ಮುಡಾ ಕೇಸಿನಲ್ಲಿ ಕ್ಲೀನ್ ಚಿಟ್ ಸತ್ಯಕ್ಕೆ ಸಂದ ಜಯ, ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ: ಡಾ ಯತೀಂದ್ರ ಸಿದ್ದರಾಮಯ್ಯ

ದೂರುದಾರ ಸ್ನೇಹಮಯಿ ಕೃಷ್ಣ ಸುಪ್ರೀಂ ಕೋರ್ಟಿಗೆ ಹೋಗಲಿ, ನಾವು ಯಾವುದೇ ತಪ್ಪು ಮಾಡಿಲ್ಲ, ಸುಪ್ರೀಂ ಕೋರ್ಟ್ ನಲ್ಲೂ ಕೂಡ ನಮ್ಮ ಪರ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಇದೆ ಎಂದರು.
Dr Yathindra Siddaramaiah and CM Siddaramaiah
ಡಾ ಯತೀಂದ್ರ ಸಿದ್ದರಾಮಯ್ಯ, ಸಿಎಂ ಸಿದ್ದರಾಮಯ್ಯ
Updated on

ಮೈಸೂರು: ಮುಡಾ ಹಗರಣ ಕೇಸಿನಲ್ಲಿ ಲೋಕಾಯುಕ್ತದಿಂದ ಕ್ಲೀನ್ ಚಿಟ್ ಸಿಕ್ಕಿದ್ದು ಸತ್ಯಕ್ಕೆ ಸಂದ ಜಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಸೈಟ್ ವಿಚಾರವಾಗಿ ನನ್ನ ತಂದೆ ಯಾವುದೇ ಪತ್ರ ಬರೆದಿಲ್ಲ, ನನ್ನ ತಾಯಿ ಪತ್ರ ಬರೆದಿದ್ದಾರೆ. ನನ್ನ ಜಮೀನು ಬದಲಿ ಸೈಟ್ ನೀಡಿ ಎಂದು ಬರೆದಿದ್ದಾರೆ. ಸೈಟ್ ಪಡೆಯುವಲ್ಲಿ ಯಾವುದೇ ಪ್ರಭಾವ ಬಳಸಿಲ್ಲ. ಎಲ್ಲರಿಗೂ ಸೈಟ್ ಕೊಟ್ಟಂತೆ ನಮಗೂ ಕೊಟ್ಟಿದ್ದಾರೆ. ನಮ್ಮ ಜಮೀನು ಬಳಸಿಕೊಂಡು ಸೈಟ್ ಕೊಟ್ಟಿದ್ದಾರೆ. ಇದನ್ನೇ ದೊಡ್ಡ ಹಗರಣ ಅಂತ ವಿರೋಧ ಪಕ್ಷದವರು ಬಿಂಬಿಸಿದರು. ಬೇಕು ಬೇಕಂತಲೇ ನಮ್ಮ ತಂದೆ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿದರು. ಈಗ ಕ್ಲೀನ್ ಚಿಟ್ ಸಿಕ್ಕಿ ಜಯ ಸಿಕ್ಕಿದೆ ಎಂದರು.

ಮುಡಾ ಹಗರಣದಲ್ಲಿ ನನ್ನ ಹೆಸರನ್ನು ಕೂಡ ತಳುಕು ಹಾಕಲು ಯತ್ನ ನಡೀತು, ನಾನು ಮುಡಾ ಸದಸ್ಯ ಆಗಿದ್ದೆ. ಎಲ್ಲಿಯೂ ಕೂಡ ನಾನು ಏನು ಹೇಳಿಲ್ಲ. ಆರ್ ಟಿಐ ಕಾರ್ಯಕರ್ತರನ್ನ ಇಟ್ಕೊಂಡು ನಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದರು. ಆದರೆ ಕೊನೆಗೂ ಸತ್ಯಕ್ಕೆ ಜಯ ಸಿಕ್ಕಿದೆ. ದೂರುದಾರ ಸ್ನೇಹಮಯಿ ಕೃಷ್ಣ ಸುಪ್ರೀಂ ಕೋರ್ಟಿಗೆ ಹೋಗಲಿ, ನಾವು ಯಾವುದೇ ತಪ್ಪು ಮಾಡಿಲ್ಲ, ಸುಪ್ರೀಂ ಕೋರ್ಟ್ ನಲ್ಲೂ ಕೂಡ ನಮ್ಮ ಪರ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಇದೆ ಎಂದರು.

