ಲೋಕಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ತಪ್ಪಿಸಲು ಪಿತೂರಿ: ಸಂಸದ ಪ್ರತಾಪ್ ಸಿಂಹ

ಸಹೋದರ ವಿಕ್ರಂ ಸಿಂಹ ವಿರುದ್ಧದ ಮರ ಕಡಿತ ಪ್ರಕರಣ ಸಂಬಂಧ ನಿರಂತರವಾಗಿ ಟೀಕಾ ಪ್ರಹಾರ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಸಂಸದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ

ಮೈಸೂರು: ಸಹೋದರ ವಿಕ್ರಂ ಸಿಂಹ ವಿರುದ್ಧದ ಅಕ್ರಮವಾಗಿ ಮರ ಕಡಿತ ಪ್ರಕರಣ ಸಂಬಂಧ ನಿರಂತರವಾಗಿ ಟೀಕಾ ಪ್ರಹಾರ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಇದು ನನ್ನನ್ನು ಚುನಾವಣೆಯಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂದು ಟಿಕೆಟ್ ತಪ್ಪಿಸಲು ನಡೆಯುತ್ತಿರುವ ಪಿತೂರಿ ಎಂದಿದ್ದಾರೆ.

ಈ ವಿಷಯದಲ್ಲಿ ಇದೇ ನನ್ನ ಕೊನೆಯ ಪ್ರತಿಕ್ರಿಯೆ. ಡಾ. ಪರಮೇಶ್ವರ ಸಾಹೇಬರೇ, ರಾಜಕಾರಣ ಮಾಡುತ್ತಿರುವವರು ಯಾರು? A1, A2ಗೆ ಸ್ಟೇಷನ್ ನಲ್ಲೇ  ಬೈಲ್ ಕೊಡುತ್ತೀರಿ, FIRನಲ್ಲಿ ಹೆಸರೇ ಇಲ್ಲದ ನನ್ನ ತಮ್ಮನಿಗೆ ಕೋರ್ಟ್ ಬೈಲ್! ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com