ಕಾಂಗ್ರೆಸ್ ಭಿನ್ನಮತ, ಗುಂಪುಗಾರಿಕೆಗೆ ಮದ್ದರೆಯುವುದು ಯಾವಾಗ? ಡಿಕೆಶಿ ಭೇಟಿ ಮಾಡಿ ಆತಂಕ ವ್ಯಕ್ತಪಡಿಸಿದ ಹಿರಿಯ ನಾಯಕರು!

ನಡೆಯುತ್ತಿರುವ ಅಧಿಕಾರ ಹೋರಾಟಗಳ ಬಗ್ಗೆ, ವಿಶೇಷವಾಗಿ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ನಾಯಕರು ತಮ್ಮ ಕಳವಳಗಳನ್ನು ವ್ಯಕ್ತಪಡಿಸಿದರು. ಪಕ್ಷದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಶಿವಕುಮಾರ್ ಒಂದು ಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದರು.
Dk Shivakumar
ಡಿ.ಕೆ ಶಿವಕುಮಾರ್
Updated on

ಬೆಂಗಳೂರು: ಕಾಂಗ್ರೆಸ್‌ನಲ್ಲಿನ ಆಂತರಿಕ ಕಲಹ ಮತ್ತು ಅದರ ಒಗ್ಗಟ್ಟಿಗೆ ಬೆದರಿಕೆಯೊಡ್ಡುತ್ತಿರುವ ಅಧಿಕಾರ ಹಂಚಿಕೆ ಬಗ್ಗೆ ಆತಂಕೊಂಡಿರುವ ಹಿರಿಯ ಕಾಂಗ್ರೆಸ್ ನಾಯಕರ ಗುಂಪು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ, ಪಕ್ಷದೊಳಗೆ ಹೆಚ್ಚುತ್ತಿರುವ ಗುಂಪುಗಾರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಮಾಜಿ ಸಚಿವರಾದ ರಾಣಿ ಸತೀಶ್ ಮತ್ತು ಬಿ.ಎಲ್. ಶಂಕರ್, ಮಾಜಿ ಎಂಎಲ್‌ಸಿಗಳಾದ ಕೊಂಡಜ್ಜಿ ಮೋಹನ್ ಮತ್ತು ಪಿ.ಆರ್. ರಮೇಶ್, ಮಾಜಿ ವಿಧಾನ ಪರಿಷತ್ತಿನ ಅಧ್ಯಕ್ಷ ವಿ.ಆರ್. ಸುದರ್ಶನ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಖಾತರಿಗಳ ಅಧ್ಯಕ್ಷ ಎಚ್.ಎಂ. ರೇವಣ್ಣ, ಮಾಜಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸಿ.ಎಸ್. ದ್ವಾರಕನಾಥ್, ಎಚ್.ಎಸ್. ಚಂದ್ರಮೌಳಿ, ವೆಂಕಟೇಶ್ವರ್, ಅಮರನಾಥ್ ಮತ್ತು ಇತರ ಪ್ರಭಾವಿ ವ್ಯಕ್ತಿಗಳು ಸೇರಿದ್ದಾರೆ.

ಪಕ್ಷದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿರುವ ಈ ನಾಯಕರು, ಈ ಹಿಂದೆ ಮುಡಾ ವಿಷಯದ ಬಗ್ಗೆ ಸಲಹೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಲವು ತಿಂಗಳ ಹಿಂದೆ ಭೇಟಿ ಮಾಡಿದ್ದರು. ಈಗ, ಅವರು ಪಕ್ಷದ ಆಂತರಿಕ ವಿಭಜನೆಗಳ ಮೇಲೆ ಕೇಂದ್ರೀಕರಿಸುತ್ತಿದ್ದಾರೆ, ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಕಾಂಗ್ರೆಸ್‌ನ ಭವಿಷ್ಯ ಅಪಾಯದಲ್ಲಿದೆ ಎಂದು ಎಚ್ಚರಿಸಿದ್ದಾರೆ.

ನಡೆಯುತ್ತಿರುವ ಅಧಿಕಾರ ಹೋರಾಟಗಳ ಬಗ್ಗೆ, ವಿಶೇಷವಾಗಿ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ನಾಯಕರು ತಮ್ಮ ಕಳವಳಗಳನ್ನು ವ್ಯಕ್ತಪಡಿಸಿದರು. ಪಕ್ಷದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಶಿವಕುಮಾರ್ ಒಂದು ಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಸ್ಪಷ್ಟವಾಗಿ ಮಾತನಾಡಿದರು.

