ನಕಲಿ ವೋಟ್​ ನಿಂದಲೇ ನನ್ನ ಮೊದಲ ಸೋಲಾಯ್ತು; ಬಿಜೆಪಿ ಗೆಲುವಿನ ರಹಸ್ಯ ಬಯಲು: ಖರ್ಗೆ

ನಾನು 2019ರ ಲೋಕಸಭೆ ಚುನಾವಣೆ ವೇಳೆ ಚುನಾವಣಾ ರಿಗ್ಗಿಂಗ್‌ಗೆ ಬಲಿಯಾಗಿದ್ದೇನೆ. ನನ್ನ ಜೀವನದಲ್ಲಿ 12ಕ್ಕೂ ಹೆಚ್ಚು ಚುನಾವಣೆಗಳನ್ನು ಗೆದ್ದಿದ್ದೇನೆ.
Mallikarjun Kharge
ಮಲ್ಲಿಕಾರ್ಜುನ ಖರ್ಗೆ
Updated on

ಬೆಂಗಳೂರು: ಸೋಲಿಲ್ಲದ ಸರದಾರ ಎಂದೇ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮೊದಲ ಸೋಲಿಗೆ ಚುನಾವಣಾ ಅಕ್ರಮವೇ ಕಾರಣ ಎಂದು ಶುಕ್ರವಾರ ಆರೋಪಿಸಿದ್ದಾರೆ

ಮತಗಳ್ಳತನದ ವಿರುದ್ಧ ಇಂದು ನಗರದ ಫ್ರೀಡಂಪಾರ್ಕ್​ನಲ್ಲಿ ನಡೆದ ಕಾಂಗ್ರೆಸ್ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ 2019ರ ಸೋಲು ಹೊರತುಪಡಿಸಿ, ಎಂದಿಗೂ ಚುನಾವಣೆಯಲ್ಲಿ ಸೋಲು ಅನುಭವಿಸಿಲ್ಲ ಎಂದು ಹೇಳಿದರು.

ನಾನು 2019ರ ಲೋಕಸಭೆ ಚುನಾವಣೆ ವೇಳೆ ಚುನಾವಣಾ ರಿಗ್ಗಿಂಗ್‌ಗೆ ಬಲಿಯಾಗಿದ್ದೇನೆ. ನನ್ನ ಜೀವನದಲ್ಲಿ 12ಕ್ಕೂ ಹೆಚ್ಚು ಚುನಾವಣೆಗಳನ್ನು ಗೆದ್ದಿದ್ದೇನೆ. ಆದರೆ 2019 ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಚುನಾವಣಾ ಅಕ್ರಮದಿಂದಾಗಿ ನಾನು ಸೋತಿದ್ದೇನೆ" ಎಂದು ಕಾಂಗ್ರೆಸ್ ಮುಖ್ಯಸ್ಥರು ಆರೋಪಿಸಿದರು.

2019ರ ಸಂಸತ್ ಚುನಾವಣೆಯಲ್ಲಿ ತಾವು ಸ್ಪರ್ಧಿಸಿದ್ದ ಗುಲ್ಬರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ "ನಕಲಿ ಮತದಾನ"ದಲ್ಲಿ ತೊಡಗಿತ್ತು. ಪ್ರತಿಯೊಂದರಲ್ಲೂ 20,000 ಮತಗಳನ್ನು ಗಳಿಸಿದೆ ಎಂದು ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

Mallikarjun Kharge
ಇಡೀ ದೇಶದಲ್ಲಿ ಮತಗಳ್ಳತನವಾಗಿದೆ; ಕೂಡಲೇ ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು: ಸಿಎಂ ಆಗ್ರಹ

ವಿರೋಧಿಗಳನ್ನು "ಬೆದರಿಸಲು" ಮತ್ತು ಅಧಿಕಾರ ಪಡೆಯಲು ಬಿಜೆಪಿ ಜಾರಿ ನಿರ್ದೇಶನಾಲಯ, ಕೇಂದ್ರ ತನಿಖಾ ಸಂಸ್ಥೆ ಮತ್ತು ಆದಾಯ ತೆರಿಗೆ ಇಲಾಖೆಯನ್ನು ಬಳಸುತ್ತಿದೆ ಎಂದು ಖರ್ಗೆ, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕರ್ನಾಟಕದ ಉದಾಹರಣೆಯನ್ನು ಉಲ್ಲೇಖಿಸಿ, ಸ್ಪಷ್ಟ ಬಹುಮತವಿಲ್ಲದಿದ್ದರೂ ಸಹ, ಬಿಜೆಪಿ ಅನೇಕ ಶಾಸಕರ ಪಕ್ಷಾಂತರವನ್ನು ಪ್ರೇರೇಪಿಸುವ ಮೂಲಕ ಆಗಿನ ಆಡಳಿತಾರೂಢ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿತು ಎಂದರು.

ಗೋವಾ, ಮಹಾರಾಷ್ಟ್ರ ಮತ್ತು ಮಣಿಪುರದಲ್ಲೂ ಇದೇ ಆಗಿದೆ. ಅವರು(ಬಿಜೆಪಿ) ಯಾವುದೇ ಚುನಾವಣೆಯಲ್ಲಿ ಗೆಲ್ಲಲಿಲ್ಲ, ಆದರೆ ಅವರು ಜನರಿಗೆ ಹಣ ನೀಡಿ ಸರ್ಕಾರವನ್ನು ಖರೀದಿಸಿದರು" ಎಂದು ಕಾಂಗ್ರೆಸ್ ಅಧ್ಯಕ್ಷ ಆರೋಪಿಸಿದರು.

2024 ರ ಲೋಕಸಭಾ ಚುನಾವಣೆಯಲ್ಲಿ "ಮೋದಿ ಮತ್ತು ಕಂಪನಿ" ಕಾನೂನುಬದ್ಧವಾಗಿ ಗೆಲುವು ಸಾಧಿಸಿಲ್ಲ. ಬಿಜೆಪಿ ಗೆಲುವು "ರಹಸ್ಯ" ಈಗ ಬಯಲಾಗಿದೆ. ಅವರು ಮತಗಳ್ಳತನದಿಂದ ಗೆಲುವು ಸಾಧಿಸಿದ್ದಾರೆ ಎಂದು ಖರ್ಗೆ ಆರೋಪಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com