ಯಾವ ಕಾಲಕ್ಕೂ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಪ್ರಲ್ಹಾದ ಜೋಶಿ

ದೇಶದಲ್ಲಿ ರಾಹುಲ್ ಗಾಂಧಿ ನಾಯಕತ್ವದಲ್ಲಿ ತಾವು ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂಬ ಸತ್ಯ ಕಾಂಗ್ರೆಸ್ಸಿಗರಿಗೆ ಗೊತ್ತಾಗಿದೆ. ಹಾಗಾಗಿ ಶತಾಯ-ಗತಾಯ ಕೇಂದ್ರ ಸರ್ಕಾರ ವಿರುದ್ಧ ಇಲ್ಲ ಸಲ್ಲದ ಮಾತಾಡುತ್ತಾರೆ ಅಷ್ಟೇ.
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ
Updated on

ಹುಬ್ಬಳ್ಳಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಾವೆಂದೂ ಅಧಿಕಾರಕ್ಕೆ ಬರೋದಿಲ್ಲ ಎಂಬುದು ಕಾಂಗ್ರೆಸ್ಸಿಗರಿಗೆ ಮನವರಿಕೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಟಿ ಬೀಸಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಜೋಶಿ, ದೇಶದಲ್ಲಿ ರಾಹುಲ್ ಗಾಂಧಿ ನಾಯಕತ್ವದಲ್ಲಿ ತಾವು ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂಬ ಸತ್ಯ ಕಾಂಗ್ರೆಸ್ಸಿಗರಿಗೆ ಗೊತ್ತಾಗಿದೆ. ಹಾಗಾಗಿ ಶತಾಯ-ಗತಾಯ ಕೇಂದ್ರ ಸರ್ಕಾರ ವಿರುದ್ಧ ಇಲ್ಲ ಸಲ್ಲದ ಮಾತಾಡುತ್ತಾರೆ ಅಷ್ಟೇ ಎಂದು ಹೇಳಿದರು.

ಯಾವ ಕಾಲಕ್ಕೂ ಬಿಜೆಪಿಯೇ ಬಲಿಷ್ಠ: ಭಾರತದಲ್ಲಿ ಯಾವುದೇ ಕಾಲಕ್ಕೂ ಬಿಜೆಪಿಯೇ ಬಲಿಷ್ಠವಾಗುತ್ತದೆ. ಸದ್ಯ ಮೋದಿ ನಾಯಕತ್ವದಲ್ಲಿ ಪ್ರಬಲವಾಗಿದೆ. ಕೆಲವು ವರ್ಷಗಳ ನಂತರ ಮತ್ಯಾರೋ ಪ್ರಬಲ ನೇತಾರರು ಮುಂಚೂಣಿಗೆ ಬರುತ್ತಾರೆ. ಕಾಂಗ್ರೆಸ್ ಅಧಿಕಾರದ ನಿರೀಕ್ಷೆಯಲ್ಲೇ ಕಾಲ ಕಳೆಯಬೇಕಾಗುತ್ತದೆ ಎಂದು ಸಚಿವ ಜೋಶಿ ಹೇಳಿದರು.

ಹತಾಶೆಯಲ್ಲಿ ಕೇಂದ್ರದ ನಿರ್ಣಯ ವಿರೋಧಿಸುವ ಕಾಂಗ್ರೆಸ್: ಮುಂದೆಯೂ ಅಧಿಕಾರಕ್ಕೆ ಬರುವುದು ಅಸಾಧ್ಯ ಎಂಬ ಹತಾಶೆಯಲ್ಲಿ ಕಾಂಗ್ರೆಸ್, ಒಂದು ದೇಶ ಒಂದು ಚುನಾವಣೆ"ಗೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಜೋಶಿ ಪ್ರತಿಕ್ರಿಯಿಸಿದರು

ಕೇಂದ್ರ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಣಯವನ್ನು ಕಾಂಗ್ರೆಸ್ ವಿರೋಧಿಸುತ್ತಲೆ ಇದೆ. ಇದಕ್ಕೆ ಅವರಲ್ಲಿನ ಹತಾಶ ಮನಸ್ಥಿತಿಯೇ ಕಾರಣ ಎಂದು ಹೇಳಿದರು.

ಪ್ರಲ್ಹಾದ ಜೋಶಿ
ಹುಬ್ಬಳ್ಳಿ-ಪುಣೆ ನಡುವೆ 2ನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ದೇಶಾದ್ಯಂತ ಕಡಿಮೆ ಬೆಲೆಗೆ ಈರುಳ್ಳಿ: ಬೆಂಗಳೂರು ಮಾತ್ರವಲ್ಲದೇ ದೇಶಾದ್ಯಂತ ಈರುಳ್ಳಿ ಕಡಿಮೆ ಬೆಲೆಗೆ ಕೈಗೆಟುಕುವಂತೆ ಕೇಂದ್ರ ಕ್ರಮ ಕೈಗೊಂಡಿದೆ. ದೇಶಾದ್ಯಂತ 570 ಕಡೆ ಬೆಲೆ ಮಾನಿಟರಿಂಗ್ ಕೇಂದ್ರಗಳಿವೆ. ಎಲ್ಲ ಕಡೆಯೂ ಬೆಲೆ ನಿಯಂತ್ರಿಸಿ ಕಡಿಮೆ ಬೆಲೆಗೆ ಕೇಂದ್ರವೇ ಪೂರೈಸುತ್ತದೆ ಎಂದು ಪ್ರಲ್ಹಾದ ಜೋಶಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com