18 ಶಾಸಕರ ಅಮಾನತು ಆದೇಶ ಹಿಂಪಡೆಯುವಂತೆ ಸ್ಪೀಕರ್​ಗೆ ಅಶೋಕ್ ಪತ್ರ: ವಿಜಯೇಂದ್ರ ಜೊತೆಗಿನ ಮುಸುಕಿನ ಗುದ್ದಾಟ ಬಟಾ ಬಯಲು?

ಅಹೋರಾತ್ರಿ ಧರಣಿ ಹಾಗೂ ಶಾಸಕರ ಅಮಾನತು ವಿರೋಧಿಸಿ ಪ್ರತಿಭಟನೆ ನಡೆಸಲು ರಾಜ್ಯಾಧ್ಯಕ್ಷ ವಿಜಯೇಂದ್ರ ಕರೆದಿದ್ದ ಸಭೆಗೆ ಗೈರು ಹಾಜರಾಗಿದ್ದ ಅಶೋಕ್‌ ಒಂದು ದಿನ ಮುಂಚಿತವಾಗಿಯೇ ಸ್ಪೀಕರ್‌ಗೆ ಪತ್ರ ಬರೆದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
Vijayendra and R Ashok
ಅಶೋಕ್ ಮತ್ತು ವಿಜಯೇಂದ್ರ
Updated on

ಬೆಂಗಳೂರು: ಕರ್ನಾಟಕ ವಿಧಾನಸಭೆಯ 18 ಸದಸ್ಯರನ್ನು ಅಮಾನತು ಮಾಡಿ ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ಕೋರಿ ಸ್ಪೀಕರ್ ಯು.ಟಿ.ಖಾದರ್​​ಗೆ ವಿಪಕ್ಷ ನಾಯಕ ಆರ್.ಅಶೋಕ್ ಪತ್ರ ಬರೆದಿದ್ದಾರೆ.

ಪಕ್ಷದ 18 ಶಾಸಕರನ್ನು 6 ತಿಂಗಳು ಅಮಾನತುಗೊಳಿಸಿರುವ ಆದೇಶ ವಾಪಸ್‌ ಪಡೆಯುವಂತೆ ಆಗ್ರಹಿಸಿ ರಾಜ್ಯ ಬಿಜೆಪಿ ಘಟಕ ಬುಧವಾರ ಸ್ಪೀಕರ್‌ಗೆ ಮನವಿ ನೀಡಲು ನಿರ್ಧರಿಸಿದ್ದರೆ, ವಿಪಕ್ಷ ನಾಯಕ ಆರ್‌. ಅಶೋಕ್‌ ಮಾತ್ರ ಒಂದು ದಿನ ಮುಂಚಿತವಾಗಿಯೇ ಸ್ಪೀಕರ್‌ ಯು.ಟಿ. ಖಾದರ್‌ಗೆ ಪತ್ರ ಬರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಅಹೋರಾತ್ರಿ ಧರಣಿ ಹಾಗೂ ಶಾಸಕರ ಅಮಾನತು ವಿರೋಧಿಸಿ ಪ್ರತಿಭಟನೆ ನಡೆಸಲು ರಾಜ್ಯಾಧ್ಯಕ್ಷ ವಿಜಯೇಂದ್ರ ಕರೆದಿದ್ದ ಸಭೆಗೆ ಗೈರು ಹಾಜರಾಗಿದ್ದ ಅಶೋಕ್‌ ಒಂದು ದಿನ ಮುಂಚಿತವಾಗಿಯೇ ಸ್ಪೀಕರ್‌ಗೆ ಪತ್ರ ಬರೆದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ವಿಜಯೇಂದ್ರ ಜತೆ ಅಂತರ ಕಾಯ್ದುಕೊಳ್ಳುವುದಕ್ಕೆ ಅಶೋಕ್‌ ಈ ಹಾದಿ ತುಳಿದರೇ? ಎಂಬ ಚರ್ಚೆ ಪಕ್ಷದ ವಲಯದಲ್ಲಿ ನಡೆಯುತ್ತಿದೆ. ಕಾಕತಾಳೀಯವೋ ಎಂಬಂತೆ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕೂಡ ಅಶೋಕ್‌ ಪತ್ರದ ಬೆನ್ನಲ್ಲೇ ಸ್ಪೀಕರ್‌ಗೆ ಪತ್ರ ಬರೆದು ಅಮಾನತು ಆದೇಶ ರದ್ದತಿಗೆ ಆಗ್ರಹಿಸಿದ್ದಾರೆ.

