ಮೈಸೂರು: ಹೆಚ್.ಸಿ ಮಹದೇವಪ್ಪ ಭೇಟಿಯಾದ ಸತೀಶ್ ಜಾರಕಿಹೊಳಿ; ರಾಜ್ಯ ರಾಜಕೀಯದಲ್ಲಿ ಸಂಚಲನ

ಸಿಎಂ ಆಗಲು ಯಾರಿಗೆ ತಾನೆ ಇಷ್ಟ ಇರಲ್ಲ. ನನ್ನ ಮಗಳು ಆಸೆ ಪಡುವುದರಲ್ಲಿ ತಪ್ಪೇನಿದೆ. ಕಳೆದ ಐದು ವರ್ಷದಿಂದ ಎಲ್ಲರೂ ಸಿಎಂ ಆಗಬೇಕು ಅಂತಿದ್ದಾರೆ ಸದ್ಯಕ್ಕೆ ಸಿಎಂ ಇದ್ದಾರೆ, ಯಾವ ಬದಲಾವಣೆ ಇಲ್ಲ.
ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
Updated on

ಮೈಸೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ಮೈಸೂರಿಗೆ ಆಗಮಿಸಿದ್ದು ಸಿಎಂ ಆಪ್ತ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರನ್ನು ಭೇಟಿಯಾಗಿದ್ದಾರೆ.

ಇತ್ತೀಚಿಗಷ್ಟೇ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇಂದ್ರ ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಸತೀಶ್ ಜಾರಕಿಹೊಳಿ ಭೇಟಿ ಮಾಡಿದ್ದರು. ದೆಹಲಿ ಭೇಟಿ ನಂತರ ರಾಜ್ಯ ನಾಯಕರುಗಳನ್ನು ಭೇಟಿ ಮಾಡಲಿದ್ದು, ಇಂದು (ಅ.8) ಮೈಸೂರಿನಲ್ಲಿ ಮಹದೇವಪ್ಪ, ಶಾಸಕ ಹರೀಶ್ ಗೌಡ ಸೇರಿ ಹಲವರನ್ನು ಸತೀಶ್ ಜಾರಕಿಹೊಳಿ ಭೇಟಿ ಮಾಡಿದ್ದಾರೆ.

ಸಿಎಂ ಆಗಲು ಯಾರಿಗೆ ತಾನೆ ಇಷ್ಟ ಇರಲ್ಲ. ನನ್ನ ಮಗಳು ಆಸೆ ಪಡುವುದರಲ್ಲಿ ತಪ್ಪೇನಿದೆ. ಕಳೆದ ಐದು ವರ್ಷದಿಂದ ಎಲ್ಲರೂ ಸಿಎಂ ಆಗಬೇಕು ಅಂತಿದ್ದಾರೆ ಸದ್ಯಕ್ಕೆ ಸಿಎಂ ಇದ್ದಾರೆ, ಯಾವ ಬದಲಾವಣೆ ಇಲ್ಲ. ಈವತ್ತು ಮಹದೇವಪ್ಪ ಅವರನ್ನ ಭೇಟಿ ಮಾಡುತ್ತೇನೆ. ಮೈಸೂರು ಭಾಗದ ಶಾಸಕರನ್ನು ಭೇಟಿ ಮಾಡುತ್ತೇನೆ. ನಿನ್ನೆಯಿಂದಲೂ ಹಲವರು ಭೇಟಿ ಮಾಡಿದ್ದಾರೆ. ನಾನು ಸಚಿವನಾಗಿರುವ ಕಾರಣಕ್ಕೆ ಭೇಟಿ ಆಗುತ್ತಾರೆ. ಹಲವರು ನನ್ನನ್ನ ಭೇಟಿ ಮಾಡಿದ್ದಾರೆ ಎಂದರು.

