
ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿಮ್ಮ ಪಕ್ಷದ ತತ್ವ ಸಿದ್ಧಾಂತದ ವಿರುದ್ಧ ಇದ್ದರೆ ಅವರನ್ನು ಸಸ್ಪೆಂಡ್ ಮಾಡಿಬಿಡಿ ಎಂದು ಕಾಂಗ್ರೆಸ್ಸಿಗರಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಾಂಗ್ ಕೊಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಕಾಂಗ್ರೆಸ್ ತತ್ವದ ವಿರುದ್ಧ ಇದ್ರೆ ಅವರನ್ನು ಸಸ್ಪೆಂಡ್ ಮಾಡಿ ಎಂದು ಹೇಳಿದರು. ಕುಂಭ ಮೇಳಕ್ಕೆ ಹೋಗಿರೋದು, ಕೊಯಮತ್ತೂರಿಗೆ ಹೋಗಿರೋದು ಸಹಜ. ಇದರಲ್ಲಿ ದೊಡ್ಡಸ್ಥಿಕೆ ಏನಿಲ್ಲ. ಇದು ಸರಿ ಆಗಲ್ಲ ಅಂದ್ರೆ, ಡಿಕೆ ಶಿವಕುಮಾರ್ ಸಸ್ಪೆಂಡ್ ಮಾಡಿ, ಅವರು ನಿಮ್ಮ ಪಕ್ಷದ ತತ್ವ ಸಿದ್ದಾಂತಕ್ಕೆ ವಿರೋಧವಾಗಿದ್ರೆ ಅವರನ್ನು ಪಾರ್ಟಿಯಿಂದ ಹೊರಗೆ ಹಾಕಿ ಎಂದು ಹೇಳಿದರು.
ಕಾಂಗ್ರೆಸ್‌ಗೆ ಹಿಂದೂಗಳ ಬಗ್ಗೆ ದ್ವೇಷ ಇದೆ, ಇದರಿಂದ ಕಾಂಗ್ರೆಸ್ ಉದ್ದಾರ ಆಗಲ್ಲ, ಹಿಂದೂಗಳು ಇಲ್ಲದೇ ನೀವು ರಾಜಕಾರಣ ಮಾಡ್ತೀನಿ ಅಂದರೆ ಅದು ನಿಮ್ಮ ಹಣೆ ಬರಹ. ಹಿಂದೂಗಳನ್ನ ಕೀಳಾಗಿ ಕಾಣೋದೆ, ಅವರ ಅವನತಿಗೆ ಕಾರಣ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಹಿಂದೂ ವಿರೋಧಿಯಾಗಿವೆ. ಈ ದೇಶ ಹಿಂದೂಗಳ ದೇಶ, ಹಿಂದೂ ರಾಷ್ಟ್ರ ಅನ್ನೋ ಪರಂಪರೆ ಇದೆ. ಇದಕ್ಕೆ ಎಲ್ಲಿ ಅಡ್ಡಿಯಾಗಬಾರದು ಎಂದು ಹೇಳಿದರು.
Advertisement