ಜೆಡಿಎಸ್-ಬಿಜೆಪಿ ಕಾರ್ಯಕರ್ತರನ್ನು ಒಗ್ಗೂಡಿಸಿದ ಹನುಮ ಧ್ವಜ: ಹಸಿರು ಟವೆಲ್ ಕಳಚಿ 'ಕೇಸರಿ' ಶಾಲು ಧರಿಸಿದ ದಳಪತಿಗಳು!

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗಾಗಿ ಹಾರಿಸಲಾಗಿದ್ದ 108 ಅಡಿ ಎತ್ತರದ ಧ್ವಜಸ್ತಂಭದಿಂದ ಹನುಮಾನ್ ಧ್ವಜವನ್ನು ಕೆಳಗಿಳಿಸಿರುವುದು ಬಿಜೆಪಿ ಮತ್ತು ಅದರ ಹೊಸ ಮಿತ್ರ ಪಕ್ಷಕ್ಕೆ ವರವಾಗಿ ಪರಿಣಮಿಸಿದೆ, ಎರಡು ಪಕ್ಷದ ಕಾರ್ಯಕರ್ತರು ಕೇಸರಿ ಶಾಲು ಧರಿಸಿ ಬೀದಿಗಿಳಿದಿದ್ದಾರೆ.
ಮಂಡ್ಯದಲ್ಲಿ ಜೆಡಿಎಸ್ ಬಿಜೆಪಿ ಪ್ರತಿಭಟನೆ
ಮಂಡ್ಯದಲ್ಲಿ ಜೆಡಿಎಸ್ ಬಿಜೆಪಿ ಪ್ರತಿಭಟನೆ

ಮೈಸೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಮಂಡ್ಯದ ಹನುಮ ಧ್ವಜ ವಿವಾದ ರಾಜಕೀಯ ಬಣ್ಣ ಪಡೆಯುತ್ತಿದೆ. ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ನಡೆದ ಹನುಮಾನ್ ಧ್ವಜ ಪ್ರಕರಣವನ್ನು, ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಜೆಡಿಎಸ್-ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಿದಂತಾಗಿದೆ. ಇದರ ಜೊತೆಗೆ ಜೆಡಿಎಸ್- ಬಿಜೆಪಿ ಕಾರ್ಯಕರ್ತರನ್ನು ಈ ಮೂಲಕ ಒಗ್ಗೂಡಿಸಲು ಸಹಾಯ ಮಾಡುತ್ತಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗಾಗಿ ಹಾರಿಸಲಾಗಿದ್ದ 108 ಅಡಿ ಎತ್ತರದ ಧ್ವಜಸ್ತಂಭದಿಂದ ಹನುಮಾನ್ ಧ್ವಜವನ್ನು ಕೆಳಗಿಳಿಸಿರುವುದು ಬಿಜೆಪಿ ಮತ್ತು ಅದರ ಹೊಸ ಮಿತ್ರ ಪಕ್ಷಕ್ಕೆ ವರವಾಗಿ ಪರಿಣಮಿಸಿದೆ, ಎರಡು ಪಕ್ಷದ ಕಾರ್ಯಕರ್ತರು ಕೇಸರಿ ಶಾಲು ಧರಿಸಿ ಬೀದಿಗಿಳಿದಿದ್ದಾರೆ.

ಒಂದೆಡೆ ಆಡಳಿತಾರೂಢ ಕಾಂಗ್ರೆಸ್, ಇನ್ನೊಂದೆಡೆ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು, ಕೆರಗೋಡು ಗ್ರಾಮಸ್ಥರ ನಡುವಿನ ಹಣಾಹಣಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಳೆದ ಕೆಲವು ದಶಕಗಳಿಂದ ಸಾಧ್ಯವಾಗದಂತಹ ರಾಜಕೀಯ ಸೆಳೆತ ಬಿಜೆಪಿಗೆ ಬಂದಿದೆ. ಜೆಡಿಎಸ್ ಕಾರ್ಯಕರ್ತರು ಅಕ್ಷರಶಃ ಸಾಂಪ್ರದಾಯಿಕ ಹಸಿರು ಶಾಲು ತ್ಯಜಿಸಿ ಕೇಸರಿ ಶಾಲು ಆಯ್ಕೆ ಮಾಡಿಕೊಂಡಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್ ಹಿಂದಿನ ಲೋಕಸಭೆ ಮತ್ತು ಇತ್ತೀಚೆಗೆ ವಿಧಾನಸಭೆ ಚುನಾವಣೆ ನಂತರ ನಡೆದ  ಬೆಳವಣಿಗೆಗಳು ಅನೇಕರನ್ನು ಬೆರಗುಗೊಳಿಸಿದೆ. ಇದೀಗ ತಮ್ಮ ಸಾಮಾನ್ಯ ರಾಜಕೀಯ ವೈರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಲು ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ವೇದಿಕೆ ಹಂಚಿಕೊಂಡು ಒಟ್ಟಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ  ಪ್ರಾಬಲ್ಯದಿಂದಾಗಿ ಮಂಡ್ಯದಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳಲು ನೆರವಾಗುವ ಸಾಧ್ಯತೆಯಿದೆ, ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಅತ್ಯಂತ ಕಷ್ಟಕರವಾಗಿದೆ. ಕೆಲವೇ ತಿಂಗಳುಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜಿಲ್ಲೆಯ 11 ಸ್ಥಾನಗಳಲ್ಲಿ 10 ಸ್ಥಾನಗಳನ್ನು ಗೆದ್ದುಕೊಂಡಿದ್ದರಿಂದ ಕ್ಷೇತ್ರದ ಪರಿವರ್ತನೆಯು ಸ್ಪಷ್ಟವಾಗಿ ಕಂಡುಬಂದಿದೆ. ಇದು ಸಿದ್ದರಾಮಯ್ಯ ಅವರಿಗೆ ಹೊಸ ಸವಾಲಾಗಿ ಪರಿಣಮಿಸಲಿದೆ.

ಜನರ ಮನಸ್ಥಿತಿಯನ್ನು ಅರಿತ ಬಿಜೆಪಿ-ಜೆಡಿಎಸ್ ನಾಯಕರು ರಾಜ್ಯಾದ್ಯಂತ ಪ್ರತಿಭಟನೆ ವಿಸ್ತರಿಸುವ ಮೂಲಕ  ಹೆಚ್ಚಿನ ರಾಜಕೀಯ ಲಾಭ ಗಳಿಸಲು ಹವಣಿಸುತ್ತಿದ್ದಾರೆ. ಅವರು ಪ್ರತಿ ಮನೆಯಲ್ಲೂ ಕೇಸರಿ ಧ್ವಜ ಹಾರಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ರಾಮಭಕ್ತರ ವಿರುದ್ಧ ಸರ್ಕಾರವು ಕ್ರಮಕೈಗೊಳ್ಳಲು ಮುಂದಾದರೆ ಈ ಪ್ರದೇಶದ ಮತದಾರರನ್ನು ಮತ್ತಷ್ಟು ಧ್ರುವೀಕರಿಸಬಹುದು ಎಂದು ಬಿಜೆಪಿಯ ರಾಜಕೀಯ ಲೆಕ್ಕಚಾರ. ಬಿಜೆಪಿ ಕಾರ್ಯಕರ್ತರೊಂದಿಗೆ ಕೆಲಸ ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ  ಎಚ್.ಡಿ ಕುಮಾರಸ್ವಾಮಿ ಪ್ರಬಲವಾದ ಸಂದೇಶ ರವಾನಿಸಲು ಸಹಾಯ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com