ದೆಹಲಿಗೆ ಹೋಗುವುದಕ್ಕೆ ನಮಗೇನು ದಾರಿ ಗೊತ್ತಿಲ್ಲವೇ? ಭಿನ್ನಮತೀಯರು ಮಾನಸಿಕ ಅಸ್ವಸ್ಥರು; MP ರೇಣುಕಾಚಾರ್ಯ

ಕೇವಲ ನಾಲ್ಕೈದು ಜನ ದಿಲ್ಲಿಗೆ ಓಡಾಡುತ್ತಿದ್ದಾರೆ. ಹಿಂದೆ ಬಿ.ಎಸ್. ಯಡಿಯೂರಪ್ಪನವರಿಗೆ ತೊಂದರೆ ಕೊಟ್ಟಾಗ ಬಿಜೆಪಿಗೆ ಯಾವ ಸ್ಥಿತಿ ಬಂದಿತೆಂಬ ಸಂಗತಿಯನ್ನು ಮರೆಯಬಾರದು ಎಂದು ಎಚ್ಚರಿಕೆ ನೀಡಿದರು.
Renukacharya
ರೇಣುಕಾಚಾರ್ಯ
Updated on

ದಾವಣಗೆರೆ: ಯತ್ನಾಳ್​ ಮತ್ತು ಟೀಂ ದೆಹಲಿಗೆ ಪ್ರಯಾಣ ಬೆಳೆಸಿರುವ ವಿಚಾರದ ಕುರಿತು ಮಾತನಾಡಿದ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ‘ಭಿನ್ನಮತಿಯರು ಎಷ್ಟೇ ದೆಹಲಿ ದಂಡಯಾತ್ರೆ ಮಾಡಿದರೂ ಅದು ಯಶಸ್ವಿಯಾಗಲ್ಲಾ. ಭಿನ್ನಮತಿಯರು ಮಾನಸಿಕ ಅಸ್ವಸ್ಥರಾಗಿದ್ದಾರೆ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆಯೋದು ಅಷ್ಟೇ ಸತ್ಯ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಏನೆಂಬುದು ದಿಲ್ಲಿ ನಾಯಕರಿಗೂ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವ ಕೆಲಸವನ್ನು ವಿಜಯೇಂದ್ರ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 2 ವರ್ಷವಾದರೂ ಇನ್ನೂ ಸರ್ಕಾರ ಟೇಕಾಫ್ ಆಗಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡದೇ, ಬಿಜೆಪಿಯವರ ವಿರುದ್ಧವೇ ಭಿನ್ನಮತೀಯರು ಮಾತನಾಡುತ್ತಿದ್ದಾರೆ. ಕೇವಲ ನಾಲ್ಕೈದು ಜನ ದಿಲ್ಲಿಗೆ ಓಡಾಡುತ್ತಿದ್ದಾರೆ. ಹಿಂದೆ ಬಿ.ಎಸ್. ಯಡಿಯೂರಪ್ಪನವರಿಗೆ ತೊಂದರೆ ಕೊಟ್ಟಾಗ ಬಿಜೆಪಿಗೆ ಯಾವ ಸ್ಥಿತಿ ಬಂದಿತೆಂಬ ಸಂಗತಿಯನ್ನು ಮರೆಯಬಾರದು ಎಂದು ಎಚ್ಚರಿಕೆ ನೀಡಿದರು.

ಭಿನ್ನಮತೀಯರು ಇಷ್ಟೆಲ್ಲಾ ಮಾತನಾಡುತ್ತಿರುವುದು, ಮಾಡುತ್ತಿರುವುದು ಕಾಂಗ್ರೆಸ್ ನಾಯಕರ ಕುಮ್ಮಕ್ಕಿನಿಂದ. ಬಿಜೆಪಿಯನ್ನು ಹಾಳು ಮಾಡುವುದಕ್ಕೆ ಭಿನ್ನಮತೀಯರು ಹೀಗೆಲ್ಲಾ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಭಿನ್ನಮತೀಯರೆಲ್ಲಾ ಚುನಾವಣೆಗೆ ಸ್ಪರ್ಧೆ ಮಾಡಲಿ, ಯಾರ ಯೋಗ್ಯತೆ ಏನೆಂಬುದು ಅವಾಗ ಗೊತ್ತಾಗುತ್ತದೆ ಎಂದು ಅವರು ತಿಳಿಸಿದರು.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶ್ರೀರಾಮುಲು ಎತ್ತಿ ಕಟ್ಟಲು ಪ್ರಯತ್ನಿಸಿದರು, ರಾಮುಲು ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲಿಲ್ಲ. ಈಗ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ ಹೆಸರುಗಳನ್ನು ಸುಮ್ಮನೇ ಎಳೆದು ತರುತ್ತಿದ್ದಾರೆ. ನಾವು ಎಲ್ಲರೂ ಸೇರಿಕೊಂಡು, ದಿಲ್ಲಿಗೆ ಹೋಗುವುದಕ್ಕೆ ಸಿದ್ಧರಿದ್ದೇವೆ. ದಿಲ್ಲಿಗೆ ದಾರಿ ನಮಗೇನು ಗೊತ್ತಿಲ್ಲವೇ? ಇಂತಹ ಭಿನ್ನಮತೀಯರ ತಲೆ ಹರಟೆ ಹೆಚ್ಚಾಗಿದೆ. ಇದರಿಂದ ಪಕ್ಷದ ವರ್ಚಸ್ಸುಸಹ ಕಡಿಮೆಯಾಗುತ್ತಿದೆ ಎಂದು ಅವರು ದೂರಿದರು.

Renukacharya
ಚುನಾವಣೆ ದಿನ ಹತ್ತಿರವಾದರೂ ಶಮನವಾಗದ ಭಿನ್ನಮತ: ಅತೃಪ್ತ ನಾಯಕರನ್ನು ಸಮಾಧಾನಗೊಳಿಸಲು ಬಿಜೆಪಿ ಹರಸಾಹಸ!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com