕೆ ನಾಯಕ ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್​ ಒಬಾಮ ಹೇಳಿದ್ದಾರೆ. ಗಾಂಧೀಜಿ ಇಂದು ನಮ್ಮ ಜೊತೆ ಇಲ್ಲದಿರಬಹುದು. ಆದರೆ ಅವರ ವಿಚಾರಗಳು ನಮ್ಮ ಜೊತೆ ಯಾವಾಗಲು ಇರುತ್ತವೆ. ಕೆಲವರು ಗಾಂಧೀಜಿ ಅವರನ್ನು ಕೊಂದಿದ್ದಾರೆ. ಆದರೆ ಅವರ ವಿಚಾರಗಳೂ ನಮ್ಮ ಜೊತೆ ಯಾವಾಗಲು ಜೀವಂತವಾಗಿರುತ್ತವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com