'ಅವರು RSS ಗೀತೆ ಹಾಡಬಹುದು, ಶಾ ಜತೆ ವೇದಿಕೆ ಹಂಚಿಕೊಳ್ಳಬಹುದು, ಅಂಬಾನಿ ಮಗನ ಮದುವೆಗೂ ಹೋಗಬಹುದು; ನಾವು ಮಾತಾಡಿದ್ರೆ ತಪ್ಪು'; Video

ಆರೆಸ್ಸೆಸ್‌ ಕಾಂಗ್ರೆಸ್ ಸಿದ್ದಾಂತಕ್ಕೆ ತದ್ವಿರುದ್ದ ಎಂದು ಗೊತ್ತಿದ್ದರೂ ಸದನದಲ್ಲಿ ಆರೆಸ್ಸೆಸ್‌ ಗೀತೆ ಹಾಡುತ್ತಾರೆ. ಸದನಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿ ಶಾಸಕರ ಸಭೆ ನಡೆಸಬಹುದು, ನಾವು ನಡೆಸಿದರ ಅಪರಾಧ.
KN Rajanna
ಕೆ.ಎನ್‌.ರಾಜಣ್ಣ
Updated on

ತುಮಕೂರು: ಅವರು ಆರ್‌ಎಸ್‌ಎಸ್‌ ಗೀತೆ ಹಾಡಬಹುದು, ಖಾಸಗಿ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಅಮಿತ್‌ ಶಾ ಜತೆಗೆ ವೇದಿಕೆ ಹಂಚಿಕೊಳ್ಳಬಹುದು, ಏನು ಬೇಕಾದರೂ ಮಾಡಬಹುದು. ನಾವು ಏನೂ ಮಾತಾಡುವಂತಿಲ್ಲ ಎಂದು ಮಾಜಿ ಸಚಿವ ಕೆ.ಎನ್‌.ರಾಜಣ್ಣ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಕಿಡಿಕಾರಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಕೆಎನ್ ರಾಜಣ್ಣ , ಡಿ.ಕೆ.ಶಿವಕುಮಾರ್‌ ಅಧಿವೇಶನದಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿದ ಬಗ್ಗೆ ಪ್ರತಿಕ್ರಿಯಿಸಿದರು. ಪ್ರಯಾಗ್‌ರಾಜ್‌ನ ಗಂಗೆಯಲ್ಲಿ ಸ್ನಾನ ಮಾಡಿದ ಮಾತ್ರಕ್ಕೆ ಬಡತನ ನಿವಾರಣೆಯಾಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಇದರ ನಂತರವೂ ಡಿ.ಕೆ.ಶಿವಕುಮಾರ್‌ ಹೋಗಿ ಪುಣ್ಯ ಸ್ನಾನ ಮಾಡಿದರು.

ಆರೆಸ್ಸೆಸ್‌ ಕಾಂಗ್ರೆಸ್ ಸಿದ್ದಾಂತಕ್ಕೆ ತದ್ವಿರುದ್ದ ಎಂದು ಗೊತ್ತಿದ್ದರೂ ಸದನದಲ್ಲಿ ಆರೆಸ್ಸೆಸ್‌ ಗೀತೆ ಹಾಡುತ್ತಾರೆ. ಸದನಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿ ಶಾಸಕರ ಸಭೆ ನಡೆಸಬಹುದು, ನಾವು ನಡೆಸಿದರ ಅಪರಾಧ. ಈ ಎಲ್ಲಾ ವೈರುಧ್ಯಗಳಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡಲಿದ್ದೇನೆ ಎಂದು ಅಸಮಾಧಾನ ಹೊರಹಾಕಿದರು.

ಕೋಮುವಾದಿಗಳಿಗೆ ಬೆಂಬಲವಾಗಿರುವ ಮುಖೇಶ್‌ ಅಂಬಾನಿ ಮಗನ ಮದುವೆಗೆ ಹೋಗುವುದಿಲ್ಲ ಎಂದು ಸ್ವತಃ ರಾಹುಲ್ ಗಾಂಧಿ ಅವರು ಹೇಳಿದ ನಂತರವೂ ಅಂಬಾನಿ ಮಗನ ಮದುವೆ ಹೋಗುತ್ತಾರೆ ,ಅಂಬಾನಿ ಮಗನ ಮದುವೆಯ ಆಮಂತ್ರಣವನ್ನು ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಸ್ವೀಕರಿಸುವುದಿಲ್ಲ. ಅಂತಹ ಮದುವೆಗೆ ಇವರು (ಡಿಕೆಶಿ) ಕುಟುಂಬ ಸಮೇತ ಹೋಗುತ್ತಾರೆ ಎಂದು ಕಿಡಿಕಾರಿದರು. ನಾವು ಯಾವುದೇ ಶಾಸಕರ, ಮಂತ್ರಿಗಳ ಸಭೆ ಕರೆಯುವ ಹಾಗಿಲ್ಲ. ಬೇರೆಯವರು ಕರೆಯಬಹುದು, ಮಾತಾಡಬಹುದು ಎಂದರು.

KN Rajanna
ಧರ್ಮಸ್ಥಳ ಪ್ರಕರಣದಲ್ಲಿ ಎಡವಟ್ಟು: ಸರ್ಕಾರದ ತಪ್ಪನ್ನು ಬಿಚ್ಚಿಟ್ಟ ಕಾಂಗ್ರೆಸ್ ಶಾಸಕ! Video

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com