ಸಿಂಧೂ ನದಿ ನೀರು ತಡೆಹಿಡಿಯಲು ನಮ್ಮಲ್ಲಿ ಸಾಕಷ್ಟು ಅಣೆಕಟ್ಟುಗಳಿವೆಯೇ? ಮೋದಿಗೆ ಖರ್ಗೆ ಪ್ರಶ್ನೆ

ಪಹಲ್ಗಾಮ್ ದಾಳಿ ಭದ್ರತಾ ವೈಫಲ್ಯ ಎಂದು ಸ್ವತಃ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಆ ಕಾರಣಕ್ಕಾಗಿ ಸಭೆ ಕರೆದಿದ್ದೇವೆ ಅಂತ ಅಮಿತ್ ಶಾ ಹೇಳಿದ್ದಾರೆ ಎಂದರು.
Mallikarjun Kharge writes to PM Modi
ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನಿ ಮೋದಿ
Updated on

ಬೆಂಗಳೂರು: 1960ರ ಸಿಂಧೂ ನದಿ ಒಪ್ಪಂದವನ್ನು ಸ್ಥಗಿತಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿರ್ಧಾರವನ್ನು ಅಪ್ರಾಯೋಗಿಕ ಎಂದು ಟೀಕಿಸಿದ ಎಐಸಿಸಿ ಅಧ್ಯಕ್ಷ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪಾಕಿಸ್ತಾನಕ್ಕೆ ಹರಿಯುವ ನೀರನ್ನು ತಡೆಹಿಡಿಯಲು ನಮ್ಮ ದೇಶ ಸಾಕಷ್ಟು ಅಣೆಕಟ್ಟುಗಳನ್ನು ಹೊಂದಿದೆಯೇ? ಎಂದು ಶನಿವಾರ ಪ್ರಶ್ನಿಸಿದ್ದಾರೆ.

ಕೆಲವು ದಿನಗಳ ಹಿಂದೆ ಹೈದರಾಬಾದ್ ಸಂಸದ, ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ, ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದರೂ, ಸಿಂಧೂ ನದಿ ಒಪ್ಪಂದದ ವಿಷಯವನ್ನು ಪ್ರಶ್ನಿಸಿದ್ದರು.

"ಇದು ತಪ್ಪು ಹುಡುಕುವ ಸಮಯವಲ್ಲ. ಸಂದರ್ಭ ಬಂದಾಗ ನಾವು ಅದನ್ನು ಹೇಳುತ್ತೇವೆ. ಕೆಲವು ನಿರ್ದಿಷ್ಟತೆಗಳಿರುತ್ತವೆ. ಆದರೆ ಎಲ್ಲವನ್ನೂ ಈಗಲೇ ಹೇಳುವುದು ಒಳ್ಳೆಯದಲ್ಲ. ತೆಗೆದುಕೊಂಡ ಕ್ರಮದ ಪರಿಣಾಮಗಳೇನು ಎಂಬುದು ಮುಂದೆ ಚರ್ಚೆಯಾಗುತ್ತದೆ. ನಮ್ಮಿಂದ ಹರಿಯುತ್ತಿರುವ ನೀರನ್ನು ನಾವು ಹೇಗೆ ತಡೆಹಿಡಿಯಬಹುದು? ಅದನ್ನು ಸಂಗ್ರಹಿಸಲು ನಮ್ಮಲ್ಲಿ ಸಾಕಷ್ಟು ಅಣೆಕಟ್ಟುಗಳಿವೆಯೇ?. ಸರ್ಕಾರ ಈಗ ತೆಗೆದುಕೊಂಡ ನಿರ್ಧಾರ ಮತ್ತು ನಿರ್ಣಯವು ದೇಶಕ್ಕೆ ಒಳ್ಳೆಯದು. ಆದರೆ ಫಲಿತಾಂಶ ನೋಡದೆ ನಾವು ಟೀಕಿಸುತ್ತಲೇ ಇದ್ದರೆ ಅದು ಒಳ್ಳೆಯದಲ್ಲ" ಎಂದು ಖರ್ಗೆ ವರದಿಗಾರರಿಗೆ ತಿಳಿಸಿದರು.

Mallikarjun Kharge writes to PM Modi
ಪಹಲ್ಗಾಮ್ ಭಯೋತ್ಪಾದಕ ಕೃತ್ಯ ಭಾರತದ ಮೇಲೆ ನೇರ ದಾಳಿ, ದೇಶ ಒಂದಾಗಿ ಹೋರಾಡುತ್ತದೆ: ಮಲ್ಲಿಕಾರ್ಜುನ ಖರ್ಗೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಮೋದಿ ಭಾಗವಹಿಸಬೇಕಿತ್ತು. "ಸರ್ಕಾರದ ಪರವಾಗಿ ಮೋದಿ, ಭದ್ರತಾ ಲೋಪ ಸೇರಿದಂತೆ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಸಭೆಯಲ್ಲಿ ಇರಬೇಕಿತ್ತು. ಆದರೆ ಅವರು ಸಭೆಗೆ ಗೈರುಹಾಜರಾಗಿದ್ದರು, ಅದು ಸರಿಯಲ್ಲ. ಆದರೆ ಭಯೋತ್ಪಾದನೆಯನ್ನು ನಿಗ್ರಹಿಸುವುದನ್ನು ಸವಾಲಾಗಿ ತೆಗೆದುಕೊಳ್ಳುವಂತೆ ನಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಹೇಳಿದ್ದೇವೆ. ಪಹಲ್ಗಾಮ್‌ನಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ಅವರು ಭರವಸೆ ನೀಡಿದರು. ದೇಶದ ಹಿತದೃಷ್ಟಿಯಿಂದ ಸರ್ಕಾರ ತೆಗೆದುಕೊಂಡ ಯಾವುದೇ ನಿರ್ಧಾರವನ್ನು ಎಲ್ಲರೂ ಒಗ್ಗಟ್ಟಿನಿಂದ ಬೆಂಬಲಿಸುವಂತೆ ನಾವು ಹೇಳಿದ್ದೇವೆ" ಎಂದರು.

ಪಹಲ್ಗಾಮ್ ದಾಳಿ ಭದ್ರತಾ ವೈಫಲ್ಯ ಎಂದು ಸ್ವತಃ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಆ ಕಾರಣಕ್ಕಾಗಿ ಸಭೆ ಕರೆದಿದ್ದೇವೆ ಅಂತ ಅಮಿತ್ ಶಾ ಹೇಳಿದ್ದಾರೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com