Dk Shivakumar
ರಾಜಕೀಯದಲ್ಲಿ ಏಳು-ಬೀಳು ಸಹಜ, ಡಿನ್ನರ್ ಮೀಟಿಂಗ್ ಬಗ್ಗೆ ಬೇರೆಯವರು ಆತಂಕ ಪಡುವುದೇಕೆ?: ಸತೀಶ್ ಜಾರಕಿಹೊಳಿ

ಪಕ್ಷದಲ್ಲಿ ಹೀಗೆ ಗುಂಪುಗಾರಿಕೆ ಮುಂದುವರಿದರೇ ರಾಜ್ಯ ಅಧ್ಯಕ್ಷರಾಗಿ ಹೇಗೆ ಮುಂದುವರಿಯಲು ಸಾಧ್ಯ ಎಂದು ಶಿವಕುಮಾರ್ ತಮ್ಮನ್ನು ಭೇಟಿ ಮಾಡಲು ಬಂದಿದ್ದ ನಾಯಕರ ತಂಡವನ್ನು ಪ್ರಶ್ನಿಸಿದ್ದಾರೆ, ಪಕ್ಷವನ್ನು ಸಂಘಟಿಸಲು ತಾವು ಮಾಡಿದ ಕಠಿಣ ಪರಿಶ್ರಮದ ಬಗ್ಗೆ ಅವರಿಗೆ ತಿಳಿ ಹೇಳಿದ್ದಾರೆ.

ನಾನು 2022 ರಲ್ಲಿ ತಿಹಾರ್ ಜೈಲಿನಲ್ಲಿದ್ದಾಗ, ಸೋನಿಯಾ ಗಾಂಧಿ ನನಗೆ, 'ಧೈರ್ಯ ಕಳೆದುಕೊಳ್ಳಬೇಡಿ, ಪಕ್ಷ ಬಲಪಡಿಸಿ ಎಂದು ಹೇಳಿದ್ದನ್ನು ಶಿವಕುಮಾರ್ ಈ ವೇಳೆ ಸ್ಮರಿಸಿದ್ದಾರೆ. ಜೊತೆಗೆ 2023 ರ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಅವರು ಮಾಡಿದ ಪ್ರಯತ್ನಗಳನ್ನು ನೆನಪಿಸಿಕೊಂಡರು.

Dk Shivakumar
ಕಾಂಗ್ರೆಸ್ ಸರ್ಕಾರ ಒಗ್ಗಟ್ಟಾಗಿದೆ, ವಿಪಕ್ಷಗಳು ಊಹಾಪೋಹ ಹರಡುತ್ತಿವೆ: ರಣದೀಪ್ ಸಿಂಗ್ ಸುರ್ಜೇವಾಲಾ

ಶಿವಕುಮಾರ್ ತಮ್ಮ ಇತರ ಹೋರಾಟದ ಬಗ್ಗೆಯೂ ಮಾತನಾಡಿದರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಹ್ಮದ್ ಪಟೇಲ್ ರಾಜ್ಯಸಭೆಗೆ ಆಯ್ಕೆಯಾದಾಗ ಗುಜರಾತ್ ಕಾಂಗ್ರೆಸ್ ಶಾಸಕರನ್ನು ರಕ್ಷಿಸುವುದು ಮತ್ತು ಎನ್‌ಡಿಎ-ಬಿಜೆಪಿ ತಮ್ಮ ವಿರುದ್ಧ ಐಟಿ ಮತ್ತು ಇಡಿಯನ್ನು ಬಳಿಕೊಂಡು ಹೇಗೆ ಕಿರುಕುಳ ನೀಡಿದರು ಎಂಬುದನ್ನು ಸಹ ಈ ನಾಯಕರುಗಳ ಮುಂದೆ ವಿವರಿಸಿದ್ದಾರೆ. ಇಷ್ಟೆಲ್ಲಾ ಹೋರಾಟಗಳ ನಡುವೆಯು ಕಾಂಗ್ರೆಸ್ ನಾಯಕತ್ವ, ನಿರ್ದಿಷ್ಟವಾಗಿ ಸೋನಿಯಾ ಗಾಂಧಿ, ಚುನಾವಣಾ ಗೆಲುವಿನಲ್ಲಿ ನನ್ನ ತ್ಯಾಗ ಮತ್ತು ಪರಿಶ್ರಮದ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ ಎಂದು ಶಿವಕುಮಾರ್ ತಂಡಕ್ಕೆ ಭರವಸೆ ನೀಡಿದರು. ಕಾಂಗ್ರೆಸ್ ಶಾಸಕರನ್ನು ರಕ್ಷಿಸಲು ಅವರು ಅತ್ಯುತ್ತಮ ಪ್ರಯತ್ನಗಳನ್ನು ಮಾಡಿದರೂ, ನಂತರ ಅವರನ್ನು ಬಿಜೆಪಿ ಹೇಗೆ ಬೇಟೆಯಾಡಿತು ಎಂಬುದನ್ನು ಅವರು ನೆನಪಿಸಿಕೊಂಡರು.

ಹೆಚ್ಚುತ್ತಿರುವ ಗುಂಪುಗಾರಿಕೆಯ ಬಗ್ಗೆ ಅವರ ಕಳವಳಗಳ ಕುರಿತು, ಆಂತರಿಕ ಸವಾಲುಗಳ ಹೊರತಾಗಿಯೂ, ಪಕ್ಷವನ್ನು ಒಗ್ಗಟ್ಟಿನಿಂದ ಇಡಲು ತಾವು ಮತ್ತು ಇತರ ನಾಯಕರು ಬದ್ಧರಾಗಿದ್ದೇವೆ ಎಂದು ಶಿವಕುಮಾರ್ ಅವರಿಗೆ ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com