ಬೆಳಗಾವಿ 'ಸಹಕಾರಿ' ಯುದ್ಧ: ಕತ್ತಿ ಕುಟುಂಬದ ಭದ್ರಕೋಟೆಗೆ ಲಗ್ಗೆಯಿಡಲು ಜಾರಕಿಹೊಳಿ ಸಜ್ಜು!

1980 ರ ದಶಕದ ಆರಂಭದಲ್ಲಿ ಸಹಕಾರಿ ನಾಯಕ ಅಪ್ಪಣ್ಣಗೌಡ ಪಾಟೀಲ್ ಸ್ಥಾಪಿಸಿದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ, ಜಿಲ್ಲೆಯ ಸಹಕಾರಿ ಚಳುವಳಿಗೆ ಪ್ರಮುಖ ಪ್ರಚೋದನೆ ನೀಡಿತು, ನಂತರ ಅದು ಕತ್ತಿ ಕುಟುಂಬದ ನಿಯಂತ್ರಣಕ್ಕೊಳಪಟ್ಟಿತು.
Satish Jarkiholi
ಸತೀಶ್ ಜಾರಕಿಹೊಳಿ
Updated on

ಬೆಳಗಾವಿ: ಬೆಳಗಾವಿಯಲ್ಲಿ ಸಹಕಾರಿ ವಲಯವು ಎರಡು ಪ್ರಬಲ ರಾಜಕೀಯ ಕುಟುಂಬಗಳಾದ ಗೋಕಾಕ್‌ನ ಜಾರಕಿಹೊಳಿ ಮತ್ತು ಹುಕ್ಕೇರಿಯ ಕತ್ತಿ ಕುಟುಂಬದ ನಡುವೆ ತೀವ್ರ ಜಟಾಪಟಿಗೆ ಸಾಕ್ಷಿಯಾಗುತ್ತಿದೆ. ಏಕೆಂದರೆ ಎರಡೂ ಕುಟುಂಬಗಳು ಜಿಲ್ಲೆಯ ಆರ್ಥಿಕ ಮತ್ತು ರಾಜಕೀಯ ಭೂದೃಶ್ಯವನ್ನು ದೀರ್ಘಕಾಲದಿಂದ ರೂಪಿಸಿರುವ ಪ್ರಮುಖ ಸಹಕಾರಿ ಸಂಸ್ಥೆಗಳ ಮೇಲೆ ಕಣ್ಣಿಟ್ಟಿವೆ.

ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ (HRECS)ಮತ್ತು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್. ಈ ಮೂರೂ ಸಂಸ್ಥೆಗಳು ಐತಿಹಾಸಿಕವಾಗಿ ಕತ್ತಿ ಕುಟುಂಬದ ಹಿಡಿತದಲ್ಲಿದ್ದು, ಜಾರಕಿಹೊಳಿ ಸಹೋದರರು ಮೂರು ಪ್ರಮುಖ ಕ್ಷೇತ್ರಗಳತ್ತ ಗಮನ ಹರಿಸಿದ್ದಾರೆ.

ಕರ್ನಾಟಕದ ಪ್ರಮುಖ ಸಹಕಾರಿ ಬ್ಯಾಂಕುಗಳಲ್ಲಿ ಒಂದಾದ ಬಿಡಿಸಿಸಿ ಬ್ಯಾಂಕ್ ದಶಕಗಳಿಂದ ಬಲವಾದ ಕಾರ್ಯಕ್ಷಮತೆ ಮತ್ತು ಪ್ರಭಾವ ಹೊಂದಿದೆ. ಬೆಳಗಾವಿಯಾದ್ಯಂತದ ಪ್ರಮುಖ ಶಾಸಕರು ಮತ್ತು ನಾಯಕರನ್ನು ತನ್ನ ಮಂಡಳಿಗೆ ಸೆಳೆಯುತ್ತಿದೆ. 1980 ರ ದಶಕದ ಆರಂಭದಲ್ಲಿ ಸಹಕಾರಿ ನಾಯಕ ಅಪ್ಪಣ್ಣಗೌಡ ಪಾಟೀಲ್ ಸ್ಥಾಪಿಸಿದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ, ಜಿಲ್ಲೆಯ ಸಹಕಾರಿ ಚಳುವಳಿಗೆ ಪ್ರಮುಖ ಪ್ರಚೋದನೆಯನ್ನು ನೀಡಿತು, ನಂತರ ಅದು ಯವರ ನಿಯಂತ್ರಣಕ್ಕೆ ಒಳಪಟ್ಟಿತು. ಕರ್ನಾಟಕದ ಸಹಕಾರಿ ಕ್ಷೇತ್ರದ ಭೀಷ್ಮ ಎಂದೇ ಪೂಜಿಸಲ್ಪಡುವ ಪಾಟೀಲ್ ಸ್ಥಾಪಿಸಿದ HRECS, ದಶಕಗಳಿಂದ ಕತ್ತಿ ಕುಟುಂಬದ ಹಿಡಿತದಲ್ಲಿದೆ.

