
ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಮುಗಿಸಲು ಕಾಂಗ್ರೆಸ್‌ನಿಂದ 'ಆಪರೇಷನ್ ಹಸ್ತ'ದ ಪ್ರಯತ್ನ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಶುಕ್ರವಾರ ಗಂಭೀರ ಆರೋಪ ಮಾಡಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನ್ನು ಮುಗಿಸಬೇಕು ಎಂದು ಹೇಳಿ 12-13 ಶಾಸಕರನ್ನು ಕರೆದುಕೊಂಡು ಬನ್ನಿ ಎಂದು ಕಾಂಗ್ರೆಸ್ ಶಾಸಕರು ಹೇಳಿದ್ದಾರೆ. ಆದರೆ, ಅದು ವರ್ಕ್ ಆಗಲ್ಲ, ಜೆಡಿಎಸ್‌ನ ಯಾವ ಶಾಸಕರೂ ಪಕ್ಷ ಬಿಟ್ಟು ಹೋಗುವ ಪರಿಸ್ಥಿತಿಯಲ್ಲಿ ಇಲ್ಲ ಎಂದರು.
ಕಾಂಗ್ರೆಸ್‌ನರ ಪಾಪದ ಕೊಡ ತುಂಬಿದೆ. ಕಾಂಗ್ರೆಸ್‌ನವರು ಆಪರೇಷನ್ ಹಸ್ತಕ್ಕೆ ಮುಂದಾಗಿರುವ ಮಾಹಿತಿ ಸಿಕ್ಕಿದೆ. ನಮ್ಮ ಶಾಸಕರ ಏನೇನು ನಡೆಯುತ್ತಿದೆ ಎಂಬುದನ್ನು ನನ್ನ ಬಳಿ ಹೇಳಿದ್ದಾರೆ.ಜನವರಿ 15 ರವರೆಗೂ ನಾನು ಏನೂ ಮಾತನಾಡಲ್ಲ. ಮಾತನಾಡಲು ಬಹಳ ವಿಷಯಗಳಿವೆ. ಸಂಕ್ರಾಂತಿ ಕಳೆಯಲಿ ಮಾತನಾಡುತ್ತೇನೆ. ಜೆಡಿಎಸ್‌ಗೆ ಇದೆಲ್ಲಾ ಶಾಕ್ ಕೊಡಲ್ಲ. ಜೆಡಿಎಸ್‌ನ್ನು ದುರ್ಬಲ ಮಾಡಕೂ ಆಗೋಲ್ಲ. ದೇವರೇ ಕಾಂಗ್ರೆಸ್‌ನವರಿಗೆ ಶಿಕ್ಷೆ ಕೊಡುತ್ತಾನೆ ಎಂದು ಹೇಳಿದರು.
ದೇಶದಲ್ಲಿ ಗ್ಯಾರಂಟಿ ಕೊಡುವುದಕ್ಕೆ ಕಾಂಪಿಟೇಷನ್ ನಡೆಯುತ್ತಿದೆ. ಗ್ಯಾರಂಟಿ ಕೊಟ್ಟ ಹಿಮಾಚಲ ಪ್ರದೇಶ ರಾಜ್ಯದ ಸ್ಥಿತಿ ಇವತ್ತು ಏನಾಗಿದೆ. ಗ್ಯಾರಂಟಿಗಳ ಬಗ್ಗೆ ನಾನು ಚರ್ಚೆ ಮಾಡಲ್ಲ. ಕಾಂಗ್ರೆಸ್ ಶಾಸಕರು, ಮಂತ್ರಿಗಳು ಅವರ ಆತ್ಮಕ್ಕೆ ಪ್ರಶ್ನೆ ಹಾಕಿಕೊಳ್ಳಲಿ ಎಂದ ಸಚಿವರು, ಕಾಂಗ್ರೆಸ್ ಶಾಸಕರಿಗೆ ನಾನು ಮನವಿ ಮಾಡುತ್ತೇನೆ. ಅವರೆಲ್ಲರಿಗೂ ಆತ್ಮಸಾಕ್ಷಿ ಇದ್ದರೆ ಅವರು ಬೆಂಬಲ ಕೊಟ್ಟಿರುವ ಸರ್ಕಾರ ಹೋಗುತ್ತಿರುವ ಮಾರ್ಗ ಏನು ಎಂಬುದನ್ನು ಯೋಚನೆ ಮಾಡಬೇಕು ಎಂದರು.
Advertisement