Vijayendra and R Ashok
ವಕ್ಫ್ ಬೋರ್ಡ್‌ ಆಸ್ತಿ ವಿವಾದ: ಅಮಿತ್ ಶಾ, ಸಂಸತ್‌ ಜಂಟಿ ಸದನ ಸಮಿತಿಗೆ ಆರ್ ಅಶೋಕ್ ಪತ್ರ

ವಿರೋಧ ಪಕ್ಷದ ನಾಯಕರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ವಿಜಯೇಂದ್ರ ಅವರು ಕೇಂದ್ರ ನಾಯಕರಿಗೆ ದೂರು ನೀಡಿದ್ದಾರೆ ಎಂಬ ವಿಚಾರವಾಗಿ ಅಶೋಕ ಅವರು ಈ ಹಿಂದೆ ಅತೃಪ್ತಿ ವ್ಯಕ್ತಪಡಿಸಿದ್ದರು. ಆ ಬಳಿಕ ವಿಜಯೇಂದ್ರ ಮತ್ತು ಅಶೋಕ ಅವರ ಮಧ್ಯೆ ಅಸಮಾಧಾನದ ಬಿರುಕು ಹೆಚ್ಚುತ್ತಲೇ ಇದೆ. ವಿಧಾನಸಭೆ ಕಲಾಪದ ವೇಳೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ವಿಚಾರದಲ್ಲಿ ಶಾಸಕರ ನಿಲುವಿಗೆ ಅಶೋಕ ಸ್ಪಂದಿಸುವುದಿಲ್ಲ. ಧರಣಿಗೆ ಹೊರಟರೆ ಅದಕ್ಕೆ ತಡೆ ಹಾಕುತ್ತಾರೆ ಎಂಬ ಅಸಮಾಧಾನವನ್ನೂ ಶಾಸಕರು ಹಲವು ಬಾರಿ ವ್ಯಕ್ತಪಡಿಸಿದ್ದಾರೆ.

ಮಾರ್ಚ್​ 21ರಂದು ವಿಧಾನಸಭೆ ಅಧಿವೇಶನದ ವೇಳೆ ಸದನದಲ್ಲಿ ಹನಿಟ್ರ್ಯಾಪ್ ಹಾಗೂ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ವಿಚಾರದ ಚರ್ಚೆಯು ವಿಕೋಪಕ್ಕೆ ತಿರುಗಿದಾಗ ಪ್ರತಿಪಕ್ಷದವರಾದ ನಾವೆಲ್ಲ ಸಭಾಧ್ಯಕ್ಷರ ಪೀಠದ ಸುತ್ತ ನಿಂತು ಪ್ರತಿಭಟನೆ ಮಾಡಿದ್ದೇವೆ.

ಈ ಸಂದರ್ಭದಲ್ಲಿ ತಾವು, ಸದನದಲ್ಲಿ ಪೀಠದ ಆದೇಶವನ್ನೂ ಲೆಕ್ಕಿಸದೇ ಸದನದ ಕಾರ್ಯಕಲಾಪಗಳಿಗೆ ಅಡ್ಡಿಯುಂಟು ಮಾಡಿರುತ್ತೀರೆಂದು, ಆಶಿಸ್ತಿನಿಂದ ಹಾಗೂ ಅಗೌರವದಿಂದ ನಡೆದುಕೊಂಡಿರುತ್ತೀರೆಂದು ವಿಧಾನಸಭೆಯ 18 ಸದಸ್ಯರನ್ನು ಅಮಾನತುಗೊಳಿಸಿದ್ದೀರಿ.

ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಾಮಾವಳಿಗಳ ನಿಯಮ 348ರ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ 6 ತಿಂಗಳುಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತು ಮಾಡಲಾಗಿದೆ. ಅದರ ಜೊತೆಗೆ ಇತರ ನಿರ್ಬಂಧಗಳನ್ನೂ ವಿಧಿಸಲಾಗಿದೆ ಎಂದು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com