ಸಿದ್ದರಾಮಯ್ಯ ನವರೇ ನಮ್ಮ ಮುಖ್ಯಮಂತ್ರಿ. 5 ವರ್ಷ ಇರುತ್ತಾರೋ 3 ವರ್ಷ ಇರುತ್ತಾರೋ ಅದು ನನಗೆ ಗೊತ್ತಿಲ್ಲ. ಅದನ್ನ ನೀವು ಹೈಕಮಾಂಡ್ ಗೆ ಕೇಳಿ. ಆದರೆ ಸಿದ್ದರಾಮಯ್ಯ ಅವರೇ ನಮ್ಮ ಸಿಎಂ ಅದರಲ್ಲಿ ಬೇರೆ ಯಾವುದೇ ಪ್ರಶ್ನೆಯೂ ಇಲ್ಲ. ನಾನು ಅವರ ಜೊತೆ ಸಚಿವನಾಗಿ ಕೆಲಸ ಮಾಡುತ್ತೇನೆ. ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವಿಸಿಲ್ಲ. ಅಂತ ಚರ್ಚೆಗಳೂ ನಡೆದಿಲ್ಲ. ಪಕ್ಷಗಳು, ಮಾಧ್ಯಮಗಳು ಚರ್ಚೆ ಮಾಡುತ್ತಿವೆ. ವಿಪಕ್ಷ ನಾಯಕರು ಪ್ರೀತಿಯಿಂದ ನಮ್ಮ ಹೆಸರು ಹೇಳುತಿದ್ದಾರೆ. ಆದರೆ ನಮ್ಮಲ್ಲಿ ಅಂತ ಬೆಳವಣಿಗೆ ನಡೆದಿಲ್ಲ. ನಾನು ಈ ವಿಚಾರವನ್ನ ಹಲವು ಬಾರಿ ಸ್ಪಷ್ಟ ಪಡಿಸಿದ್ದೇನೆ. ಅವರವರ ಬೆಂಬಲಿಗರು ಅವರ ನಾಯಕರಿಗೆ ಮುಂದಿನ ಸಿಎಂ ಎಂದು ಜೈಕಾರ ಹಾಕುವುದು ಸರ್ವ ಸಾಮಾನ್ಯ. ಅದನ್ನೇ ಇಟ್ಟುಕೊಂಡು ಏನೋ ಬದಲಾವಣೆ ಆಗುತ್ತದೆ ಎಂದು ಹೇಳುವುದು ಸರಿಯಲ್ಲ ಎಂದರು. ಡಿಕೆಶಿ ವಿಚಾರ, ಮತ್ತೊಬ್ಬರ ವಿಚಾರ ನನಗೆ ಹೇಳಲು ಆಗುವುದಿಲ್ಲ. ರಾಜಕಾರಣಿಗಳು ಸೇರಿದಾಗ ರಾಜಕಾರಣದ ಬಗ್ಗೆ ಚರ್ಚೆ ಮಾಡುತ್ತೇವೆ. ಅದರಲ್ಲಿ ವಿಶೇಷವೇನೂ ಇಲ್ಲ. ಇವತ್ತಿನ ಮೈಸೂರು ಭೇಟಿಯಲ್ಲಿ ಮಹತ್ತರ ವಿಚಾರವಿಲ್ಲ. ಇಡೀ ದಿನ ಮೈಸೂರಲ್ಲಿ ಓಡಾಡಿಕೊಂಡು ದಸರಾ ನೋಡುತ್ತೇನೆ ಅಷ್ಟೇ ಎಂದು ತಿಳಿಸಿದರು.

ಸತೀಶ್ ಜಾರಕಿಹೊಳಿ
'ಪವರ್ ಸೆಂಟರ್' ಆಗಿ ಬದಲಾದ ಸತೀಶ್ ಜಾರಕಿಹೊಳಿ ನಿವಾಸ: ಕುತೂಹಲ ಮೂಡಿಸಿದ ಬಿ.ವೈ ವಿಜಯೇಂದ್ರ ಭೇಟಿ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com