'ಡಿಸೆಂಬರ್ ಒಳಗೆ ಡಿ.ಕೆ ಶಿವಕುಮಾರ್ ಸಿಎಂ ಆಗದಿದ್ದರೆ ನನ್ನ ಬಳಿ ಬಂದು ಕೇಳಿ': ಶಾಸಕ ಬಸವರಾಜ್ ಶಿವಗಂಗಾ

ಈಗ ಸದ್ಯಕ್ಕೆ ಏನು ಮಾತನಾಡಲ್ಲ, ಡಿಸೆಂಬರ್‌ವರೆಗೂ ಕಾದು ನೋಡಿ ಎಂದು ಹೇಳಿದ್ದಾರೆ.
D K Shivakumar and Basavaraj Shivaganga
ಶಾಸಕ ಬಸವರಾಜ್ ಶಿವಗಂಗಾ -ಡಿ ಕೆ ಶಿವಕುಮಾರ್
Updated on

ದಾವಣಗೆರೆ: ಡಿಸೆಂಬರ್ ಒಳಗೆ ಡಿ ಕೆ ಶಿವಕುಮಾರ್ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ, ಆಗದಿದ್ದರೆ ನನ್ನನ್ನು ಬಂದು ಕೇಳಿ ಎಂದು ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಪುನರುಚ್ಛರಿಸಿದ್ದಾರೆ.

ಇತ್ತೀಚೆಗೆ ಡಿಸೆಂಬರ್ ಒಳಗೆ ರಾಜ್ಯದಲ್ಲಿ ಸಿಎಂ ಬದಲಾವಣೆಯಾಗ್ತಾರೆ, ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಆಗ್ತಾರೆ ಡಿಸೆಂಬರ್ ಒಳಗೆ ಸಿಎಂ ಚೇರ್ ಖಾಲಿ ಆಗದಿದ್ದರೆ ನನ್ನ ಬಂದು ಕೇಳಿ ಎಂದು ಈ ಹಿಂದೆ ತಾವು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈಗ ಸದ್ಯಕ್ಕೆ ಏನು ಮಾತನಾಡಲ್ಲ, ಡಿಸೆಂಬರ್‌ವರೆಗೂ ಕಾದು ನೋಡಿ ಎಂದು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಹೆಸರು ಕೇಳಿ ಬಂದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸದ್ಯ ಕೆಪಿಸಿಸಿ ಅಧ್ಯಕ್ಷ ಹುದ್ದೆ ಖಾಲಿ ಇಲ್ಲ. ಖಾಲಿಯಾದ ಮೇಲೆ ಯಾರಿಗೆ ಅರ್ಹತೆ ಇರುತ್ತೆ ಅವರು ಆಗ್ತಾರೆ. ಮಾಯಕೊಂಡ ಶಾಸಕ ಬಸವಂತಪ್ಪ ಅವರು ಕೂಡ ಆಗಬಹುದು ಎಂದರು.

D K Shivakumar and Basavaraj Shivaganga
'ಬರೆದಿಟ್ಟುಕೊಳ್ಳಿ' ಡಿಸೆಂಬರ್ ವೇಳೆಗೆ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಕಾಂಗ್ರೆಸ್ ಶಾಸಕ ಬಸವರಾಜು ವಿ ಶಿವಗಂಗಾ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಜನಾಕ್ರೋಶ ಮೆರವಣಿಗೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಅವರು ಮೊದಲು ಅದನ್ನು ನೋಡಿಕೊಳ್ಳಲಿ. ರಾಜ್ಯಕ್ಕೆ ಜಿಎಸ್‌ಟಿ ಪಾಲನ್ನು ಕೊಡುತ್ತಿಲ್ಲ, ಈ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲಿ. ಬಿಜೆಪಿ ಸಂಸದರ ನಿಯೋಗ ತೆಗೆದುಕೊಂಡು ಹೋಗಿ ರಾಜ್ಯದ ಪಾಲು ಕೇಳಲಿ. ಅಧಿಕಾರಕ್ಕೆ ಬಂದಿಲ್ಲ ಎಂದು ಹತಾಶೆಯಿಂದ ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com