ಯಾರೋ ಕಿಡಿಗೇಡಿ ವಿವಾದಿತ ಪೋಸ್ಟ್ ಹಾಕಿದ್ದ. ಅದಕ್ಕೆ ಕೆಲವರು ಕಾನೂನು ಕೈಗೆತ್ತಿಕೊಂಡರು, ಸರ್ಕಾರ ಇಬ್ಬರ ವಿರುದ್ಧವೂ ಕಾನೂನು ಕ್ರಮ ಕೈಗೊಂಡಿದೆ. ಇದನ್ನು ರಾಜಕೀಯ ಮಾಡಲು ಬಿಜೆಪಿ ಹೊರಟಿತ್ತು. ನಿನ್ನೆ ಹೋರಾಟದಲ್ಲಿ ಜನ ಇರಲಿಲ್ಲ, ಸತ್ಯ ಏನು ಅಂತ ಜನಕ್ಕೆ ಗೊತ್ತು. ಅದಕ್ಕಾಗಿ ಪ್ರತಿಭಟನೆಯಲ್ಲಿ ಜನ ಇರಲಿಲ್ಲ. ನಿನ್ನೆಯ ಬಿಜೆಪಿ ಪ್ರತಿಭಟನೆ ಯಶಸ್ವಿ ಆಗಿಲ್ಲ ಎಂದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ

ಸಿಎಂ ಬದಲಾವಣೆ ಆಗುತ್ತೆ ಆಗತ್ತೆ ಅಂತ ಹೇಳುತ್ತಾನೆ ಇದ್ದಾರೆ, ಬಿಜೆಪಿಯಲ್ಲಿ ಕಚ್ಚಾಟ ಹೆಚ್ಚಾಗಿದೆ, ಬಿಜೆಪಿ ಪಕ್ಷ ಹರಿದು ಊರು ಬಾಗಿಲು ಆಗಿದೆ. ನಮ್ಮ ಹೈ ಕಮಾಂಡ್ ಸ್ಪಷ್ಟವಾಗಿ ಹೇಳಿದೆ ಸಿಎಂ ಬದಲಾವಣೆ ಆಗಲ್ಲ ಅಂತ. ಸಿಎಂ ಸಿದ್ದರಾಮಯ್ಯ ಪರ ಹೈಕಮಾಂಡ್ ನಿಂತಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಮಾತೇ ಇಲ್ಲ ಎಂದರು.

Dr Yathindra Siddaramaiah and CM Siddaramaiah
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್: CM ತಪ್ಪು ಮಾಡಿಲ್ಲ ಎಂಬುದು ನಮಗೆ ಗೊತ್ತಿತ್ತು- HC ಮಹಾದೇವಪ್ಪ

ಒಂದು ವಾರ ವಿಶ್ರಾಂತಿ

ತಂದೆಯವರು ಮಂಡಿ ನೋವಿನ ಬಾಧೆಯಿಂದ ಗುಣಮುಖ ಹೊಂದುತ್ತಿದ್ದಾರೆ. ಇನ್ನೊಂದು ವಾರ ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಹೇಳಿದ್ದರು. ಆದರೆ ವಿಶ್ರಾಂತಿ ನಡುವೆಯೂ ತಂದೆಯವರು ಹಗಲು ಪೂರ್ತಿ ರಾತ್ರಿ 10 ಗಂಟೆಯವರೆಗೂ ಕೆಲಸ ಮಾಡುತ್ತಿದ್ದಾರೆ. ಬಜೆಟ್ ತಯಾರಿಗೆ ಸಂಬಂಧಪಟ್ಟಂತೆ ಸಿದ್ಧತೆಗಳು, ಸಭೆಗಳು ನಡೆಯುತ್ತವೇ ಇವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com