ಬಿಜೆಪಿ ಸಂಸದರಿಗೆ ಧಮ್ ಇದ್ರೆ ಮೆಟ್ರೋ ದರ ಕಡಿಮೆ ಮಾಡಿಸಲಿ: ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ನಿನ್ನೆಯಿಂದ ನಮ್ಮ ಮೆಟ್ರೋ ದರ ಏಕಾಏಕಿ ಶೇ. 50ರಷ್ಟು ಹೆಚ್ಚು ಮಾಡಿದ್ದು, ಇದಕ್ಕೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Priyank Kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ಮೆಟ್ರೋ ಪ್ರಯಾಣದ ದರ ಏರಿಕೆ ಮಾಡುವ ಮೂಲಕ ಬೆಂಗಳೂರಿನ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿರುವ ಕೇಂದ್ರ ಸರ್ಕಾರದ ವಿರುದ್ದ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಿನ್ನೆಯಿಂದ ನಮ್ಮ ಮೆಟ್ರೋ ದರ ಏಕಾಏಕಿ ಶೇ. 50ರಷ್ಟು ಹೆಚ್ಚು ಮಾಡಿದ್ದು, ಇದಕ್ಕೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಮೇಟ್ರೊ ದರ ಏರಿಕೆಗೆ ರಾಜ್ಯ ಸರ್ಕಾರ ಹೊಣೆಯಲ್ಲ. ದರ ನಿಗಿದಿ ಕಮಿಟಿ ಮಾಡಿದ್ದು ಕೇಂದ್ರ ಸರ್ಕಾರ. ಪ್ರಧಾನಿ ಮೋದಿ ಪರವಾಗಿ ಬಿಜೆಪಿಯವರು ಕ್ಷಮೆ ಕೇಳಲಿ. ಮೆಟ್ರೋ ಸ್ಟೇಷನ್ ಗೆ ಹೋಗಿ ಕ್ಷಮೆ ಕೇಳಲಿ. ನಾವೇ ಬಿಜೆಪಿಯವರಿಗೆ ಗುಲಾಬಿ ಹೂ ಕೊಡುತ್ತೇವೆ. ಮೋದಿ ಪರ ಗುಲಾಬಿ ಕೊಟ್ಟು ಕ್ಷಮೆ ಕೇಳಲಿ? ಎಂದು ಕಿಡಿಕಾರಿದರು.

Priyank Kharge
ಮೆಟ್ರೋ ಪ್ರಯಾಣ ದರ ಹೆಚ್ಚಳ ವಿಚಾರದಲ್ಲಿ ಸರಕಾರದ ಹಸ್ತಕ್ಷೇಪ ಇಲ್ಲ: ಡಿ.ಕೆ ಶಿವಕುಮಾರ್

ನಮ್ಮ ಮೆಟ್ರೋ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ಈ ಹಿಂದೆ ಮೆಟ್ರೋ ದರ ಏರಿಕೆ ಮಾಡಲ್ಲ ಎಂದಾಗ ಇದೇ ಬಿಜೆಪಿ ಸಂಸದರು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದ್ದರು. ಆದರೆ ಈಗ ದರ ಏರಿಕೆ ಮಾಡಿದಾಗ ನಾವು ಜವಾಬ್ದಾರಿಯಾ? ಈಗಲೂ ಕೇಂದ್ರ ಸರ್ಕಾರವನ್ನು ಹೋಗಿ ಕೇಳಲಿ ಎಂದರು.

ನಾವು ಬಸ್ ಪ್ರಯಾಣ ದರ ಏರಿಕೆ ಮಾಡಿದಾಗ ಇದೇ ಬಿಜೆಪಿ ನಾಯಕರು ಗುಲಾಬಿ ಹೂ ಹಿಡಿದುಕೊಂಡು ಬಸ್ ನಿಲ್ದಾಣಕ್ಕೆ ಹೋಗಿ ಜನರ ಬಳಿ ಕ್ಷಮೆ ಕೇಳಿದ್ದರು. ಈಗಲೂ ಬಿಜೆಪಿ ನಾಯಕರು ಮೆಟ್ರೋ ನಿಲ್ದಾಣಕ್ಕೆ ಹೋಗಿ ಮೋದಿ ಪರವಾಗಿ ಕ್ಷಮೆ ಕೇಳಲಿ. ಬೇಕಿದ್ದರೆ ಗುಲಾಬಿ ಹೂ ನಾವೇ ಖರೀದಿಸಿ ಕೊಡುತ್ತೇವೆ ಎಂದು ಖರ್ಗೆ ಟಾಂಗ್ ನೀಡಿದ್ದಾರೆ.

ರಾಜ್ಯದ ಬಿಜೆಪಿ ಸಂಸದರಿಗೆ ಧನ್ ಇದ್ದರೆ ಮೆಟ್ರೋ ದರ ಕಡಿಮೆ ಮಾಡಲಿ. ಅದು ಬಿಟ್ಟು ಹೆಚ್ಚು ಮಾಡಿದಾಗ ರಾಜ್ಯ ಸರ್ಕಾರದ ವಿರುದ್ಧ ಗೂಬೆ ಕೂರಿಸೊದು, ಕಡಿಮೆ ಮಾಡಿದಾಗ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸೋದು ಅಲ್ಲ ಎಂದು ಕಿಡಿ ಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com