
ಬೆಂಗಳೂರು: ರಾಜ್ಯದಲ್ಲಿ ಶೀಘ್ರದಲ್ಲೇ ಸಚಿವ ಸಂಪುಟ ಪುನಾರಚನೆ ನಡೆಯಲಿದೆ ಎಂಬ ಊಹಾಪೋಹಗಳು ತೀವ್ರಗೊಳ್ಳುತ್ತಿದ್ದಂತೆ ರಾಜಕೀಯ ಬಿರುಗಾಳಿ ಎದ್ದಿದೆ.
ಆಡಳಿತಾರೂಢ ಕಾಂಗ್ರೆಸ್‌ನೊಳಗಿನ ಅಸಮಾಧಾನದ ನಡುವೆ, ಪಕ್ಷದ ನಿಷ್ಠಾವಂತರು ಸಚಿವ ಸಂಪುಟ ಪುನಾರಚನೆ ವೇಳೆ ಪ್ರಸಿದ್ಧ 'ಕಾಮರಾಜ್ ಯೋಜನೆ'ಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿದ್ದಾರೆ.
ಪ್ರಸ್ತುತ ಸಚಿವರಲ್ಲಿ ಸುಮಾರು ಶೇ. 70-80 ರಷ್ಟು ಜನರು ಸಿದ್ದರಾಮಯ್ಯ ಅವರ 2013-18 ಸರ್ಕಾರ ಹಾಗೂ ಎಚ್‌ಡಿ ಕುಮಾರಸ್ವಾಮಿ ಅವರೊಂದಿಗಿನ 14 ತಿಂಗಳ ಮೈತ್ರಿಕೂಟದಲ್ಲಿೂ ಸಚಿವರಾಗಿದ್ದರು. ಹೀಗಾಗಿ ಈ ಬಾರಿ ಸಂಪುಟ ಪುನಾರಚನೆ ವೇಳೆ ಹೊಸಬರಿಗೆ ಆದ್ಯತೆ ನೀಡುವಂತೆ ಬೇಡಿಕೆ ಹೆಚ್ಚುತ್ತಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದವರನ್ನು ಉಳಿಸಿಕೊಳ್ಳುವುದರಿಂದ ನಿಶ್ಚಲತೆ, ಸಾರ್ವಜನಿಕ ಭ್ರಮನಿರಸನ ಮತ್ತು ಆಡಳಿತದಲ್ಲಿ ಅದಕ್ಷತೆಗೆ ಕಾರಣವಾಗಿದೆ ಎಂದು ಪಕ್ಷದ ಒಳಗಿನವರ ಆರೋಪವಾಗಿದೆ. ಕಾಂಗ್ರೆಸ್‌ಗೆ ಸಂಪುಟ ಪುನಾರಚನೆಗೆ ಸರಿಯಾದ ತಂತ್ರದ ಅಗತ್ಯವಿದೆ. ಅನೇಕ ವರ್ಷಗಳಿಂದ ಸಚಿವ ಸಂಪುಟದಲ್ಲಿ ಹಿರಿಯ ತಲೆಗಳು ಪ್ರಾಬಲ್ಯ ಸಾಧಿಸಿವೆ, ಹೀಗಾಗಿ ಕ್ರಿಯಾತ್ಮಕ ಆಡಳಿತಕ್ಕೆ ಅವಕಾಶ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ಇದು ಬದಲಾವಣೆಯ ಸಮಯವಾಗಿದ್ದು, ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಅವರ ಆಯ್ಕೆಗೆ ಮನ್ನಣೆ ನೀಡಬೇಕೆಂದು ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
1960 ರ ದಶಕದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಕೆ. ಕಾಮರಾಜ್ ಅವರು ಮೊದಲು ಜಾರಿಗೆ ತಂದ ಕಾಮರಾಜ್ ಯೋಜನೆ ಪ್ರಕಾರ ಅನುಭವಿ ಸಚಿವರು ರಾಜೀನಾಮೆ ನೀಡಿ ಪಕ್ಷ ಸಂಘಟನೆ ಕೆಲಸ ನಿರ್ವಹಿಸಬೇಕು ಪ್ರತಿಪಾದಿಸುತ್ತದೆ, ಇದು ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಡುತ್ತದೆ ಎಂದಿದ್ದಾರೆ.
ದೀರ್ಘಕಾಲ ಸೇವೆ ಸಲ್ಲಿಸಿದ ಸಚಿವರನ್ನು ಕೈಬಿಟ್ಟು ಮೂರು ಅಥವಾ ನಾಲ್ಕು ಬಾರಿ ಆಯ್ಕೆಯಾದ 25 ಹಿರಿಯ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವಾಗ ಪಕ್ಷಕ್ಕೆ ಇರುವ ಯಾವುದೇ ನಕಾರಾತ್ಮಕ ಇಮೇಜ್ ತೊಡೆದು ಹಾಕಲು ಇದು ಸಹಾಯ ಮಾಡುತ್ತದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದೊಳಗೆ ಮತ್ತಷ್ಟು ಭಿನ್ನಾಭಿಪ್ರಾಯವನ್ನು ತಡೆಗಟ್ಟಲು ಇಂತಹ ಕ್ರಮವು ಏಕೈಕ ಮಾರ್ಗವಾಗಿದೆ ಎಂದು ಪಕ್ಷದ ಒಳಗಿನವರು ನಂಬುತ್ತಾರೆ. "ಸಂಪುಟವನ್ನು ಪುನರ್ರಚಿಸುವ ಮೂಲಕ ಮತ್ತು ಹೊಸ ನಾಯಕರನ್ನು ಕರೆತರುವುದರಿಂದ, ನಾವು ಆಡಳಿತವನ್ನು ಪುನರುಜ್ಜೀವನಗೊಳಿಸಬಹುದು ಮತ್ತು ರಾಜ್ಯದಲ್ಲಿ ಪಕ್ಷದ ಭವಿಷ್ಯವನ್ನು ಭದ್ರಪಡಿಸಬಹುದು" ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಮುಂಬರುವ ನಾಯಕರಿಗೆ ಮಾರ್ಗದರ್ಶನ ನೀಡಲು ಮತ್ತು ಆಡಳಿತದಲ್ಲಿ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಕೆಲವು ಹಿರಿಯ ಸಚಿವರನ್ನು ಇನ್ನೊಂದು ವರ್ಷದವರೆಗೆ ಉಳಿಸಿಕೊಳ್ಳಬೇಕು ಎಂಬುದು ಕೆಲವರ ವಾದವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಕ್ರಮದಿಂದ ಸರ್ಕಾರದ ಮೇಲೆ ವಿಶ್ವಾಸಾರ್ಹತೆ ಹೆಚ್ಚಿಸುತ್ತದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಕಾಂಗ್ರೆಸ್ ಆಂತರಿಕ ಕಲಹದಿಂದ ಬಳಲುತ್ತಿರುವಾಗ, ಎಲ್ಲರ ಕಣ್ಣುಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಕ್ಷದ ಹೈಕಮಾಂಡ್ ಮೇಲೆ ನೆಟ್ಟಿದೆ.
Advertisement