HDK ಮಾಡಿರುವ ಆರೋಪ ಸಾಬೀತು ಪಡಿಸಿದರೆ ಸಿಎಂ ಸಿದ್ದರಾಮಯ್ಯ ರಾಜಿನಾಮೆ: ಕಾಂಗ್ರೆಸ್ ಮುಖಂಡ ಲಕ್ಷ್ಮಣ್

ಸಿದ್ದರಾಮಯ್ಯ ದಲಿತರ ಜಮೀನು ಕಿತ್ತುಕೊಂಡಿರುವುದನ್ನು ಸಾಬೀತುಪಡಿಸಿದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ, ಆದರೆ ಅದನ್ನು ಸಾಬೀತುಪಡಿಸಲು ಕುಮಾರಸ್ವಾಮಿ ವಿಫಲವಾದರೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ಕಾಂಗ್ರೆಸ್ ವಕ್ತಾರ ಲಕ್ಷ್ಮಣ್
ಕಾಂಗ್ರೆಸ್ ವಕ್ತಾರ ಲಕ್ಷ್ಮಣ್
Updated on

ಮೈಸೂರು: ಅಂಗವಿಕಲ ದಲಿತರಿಗೆ ವಿಜಯನಗರದಲ್ಲಿ ಮುಡಾದಿಂದ ಮಂಜೂರಾಗಿದ್ದ ಜಾಗದಲ್ಲಿ ಸಿದ್ದರಾಮಯ್ಯ ಅವರು ಡಿಸಿಎಂ ಆಗಿದ್ದ ಅವಧಿಯಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಧಾರ ರಹಿತ ಆರೋಪ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ, ಕುಮಾರಸ್ವಾಮಿ ಅವರು ಹಿಟ್ ಅಂಡ್ ರನ್ ಹೇಳಿಕೆಗಳನ್ನು ನೀಡುವ ಮೂಲಕ ಜನಪ್ರಿಯರಾಗಿದ್ದಾರೆ. ‘ಸಿದ್ದರಾಮಯ್ಯ ದಲಿತರ ಜಮೀನು ಕಿತ್ತುಕೊಂಡಿರುವುದನ್ನು ಸಾಬೀತುಪಡಿಸಿದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ, ಆದರೆ ಅದನ್ನು ಸಾಬೀತುಪಡಿಸಲು ಕುಮಾರಸ್ವಾಮಿ ವಿಫಲವಾದರೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ವಿರುದ್ಧ ಆಧಾರ ರಹಿತ ಆರೋಪ ಮಾಡುವುದನ್ನು ಕುಮಾರಸ್ವಾಮಿ ನಿಲ್ಲಿಸಬೇಕು. ನಕಲಿ ದಾಖಲೆಗಳನ್ನು ನೀಡಿ ಸುಳ್ಳು ಮಾಹಿತಿ ನೀಡಿದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಮುಖಂಡ ರಾಕೇಶ್ ಪಾಪಣ್ಣ ಅವರ ಅಜ್ಜಿ ಸಾಕಮ್ಮ ಅವರ ಜಮೀನು ಸೇರಿದ್ದಾಗಿದೆ. 1950ರಲ್ಲಿ ಪುಟ್ಟೇಗೌಡ ಅವರು ಸರ್ವೆ ನಂಬರ್ 70/4ರಲ್ಲಿನ ಜಮೀನನ್ನು ಭಾಗ ಮಾಡಿ ತಮ್ಮ ಮಕ್ಕಳಾದ ಚಿಕ್ಕತಮ್ಮಯ್ಯ ಮತ್ತು ಸಾಕಮ್ಮ ಎಂಬುವರಿಗೆ ತಲಾ 30 ಗುಂಟೆಗಳನ್ನು ಹಂಚಿಕೆ ಮಾಡಿದ್ದರು. ಜಮೀನಿನ ಸರ್ವೆ ನಂಬರ್ ಅನ್ನು 70/4ಎ (ಸಾಕಮ) ಮತ್ತು 70/4ಬಿ (ಚಿಕ್ಕತಮ್ಮಯ್ಯ) ಎಂದು ಬದಲಾಯಿಸಲಾಗಿದೆ. 1967 ರಲ್ಲಿ, ಸಾಕಮ್ಮ ತನ್ನ ಸಹೋದರಿಯ ಇಬ್ಬರು ಮಕ್ಕಳಿಗೆ ತಲಾ 10 ಗುಂಟೆ ಭೂಮಿಯನ್ನು ನೀಡಿದರು ಮತ್ತು ಉಳಿದ 10 ಗುಂಟೆಯನು ತಮ್ಮ ಬಳಿ ಇಟ್ಟುಕೊಂಡರು. 1984ರಲ್ಲಿ ಮುಡಾ ಚಿಕ್ಕತಮ್ಮಯ್ಯ ಅವರಿಗೆ ಸೇರಿದ ಜಾಗವನ್ನು ನೋಟಿಫಿಕೇಶನ್ ಮಾಡಿ 1986ರಲ್ಲಿ 11,700 ರೂ.ಗಳನ್ನು ನೀಡಿತ್ತು. 1997ರಲ್ಲಿ ಸಾಕಮ್ಮ ಅವರು ತಮ್ಮ ಜಮೀನನನ್ನು ಸಿದ್ದರಾಮಯ್ಯ ಅವರಿಗೆ ಮಾರಾಟ ಮಾಡಿದ್ದರು. ಮರ್ಚಂಟ್ಸ್ ಕೋಪ ಆಪರೇಟಿವ್ ಬ್ಯಾಂಕ್‌ನಿಂದ ಸಾಲ ಪಡೆದು 100x120 ಚದರ ಅಡಿ ವಿಸ್ತೀರ್ಣದಲ್ಲಿ ಸಿದ್ದರಾಮಯ್ಯ ಮನೆ ನಿರ್ಮಿಸಿಕೊಂಡಿದ್ದರು.