ಆದರೆ ಇತ್ತೀಚೆಗೆ ಅಧಿಕಾರದ ಸಮತೋಲನ ಬದಲಾಗುತ್ತಿದೆ. ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದ ಗುಂಪು ಇತ್ತೀಚೆಗೆ ಮಾಜಿ ಸಂಸದ ರಮೇಶ್ ಕತ್ತಿ ಅವರನ್ನು ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದೆ, ಇದು ಜಾರಕಿಹೊಳಿಯವರ ಬೆಳೆಯುತ್ತಿರುವ ಪ್ರಾಬಲ್ಯದ ಬಗ್ಗೆ ಸೂಚಿಸುತ್ತದೆ. ಅಕ್ಟೋಬರ್ 19 ರಂದು ನಡೆಯಲಿರುವ ಚುನಾವಣೆಯಲ್ಲಿ ಬ್ಯಾಂಕಿನ ಮಂಡಳಿಯನ್ನು ತನ್ನ ಕೈವಶ ಲು ಈ ಗುಂಪು ಸಜ್ಜಾಗಿದೆ.

Satish Jarkiholi
ಬೆಳಗಾವಿ: ಸತೀಶ್ ಜಾರಕಿಹೊಳಿ ಆಪ್ತನಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಪಟ್ಟ; ಹೆಚ್ಚು ಸದಸ್ಯರ ಬಲವಿದ್ದರೂ ಎಡವಿದ ಬಿಜೆಪಿ!

ಇದೇ ವೇಳೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹುಕ್ಕೇರಿ ರಾಜಕೀಯಕ್ಕೆ ಒತ್ತು ನೀಡುತ್ತಿದ್ದಾರೆ, ಹಿರಣ್ಯಕೇಶಿ ಕಾರ್ಖಾನೆ ಮತ್ತು HRECS ಅನ್ನು ಪುನರುಜ್ಜೀವನಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಪ್ರತಿಜ್ಞೆ ಮಾಡುತ್ತಿದ್ದಾರೆ. ಕಳೆದ ವರ್ಷ ಮಾಜಿ ಸಚಿವ ಉಮೇಶ್ ಕತ್ತಿ ನಿಧನರಾದ ನಂತರ ಕತ್ತಿ ಕುಟುಂಬದ ಹಿಡಿತ ದುರ್ಬಲಗೊಂಡಿದೆ, ಹೀಗಾಗಿ ಈ ಪ್ರದೇಶದಲ್ಲಿ ಕತ್ತಿ ಕುಟುಂಬ ದೀರ್ಘಕಾಲದಿಂದ ಹೊಂದಿದ್ದ ರಾಜಕೀಯ ಪ್ರಭಾವವನ್ನು ಸಹ ಕಳೆದುಕೊಂಡಿದೆ.

ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಿರುವ ಜಾರಕಿಹೊಳಿ ಕತ್ತಿ ಪ್ರಾಬಲ್ಯವಿದ್ದ ಪ್ರಬಲ ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು "ಸಹಕಾರಿ ಯುದ್ಧ" ಆರಂಭಿಸಿದ್ದಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ರಮೇಶ್ ಕತ್ತಿ ಜಾರಕಿಹೊಳಿ ಅವರನ್ನು ಹುಕ್ಕೇರಿಗೆ ಕಾಲಿಡದಂತೆ ಎಚ್ಚರಿಕೆ ನೀಡಿದ್ದಾರೆ. ಶಾಸಕ ನಿಖಿಲ್ ಕತ್ತಿ ಸೇರಿದಂತೆ ಅವರ ಕುಟುಂಬವು ಕ್ಷೇತ್ರವನ್ನು "ನಾಲ್ಕು ಕಡೆಯಿಂದ" ಕಾಪಾಡುತ್ತದೆ ಎಂದು ಘೋಷಿಸಿದರು. ಇದಕ್ಕೆ ತಿರುಗೇಟು ನೀಡಿರುವ ಸತೀಶ್ ಜಾರಕಿಹೊಳಿ, ರಮೇಶ್ "ಮಧ್ಯಾಹ್ನ ಎಂದಿನಂತೆ ತಡವಾಗಿ ಎಚ್ಚರಗೊಳ್ಳುತ್ತಾರೆ, ಆದರೆ ಅಷ್ಟರಲ್ಲಿ ಮುಂಜಾನೆಯ ಕೆಲಸವನ್ನು ಮುಗಿಸಲು ನಾನು ಹುಕ್ಕೇರಿಯಲ್ಲಿರುತ್ತೇನೆ ಎಂದು ವ್ಯಂಗ್ಯವಾಡಿದರು.

ಸಕ್ಕರೆ ಕಾರ್ಖಾನೆ ಮತ್ತು HRECS ಎರಡೂ ನಿರೀಕ್ಷೆಯಂತೆ ಪ್ರಗತಿ ಸಾಧಿಸಲು ವಿಫಲವಾಗಿವೆ ಸತೀಶ್ ಹೇಳಿದ್ದಾರೆ. ನಾವು ದಿವಂಗತ ಅಪ್ಪಣ್ಣಗೌಡ ಪಾಟೀಲ್ ಅವರ ಹೆಸರಿನಲ್ಲಿ HRECS ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದೇವೆ ಮತ್ತು ನಾವು ಜನರಿಗೆ ನಿಜವಾದ ಸೇವೆಯನ್ನು ನೀಡುತ್ತೇವೆ ಎಂದು ಅವರು ಪ್ರತಿಪಾದಿಸಿದರು, ಹುಕ್ಕೇರಿಯ ಸಹಕಾರಿ ವಲಯದ ಮೂಲಕ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com