
ತುಮಕೂರು: ಸದ್ಯ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ಕೋಲಾಹಲ ಎಬ್ಬಿಸಿದೆ. ಈ ಚರ್ಚೆ ನಡುವೆಯೇ ಗೃಹ ಸಚಿವ ಜಿ. ಪರಮೇಶ್ವರ್ ರಾಜೀನಾಮೆಯ ಮಾತನಾಡಿದ್ದಾರೆ. ಇದರಿಂದ ಕಾರ್ಯಕರ್ತರು ವಿಚಲಿತರಾಗಿದ್ದಾರೆ.
ತುಮಕೂರಿನ ಕೊರಟಗೆರೆಯ ರಾಜೀವ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಸಚಿವರು ರಾಜೀನಾಮೆಯ ಮಾತುಗಳನ್ನಾಡಿದ್ದಾರೆ. ಕಾರ್ಯಕರ್ತರ ಮನದಾಳಕ್ಕೆ ಸ್ಪಂದಿಸಲು ಆಗದ್ದಕ್ಕೆ ಬೇಸರ ಹೊರಹಾಕಿದ್ದಾರೆ. ಇತ್ತೀಚೆಗೆ ಕ್ಷೇತ್ರದ ಕಾರ್ಯಕರ್ತರೊಂದಿಗೆ ಬೆರೆಯಲು ಆಗುತ್ತಿಲ್ಲ. ನಿಮ್ಮ ಮನಸಿನ ಆಕಾಂಕ್ಷೆಯಂತೆ ಸ್ಪಂದಿಸಲು ಆಗುತ್ತಿಲ್ಲ. ನೀವು ಹೇಳಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಅಂತ ಹೇಳಿದ್ದಾರೆ.
ನಿಮಗೆಲ್ಲ ನಿರಾಸೆಯಾಗಿರಬಹುದು ನಿಮ್ಮ ಕೈಗೆ ಸಿಗೋದಿಲ್ಲ, ಪಂಚಾಯಿತಿಗೆ ಬರೋದಿಲ್ಲ, ನಮನ್ನ ಮಾತಾಡಿಸೋದಿಲ್ಲ. ಇದೆಲ್ಲಾ ನಮಗೂ ಅನಿಸುತ್ತೆ ನಿಮಗೂ ಅನಿಸುತ್ತೆ. ಆದರೆ ಸಮಯ ನನ್ನ ಕೈಯಲ್ಲಿ ಇಲ್ಲ.
ನೀವೆಲ್ಲಾ ದೊಡ್ಡ ಮನುಸ್ಸು ಮಾಡಿ ಒಂದೇ ಮಾತಲ್ಲಿ ಹೇಳಿಬಿಟ್ರೆ ನಾಳೇನೆ ರಾಜೀನಾಮೆ ಕೊಡುತ್ತೇನೆ. ಆಗ ನಾನು ನಿಮ್ಮ ಜತೆಯಲ್ಲಿ ಇರುತ್ತೇನೆ ಎಂದು ಹೇಳಿದ್ದಾರೆ. ಇದರಿಂದ ವಿಚಲಿತರಾದ ಕಾರ್ಯಕರ್ತರು ಹಾಗೂ ʻಕೈʼ ಮುಖಂಡರು ರಾಜೀನಾಮೆ ಕೊಡಬೇಡಿ ಎಂದು ಕೂಗಲು ಆರಂಭಿಸಿದ್ದಾರೆ.
Advertisement