ಚುನಾಯಿತ ಪ್ರತಿನಿಧಿಗಳಲ್ಲಿ ನೈತಿಕತೆ ಮಾಯ; ಬದಲಾಗಿದೆ ರಾಜಕೀಯ; ರಾಜೀನಾಮೆ ವಿಚಾರದಲ್ಲಿ ನಿಲುವು ಅಚಲ: ಬಸವರಾಜ್ ಹೊರಟ್ಟಿ

ರಾಜಕೀಯ ನಾಯಕರು ಕೇವಲ ಹಣವನ್ನು ಖರ್ಚು ಮಾಡಿ ಚುನಾವಣೆಗಳನ್ನು ಗೆಲ್ಲುತ್ತಾರೆ ನಂತರ ಬಂದು ಬೆಂಗಳೂರಿನಲ್ಲಿ ಕುಳಿತುಕೊಳ್ಳುತ್ತಾರೆ.
Basavaraj horatti
ಬಸವರಾಜ್ ಹೊರಟ್ಟಿ
Updated on

ಸಕಲೇಶಪುರ: ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಅಧಿವೇಶನದಲ್ಲಿ ಶಾಸಕರು ಹನಿಟ್ರ್ಯಾಪ್ ವಿಷಯದ ಮೇಲೆ ಮಾತ್ರ ಗಮನಹರಿಸುತ್ತಿರುವುದರಿಂದ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ತಮ್ಮ ಕೆಲವು ಸಹೋದ್ಯೋಗಿಗಳ ನಡವಳಿಕೆ ಬಗ್ಗೆ ಅವರು ಪ್ರಶ್ನಿಸಿದ್ದಾರೆ.

ಸಕಲೇಶಪುರದಲ್ಲಿ ಮಾತನಾಡಿದ ಅವರು, ರಾಜಕೀಯ ನಾಯಕರು ವಿಧಾನಸಭೆಯಲ್ಲಿ ಸ್ಪೀಕರ್ ಅವರತ್ತ ಕಾಗದಗಳನ್ನು ಎಸೆದು ಪವಿತ್ರವಾದ ಪ್ರಜಾಪ್ರಭುತ್ವದ ದೇವಾಲಯವನ್ನು ಈ ರೀತಿ ಅವಮಾನಿಸಬಹುದು ಎಂದು ತಾವು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು.

ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಪುನರುಚ್ಚರಿಸಿದ ಹೊರಟ್ಟಿ, “ರಾಜಕೀಯ ಬದಲಾಗಿದೆ. ರಾಜಕೀಯ ಶೌರ್ಯದ ಹಳೆಯ ದಿನಗಳನ್ನು ಪ್ರಸ್ತುತ ಸನ್ನಿವೇಶಕ್ಕೆ ಹೋಲಿಸಲು ಸಾಧ್ಯವಿಲ್ಲ. ನಾನು ಇದರ ಬಗ್ಗೆ ಅನೇಕ ನಾಯಕರು ಮತ್ತು ಶಾಸಕರೊಂದಿಗೆ ಚರ್ಚಿಸಿದ್ದೇನೆ ಮತ್ತು ಈ ನಿಟ್ಟಿನಲ್ಲಿ ನನ್ನ ನಿರ್ಧಾರವನ್ನು ವ್ಯಕ್ತಪಡಿಸಿದ್ದೇನೆ. ಅನೇಕ ಶಾಸಕರು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.

ರಾಜಕೀಯ ನಾಯಕರು ಕೇವಲ ಹಣವನ್ನು ಖರ್ಚು ಮಾಡಿ ಚುನಾವಣೆಗಳನ್ನು ಗೆಲ್ಲುತ್ತಾರೆ ನಂತರ ಬಂದು ಬೆಂಗಳೂರಿನಲ್ಲಿ ಕುಳಿತುಕೊಳ್ಳುತ್ತಾರೆ. ಸದನದಲ್ಲಿ ಪ್ರಶ್ನೆಗಳು ಎದ್ದಾಗ, ಉತ್ತರ ನೀಡಲು ಯಾರೂ ಇರುವುದಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

Basavaraj horatti
ರಾಜೀನಾಮೆ ಕೊಟ್ಟಿಲ್ಲ ಸಭಾಪತಿ Basavaraj Horatti? ಅವರೇ ಕೊಟ್ಟ ಸ್ಪಷ್ಟನೆ ಏನು?

ಚುನಾಯಿತ ಪ್ರತಿನಿಧಿಗಳಲ್ಲಿ ನೈತಿಕತೆ ಜಾರುತ್ತಿದೆ. ಮತಗಳನ್ನು ಖರೀದಿಸುವುದನ್ನು ನಿಲ್ಲಿಸುವವರೆಗೆ ನಾವು ನಾಯಕರಿಂದ ಉತ್ತಮ ಆಡಳಿತವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. "ದುರದೃಷ್ಟವಶಾತ್, ಸದನದಲ್ಲಿ ಕಿರಿಯ ಮತ್ತು ಹಿರಿಯ ಶಾಸಕರ ನಡುವೆ ನಾವು ತಾರತಮ್ಯ ಮಾಡಲು ಸಾಧ್ಯವಿಲ್ಲ. ಅವರು ವಿಧಾನಸಭೆಗೆ ಪ್ರವೇಶಿಸಿದ ನಂತರ ಎಲ್ಲರೂ ಒಂದೇ ಆಗಿರುತ್ತಾರೆ. ಈಗ, ಕಿರಿಯರು ಮಾತು ಕೇಳುತ್ತಿಲ್ಲ ಮತ್ತು ಹಿರಿಯರನ್ನು ಗೌರವಿಸುವುದಿಲ್ಲ" ಎಂದು ಅವರು ಹೇಳಿದರು.

ಸದನದಲ್ಲಿ ಹೇಗೆ ಮಾತನಾಡಬೇಕು, ವರ್ತಿಸಬೇಕು ಎಂಬುದರ ಕುರಿತು ಹೊಸ ಶಾಸಕರಿಗೆ ಸರಿಯಾದ ತರಬೇತಿಯ ಮಹತ್ವವನ್ನು ಒತ್ತಿ ಹೇಳಿದ ಹೊರಟ್ಟಿ, ವಿರೋಧ ಪಕ್ಷದ ನಾಯಕರು ಮತ್ತು ಶಾಸಕರು ಸ್ಪೀಕರ್ ಮತ್ತು ಶಾಸಕಾಂಗದ ಅಧ್ಯಕ್ಷರನ್ನು ಹೇಗೆ ಗೌರವಿಸಬೇಕೆಂದು ತಿಳಿದಿರಬೇಕು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com