
ಬೆಂಗಳೂರು: ಮುಡಾ ಹಗರಣದಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಸರ್ಕಾರ ಹಿಂದುತ್ವವಾದಿ ವಿನಾಯಕ ದಾಮೋದರ್ ಸಾವರ್ಕರ್ ಅವರನ್ನು ಗುರಿಯಾಗಿಸಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಶುಕ್ರವಾರ ಆರೋಪಿಸಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಾವರ್ಕರ್ ಅವರು ಮಾಂಸ ತಿನ್ನುತ್ತಿದ್ದರು ಮತ್ತು ಗೋಹತ್ಯೆಯನ್ನು ವಿರೋಧಿಸಲಿಲ್ಲ ಎಂದು ಬುಧವಾರ ಹೇಳಿದ್ದರು.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ ಅವರು, "ಇದು ನಮ್ಮ ರಾಷ್ಟ್ರನಾಯಕರಿಗೆ ಮಾಡಿದ ದ್ರೋಹ! ಅಧಿಕಾರದ ದುರಾಸೆಯಿಂದ ಕಾಂಗ್ರೆಸ್ ಸರ್ಕಾರ, ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟ ದೇಶಭಕ್ತ ವೀರ್ ಸಾವರ್ಕರ್ ಅವರನ್ನು ಗುರಿಯಾಗಿಸಿರುವುದು ನಾಚಿಕೆಗೇಡಿನ ಸಂಗತಿ ಎದು ಕಿಡಿ ಕಾರಿದ್ದಾರೆ.
ಕೇವಲ ಮುಡಾ ಹಗರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಾವರ್ಕರ್ ಅವರನ್ನು ಟಾರ್ಗೆಟ್ ಮಾಡಲಾಗಿದೆ. ಇದು ಜನರ ದಾರಿತಪ್ಪಿಸುವ ಹತಾಶ ಈ ತಂತ್ರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಕಾಂಗ್ರೆಸ್‌ನ ಭ್ರಷ್ಟ ನಾಯಕರನ್ನು ಹೊಣೆಗಾರರನ್ನಾಗಿ ಮಾಡುವವರೆಗೂ ಬಿಜೆಪಿ ಹೋರಾಟ ನಡೆಸಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
"ಇದು ಕೇವಲ ಸಾವರ್ಕರ್ ಮೇಲಿನ ದಾಳಿಯಲ್ಲ, ನಮ್ಮ ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸುವ ಪ್ರತಿಯೊಬ್ಬ ಭಾರತೀಯನಿಗೆ ಮಾಡಿದ ಅವಮಾನವಾಗಿದೆ. ವೀರ್ ಸಾವರ್ಕರ್ ಸ್ವತಃ ಹೇಳಿದಂತೆ, 'ಸ್ವಾತಂತ್ರ್ಯವನ್ನು ಎಂದಿಗೂ ನೀಡಲಾಗುವುದಿಲ್ಲ. ಅದನ್ನು ಪಡೆಯಬೇಕು. ಯಾವುದೇ ಸುಳ್ಳು ಅಥವಾ ಗೊಂದಲವು ಸತ್ಯವನ್ನು ಮರೆಮಾಚುವುದಿಲ್ಲ. ನಿಮ್ಮ ಭ್ರಷ್ಟ ನಾಯಕರನ್ನು ಹೊಣೆಗಾರರನ್ನಾಗಿ ಮಾಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement