
ಬೆಂಗಳೂರು: ರಾಜ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಟ್ವೀಟ್ ವಾರ್ ಜೋರಾಗಿ ನಡೆಯುತ್ತಿದೆ. ಜೆಡಿಎಸ್ ನಾಯಕನ ಬಗ್ಗೆ ಕಾಂಗ್ರೆಸ್ ಆರೋಪಗಳನ್ನು ಮಾಡುತ್ತಿದೆ. ಮತ್ತೊಂದೆಡೆ ಜೆಡಿಎಸ್ ಕೂಡ ಕಾಂಗ್ರೆಸ್ ನಾಯಕನ ಬಗ್ಗೆ ಗಂಭೀರ ಆರೋಪಗಳನ್ನು ಮಾಡಲಾರಂಭಿಸಿದೆ. ಇಬ್ಬರ ಕಿತ್ತಾಟ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.
ಈ ಸಂಬಂಧ ಎಕ್ಸ್ ಖಾತೆಯಲ್ಲಿ ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಘಟಕ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದೆ. ಕುಮಾರಸ್ವಾಮಿ ಅವರ ಪುರಾಣವನ್ನು ಜೆಡಿಎಸ್ ಪಕ್ಷದವರೇ ಬಿಚ್ಚಿಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿದೆಯೇ? ಹಿಟ್ ಅಂಡ್ ರನ್ ಜಾಯಮಾನ ನಿಮ್ಮದು. ನಿಮ್ಮ ಜೀವನದಲ್ಲಿ ಡಿ.ಕೆ. ಶಿವಕುಮಾರ್ ಅವರ ಮೇಲೆ ಮಾಡಿರುವ ಹಲವು ಆರೋಪಗಳ ಪೈಕಿ ಒಂದಕ್ಕಾದರೂ ಪೂರಕ ದಾಖಲೆ ಒದಗಿಸಿದ್ದೀರಾ? ಎಂದು ಪ್ರಶ್ನಿಸಿದೆ. ಸ್ವತಃ ಡಿ.ಕೆ. ಶಿವಕುಮಾರ್ ಅವರು ನೀವು ಮಾಡಿರುವ ಆರೋಪಗಳನ್ನು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ಮಾಡಲು ಆಹ್ವಾನಿಸಿದ್ದಾರೆ. ಆಮೂಲಕ ತಮ್ಮ ಪೌರುಷವನ್ನು ಸಾಬೀತುಪಡಿಸಿದ್ದಾರೆ.
ಈ ಆಹ್ವಾನ ಸ್ವೀಕರಿಸದೇ ವಿಧಾನಸಭೆ ಬಿಟ್ಟು ಹೋಗಿದ್ದು ನೀವು. ಈಗ ಹೇಳಿ ಶಿಖಂಡಿ, ನಪುಂಸಕ, ರಣಹೇಡಿ ಯಾರು? ಅಂದಹಾಗೆ, ವೆಸ್ಟ್ ಎಂಡ್ ಹೋಟೆಲ್ ನಲ್ಲಿ ರಾಸಲೀಲೆ ನಡೆಸುವುದು, ಅಮಾಯಕ ಮಹಿಳೆಯರ ಮೇಲೆ ದೌರ್ಜನ್ಯ ಮಾಡುವುದನ್ನೇ ಪೌರುಷ ಎಂದು ಭಾವಿಸಿರುವ ನೀವು, ಡಿ.ಕೆ. ಶಿವಕುಮಾರ ಅವರಂತೆ Straight Fight (ನೇರ ಹೋರಾಟ) ಮಾಡುವ ಮೂಲಕ ನಿಮ್ಮ ಪೌರುಷ ಸಾಬೀತುಪಡಿಸಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ.
ಕಾಂಗ್ರೆಸ್ ಸಾಮಾಜಿಕ ಪೋಸ್ಟ್ ವಿರುದ್ಧ ಕಿಡಿ ಕಾರಿರರುವ ಜೆಡಿಎಸ್, ಈಗಲೂ ಕಲೆಕ್ಷನ್ ಗಿರಾಕಿ, ಆ ಶಿಖಂಡಿ, ನಪುಂಸಕ, ರಣಹೇಡಿ, ಮಾನಗೇಡಿಯನ್ನು ಸಮರ್ಥಿಸಿಕೊಳ್ಳುತ್ತೀರಾ? ನಿಮಗೆ ನಾಚಿಕೆಯಾಗಲ್ವಾ..? ಕರ್ನಾಟಕ ಕಾಂಗ್ರೆಸ್ ನ ರಾತ್ರಿ ಕಾರ್ಯಾಚರಣೆ ಮಾಡುವ ಅಧ್ಯಕ್ಷನ ಬಗ್ಗೆ ಕೆಪಿಸಿಸಿ ಕಛೇರಿಯ ಪಡಸಾಲೆಯಲ್ಲೇ ಪ್ರತಿನಿತ್ಯ ಬಿಸಿಬಿಸಿ ಚರ್ಚೆ ನಡೆಯುತ್ತವೆ.
ಕಾಂಗ್ರೆಸ್ ಹಿರಿಯ ನಾಯಕರು ಹೇಳುವಂತೆ ರೌಡಿ ಕೊತ್ವಾಲನ ಶಿಷ್ಯ, ಹಾಲಿ ಅಧ್ಯಕ್ಷನ ಹಣ ಸಂಪಾದನೆಯ (BF-VCR) ಅಡ್ಡದಾರಿಯ ಗುಟ್ಟು ಇಡೀ ರಾಜ್ಯಕ್ಕೆ ಗೊತ್ತು. ತಿಹಾರ್ ಜೈಲುಹಕ್ಕಿ, ಸಿಡಿ ಶಿವು , ಗ್ರಾನೈಟ್-ಹವಾಲಾ ದಂಧೆಕೋರನ ಪೌರುಷದ ಬಗ್ಗೆ ಮಾತನಾಡುವುದಕ್ಕೆ ನೈತಿಕತೆ ಬೇರೆ ಕೇಡು.. ಎಂಥಹ ಭಂಡಬಾಳು ! ಥೂ ಅಸಹ್ಯ.. !! ಎಂದು ತಪರಾಕಿ ಹಾಕಿದೆ.
Advertisement