
ನವದೆಹಲಿ: ಮಹಾ ಕುಂಭಮೇಳದಲ್ಲಿ ಡಿಕೆ ಶಿವಕುಮಾರ್ ಪುಣ್ಯಸ್ನಾನ ಮಾಡಿದ್ದಾರೆ. ಇದರಿಂದ ಅವರ ಎಷ್ಟು ಪಾಪ ಕಳೀತು ಅಂತ ಖರ್ಗೆ ವರದಿ ಪಡೆಯಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದರು.
ಡಿಸಿಎಂ ಡಿ.ಕೆ ಶಿವಕುಮಾರ್ ಮಹಾ ಕುಂಭಮೇಳಕ್ಕೆ ತೆರಳಿ ಪುಣ್ಯಸ್ನಾನ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಮಾತನಾಡಿ, ಅವರವರ ವೈಯಕ್ತಿಕ ಭಕ್ತಿಯ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಅವರು ಮಹಾ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಎಷ್ಟು ಪಾಪ ಕಳೆದು ಹೋಯಿತು ಎಂದು ಮಲ್ಲಿಕಾರ್ಜುನ ಖರ್ಗೆ ವರದಿ ಪಡೆಯಬೇಕು. ಹಿಂದೂಗಳೇ ವೋಟ್ ಹಾಕೋದು, ಕಡೆಗೆ ಮುಸ್ಲಿಮರಿಂದ ಗೆದ್ದೆವು ಅಂತ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.
ನಾವು ದೆಹಲಿಗೆ ಸೋಮಣ್ಣ ಮನೆ ಪೂಜೆ ಸಲುವಾಗಿ ಬಂದಿದ್ದೇವೆ. ಮುಂದೆ ಏನಾಗುತ್ತದೆ ಎಂದು ನಮಗೆ ಗೊತ್ತಿಲ್ಲ. ಎಲ್ಲರಿಗೂ ಬನ್ನಿ ಎಂದು ಆಹ್ವಾನ ನೀಡಿದ್ದರು ಹಾಗಾಗಿ ಬಂದಿದ್ದೇವೆ. ಸೋಮಣ್ಣನವರು ನಮಗೆ ಆತ್ಮೀಯರಿದ್ದಾರೆ. ರೈಲ್ವೇ ಮಂತ್ರಿಗಳಾದ ಮೇಲೆ ನಮ್ಮ ಕೆಲಸ ಮಾಡಿಕೊಟ್ಟಿದ್ದಾರೆ ಎಂದರು.
ಪಕ್ಷದ ಬಗ್ಗೆ ಚಿಂತನೆ ಮಾಡುವುದು ಕಾರ್ಯಕರ್ತರ ಕರ್ತವ್ಯವಾಗಿದೆ. ಇಂದು ಏನಾದರೂ ಚರ್ಚೆ ನಡೆದರು ನಡೆಯಬಹುದು. ಬರೀ ಲಿಂಗಾಯತರು ಅಂತಲ್ಲ, ಪಕ್ಷದಲ್ಲಿರುವ ಎಲ್ಲಾ ಸದಸ್ಯರು ಚರ್ಚೆಯಲ್ಲಿದ್ದಾರೆ. ಅಧ್ಯಕ್ಷರು ಟೆನ್ಷನ್ ಆಗಿದ್ದಾರೋ ಇಲ್ವೋ ಗೊತ್ತಿಲ್ಲ. ಆದರೆ ನಾವು ಮೆನ್ಷನ್ ಮಾಡೋಕೆ ದೆಹಲಿಗೆ ಬಂದಿದ್ದೇವೆ. ನಾವು ಮೊನ್ನೆ ಫೌಂಡೇಶನ್ ಹಾಕಲು ಬಂದಿದ್ದೆವು. ನಮ್ಮ ಸಂಸತ್ ಸದಸ್ಯರ ಭಾವನೆಗಳನ್ನು ಕೇಂದ್ರ ಬಿಜೆಪಿ ಗಣನೆಗೆ ತೆಗೆದುಕೊಳ್ಳುತ್ತದೆ. ವಿಜಯೇಂದ್ರ ಅವರು ಬದಲಾಗ್ತಾರೆ ಎನ್ನುವ ವಿಶ್ವಾಸ ನಮಗೆ ಇದೆ ಎಂದರು.
Advertisement