ಕಾಂಗ್ರೆಸ್ ವಕ್ತಾರ ಲಕ್ಷ್ಮಣ್
ಮುಡಾ ಹಗರಣ: ಗಮನ ಬೇರೆಡೆಗೆ ಸೆಳೆಯುವ ಹುನ್ನಾರ, ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ

ಸಾಲ ಮರುಪಾವತಿ ಮಾಡದ ಸಿದ್ದರಾಮಯ್ಯ ಅವರಿಗೆ ಬ್ಯಾಂಕ್ ನೋಟಿಸ್ ನೀಡಿದ ನಂತರ, ಸಾಲ ತೀರಿಸಲು 1999 ರಲ್ಲಿ ಖೋಡೇಸ್ ಎಂಬುವವರಿಗೆ ಮನೆಯನ್ನು 98 ಲಕ್ಷ ರೂ.ಗೆ ಮಾರಾಟ ಮಾಡಿದರು ಎಂದು ಲಕ್ಷ್ಮಣ್ ವಿವರಿಸಿದ್ದಾರೆ. ಆದರೆ 2018 ರಲ್ಲಿ RTI ಕಾರ್ಯಕರ್ತ ಗಂಗರಾಜು ಅವರು ಸರ್ವೆ ನಂ. 70/4 ವಿವರಗಳನ್ನು ಕೇಳಿದರು. ಚಿಕ್ಕತಮ್ಮಯ್ಯ ಅವರಿಗೆ ಸೇರಿದ 70/4ಬಿ ಬಗ್ಗೆ ಮುಡಾ ಅಧಿಕಾರಿಗಳು ಮಾಹಿತಿ ನೀಡಿದ್ದು, ನೋಟಿಸ್ ನೀಡಲಾಗಿದೆ. ಹಾಗಾಗಿ ಸಿದ್ದರಾಮಯ್ಯ ಅವರು ಅಧಿಸೂಚಿತ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ತನಿಖೆ ನಡೆಸಿ ಬಿ ರಿಪೋರ್ಟ್ ಸಲ್ಲಿಸುವಂತೆ ಲಕ್ಷ್ಮೀಪುರಂ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ. ಆದರೆ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಪೊಲೀಸರ ವರದಿಯನ್ನು ಪರಿಗಣಿಸದೆ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್‌ಗೆ ಆದೇಶ ನೀಡಿದ್ದಾರೆ. 2019 ರಲ್ಲಿ, ಸಿದ್ದರಾಮಯ್ಯ ಅವರು ಹೈಕೋರ್ಟ್‌ನಲ್ಲಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದರು, ಅದು ಪ್ರಕರಣವನ್ನು ವಜಾಗೊಳಿಸಿತು ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com