ಹಲವು ಅಪರಾಧಗಳಲ್ಲಿ ಭಾಗಿಯಾದ ಬಜರಂಗದಳವನ್ನು ನಿಷೇಧಿಸಿ: ಬಿಕೆ ಹರಿಪ್ರಸಾದ್ ಆಗ್ರಹ

"ಬಜರಂಗದಳವನ್ನು ನಿಷೇಧಿಸಬೇಕೆಂದು ನಾನು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದೇನೆ. ಅದು ನಮ್ಮ ಪ್ರಣಾಳಿಕೆಯಲ್ಲಿತ್ತು" ಎಂದು ಬಿಕೆ ಹರಿಪ್ರಸಾದ್ ಅವರು ಪಿಟಿಐ ವಿಡಿಯೋಗೆ ತಿಳಿಸಿದ್ದಾರೆ.
Congress MLC Hariprasad demands ban on Bajrang Dal saying they are involved in crimes
ಬಿಕೆ ಹರಿಪ್ರಸಾದ್
Updated on

ಬೆಳಗಾವಿ: ಬಜರಂಗದಳವು ಅನೇಕ ಅಪರಾಧಗಳಲ್ಲಿ ಭಾಗಿಯಾಗಿದೆ. ಹೀಗಾಗಿ ಅದನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಅವರು ಬುಧವಾರ ಹೇಳಿದ್ದಾರೆ.

ತಮ್ಮ ಈ ಬೇಡಿಕೆಯನ್ನು ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಏಕೆಂದರೆ ಬಜರಂಗದಳ ನಿಷೇಧ ಸಹ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯ ಭಾಗವಾಗಿತ್ತು ಎಂದಿದ್ದಾರೆ.

"ಬಜರಂಗದಳವನ್ನು ನಿಷೇಧಿಸಬೇಕೆಂದು ನಾನು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದೇನೆ. ಅದು ನಮ್ಮ ಪ್ರಣಾಳಿಕೆಯಲ್ಲಿತ್ತು" ಎಂದು ಬಿಕೆ ಹರಿಪ್ರಸಾದ್ ಅವರು ಪಿಟಿಐ ವಿಡಿಯೋಗೆ ತಿಳಿಸಿದ್ದಾರೆ.

Congress MLC Hariprasad demands ban on Bajrang Dal saying they are involved in crimes
ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಮರ್ಡರ್​​ ಕೇಸ್: ಬಜರಂಗದಳ ಕಾರ್ಯಕರ್ತ ಬಂಧನ

ಬಜರಂಗದಳದ ಚಟುವಟಿಕೆಗಳು ಕರ್ನಾಟಕದಲ್ಲಿ ಹೊಸದಲ್ಲ. ನಮ್ಮ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಒಬ್ಬರಾದ ಗಣೇಶ್ ಗೌಡ ಅವರನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾಡಲಾಯಿತು. ಅವರನ್ನು ಬಜರಂಗದಳ ಕಾರ್ಯಕರ್ತರೇ ಕೊಂದರು. ಬಜರಂಗದಳ ಕಾರ್ಯಕರ್ತರು ಹಲವಾರು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ" ಎಂದು ಹರಿಪ್ರಸಾದ್ ಆರೋಪಿಸಿದರು.

"2016 ಅಥವಾ 17 ರ ಹಿಂದೆ ಉಡುಪಿಯಲ್ಲಿ, ಬಿಜೆಪಿ ಮಂಡಲ ಅಧ್ಯಕ್ಷ, ಹಿಂದೂ ಒಬ್ಬರನ್ನು ಅದೇ ಸಂಘಟನೆ, ಹಿಂದೂ ಜಾಗರಣ್ ವೇದಿಕೆ ಸೇರಿ ಕೊಂದರು" ಎಂದು ಎಂಎಲ್‌ಸಿ ಆರೋಪಿಸಿದರು.

"ಶಾಂತಿಯುತ ನಾಗರಿಕ ಸಮಾಜಕ್ಕೆ ಬೆದರಿಕೆಯಾಗಿರುವ" ಈ ಸಂಘಟನೆಗಳನ್ನು ಸರ್ಕಾರ ನಿಷೇಧಿಸಬೇಕು ಎಂದು ಅವರು ಹೇಳಿದರು.

ಡಿಸೆಂಬರ್ 5 ರಂದು, ಚಿಕ್ಕಮಗಳೂರಿನಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ(38) ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅವರು ಗ್ರಾಮ ಪಂಚಾಯತ್ ಸದಸ್ಯರಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com