ರಾಜ್ಯದಲ್ಲಿ ವಿಪಕ್ಷ ಹಣಿಯಲು ಅಧಿಕಾರಿಗಳ ದುರುಪಯೋಗ: ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ ರಾಜಕಾರಣ ಕೆಳಮಟ್ಟಕ್ಕೆ ಹೋಗಿದೆ. ವಿರೋಧ ಪಕ್ಷ ಹಣಿಯಲು ಕೇಸ್ ಹಾಕಲಾಗುತ್ತಿದೆ. ಹಿರಿಯ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Updated on

ಹುಬ್ಬಳ್ಳಿ: ರಾಜ್ಯದಲ್ಲಿ ವಿಪಕ್ಷಗಳನ್ನು ಹಣಿಯಲು ರಾಜ್ಯ ಸರ್ಕಾರದಿಂದ ಹಿರಿಯ ಅಧಿಕಾರಿಗಳ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಆರೋಪಿಸಿದರು.

ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ರಾಜಕಾರಣ ಕೆಳಮಟ್ಟಕ್ಕೆ ಹೋಗಿದೆ. ವಿರೋಧ ಪಕ್ಷ ಹಣಿಯಲು ಕೇಸ್ ಹಾಕಲಾಗುತ್ತಿದೆ. ಹಿರಿಯ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಸ್ವಜನ ಪಕ್ಷಪಾತ ನಡೆಯುತ್ತಿದೆ. ರಾಜಕೀಯದಲ್ಲಿ ರಕ್ಷಣೆ ಇರುವ ಕಾರಣ ಅಧಿಕಾರಿಗಳಿಂದ ಕೀಳುಮಟ್ಟದ ಮಾತು ಬರುತ್ತಿವೆ. ಇಂತಹ ಕೆಳಮಟ್ಟದ ರಾಜಕೀಯ ಹಿಂದೆಂದು ಆಗಿರಲಿಲ್ಲ. ಒಬ್ಬರ ಮೇಲೆ ಆರೋಪದ ಕಪ್ಪು ಚುಕ್ಕೆ ಬಂದರೆ ಎಲ್ಲರಿಗೂ ಮಸಿ ಬಳಿಯುವ ಪ್ರಯತ್ನ ನಡೆಯತ್ತಿದೆ. ಇದು ಬಹಳಷ್ಟು ದಿನ ನಡೆಯುವುದಿಲ್ಲ. ಅಂತಿಮವಾಗಿ ಕಾನೂನು ತನ್ನ ಕೆಲಸ ಮಾಡಲಿದೆ ಎಂದು ಹೇಳಿದರು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ದೂರುದಾರ ಇಡಿಯಲ್ಲಿ ದೂರು ದಾಖಲು ಕುರಿತು ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಕಾದು ನೋಡೋಣ, ಏನು ಆಗುತ್ತದೆ ಎಂಬುದು ಎಂಬುದನ್ನು ನೋಡೋಣ ಎಂದರು.

ಚಾಮುಂಡೇಶ್ವರಿ ದೇವರ ವಿಚಾರದಲ್ಲಿ ಚಿಂತಕ ಪ್ರೊಫೆಸರ್ ಕೆ. ಎಸ್. ಭಗವನ್ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಮಾತುಗಳಿಗೆ ಯಾರೂ ಪ್ರಾಮುಖ್ಯತೆಯನ್ನು ನೀಡಿಲ್ಲ, ನೀಡಲುಬಾರದು ಎಂದು ಹೇಳಿದರು.

ಪ್ರೊ.ಭಗವಾನ್ ಅಂತಾ ಹೆಸರಿದ್ದರೂ ದೇವರಲ್ಲಿ ನಂಬಿಕೆ ಕೊರತೆ ತೋರುತ್ತಿರುವುದು ವಿಪರ್ಯಾಸವಾಗಿದೆ. ಅವರು ದೇವರನ್ನು ನಂಬದಿದ್ದರೆ, ಭಗವಾನ್' ಅಂತಾ ಹೆಸರಿಟ್ಟುಕೊಂಡಿರುವುದು ವಿರೋಧಾಭಾಸವಾಗಿದೆ. ಯಾವುದೇ ಧರ್ಮದ ವಿರುದ್ಧ ಮಾತನಾಡುವುದು ಮಾನವೀಯ ಆಚರಣೆಯಲ್ಲ. ಚಾಮುಂಡೇಶ್ವರಿ ಕಾಲ್ಪನಿಕ ದೇವತೆ ಎಂದು ಭಗವಾನ್ ಹೇಳಿದ್ದಾರೆ. ಚಾಮುಂಡೇಶ್ವರಿ ಕಾಲ್ಪನಿಕವಾದರೆ ಮಹಿಷಾಸುರನೂ ಕಾಲ್ಪನಿಕವೇ? ಎಂದು ಪ್ರಶ್ನಿಸಿದರು.

ಇಂತಹ ವಿರೋಧಾಭಾಸ ಮತ್ತು ಗೊಂದಲಕಾರಿ ಹೇಳಿಕೆಯನ್ನು ಜನರನ್ನು ದಾರಿತಪ್ಪಿಸಲು ಬಳಸಲಾಗುತ್ತಿದೆ. ಯಾರೂ ಅದಕ್ಕೆ ಪ್ರಾಮುಖ್ಯತೆ ನೀಡಿಲ್ಲ, ನೀಡಬಾರದು ಎಂದು ಅವರು ಹೇಳಿದರು.

ಬಸವರಾಜ ಬೊಮ್ಮಾಯಿ
'ಮಾನ ಮರ್ಯಾದೆ ಇದ್ದರೆ ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಿ': ಕೆಎಸ್ ಭಗವಾನ್

ಶ್ರೀರಾಮನ ಕುರಿತು ಪ್ರೊ.ಭಗವಾನ್ ಈ ಹಿಂದೆ ನೀಡಿದ್ದ ವಿವಾದಾತ್ಮಕ ಹೇಳಿಕೆಗಳನ್ನು ಉಲ್ಲೇಖಿಸಿದ ಬೊಮ್ಮಾಯಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ. ಆದರೆ ಸಮಾಜ ಇದನ್ನು ಅರ್ಥಮಾಡಿಕೊಂಡಿದೆ. ಆದ್ದರಿಂದ ಅವರ ಮಾತಿಗೆ ಯಾರೂ ಮಹತ್ವ ನೀಡುತ್ತಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com