Parameshwar
ಡಾ ಜಿ ಪರಮೇಶ್ವರ್

ನಾವೇ ಪಕ್ಷ, ನಾವಿದ್ದರೆ ತಾನೇ ಪಕ್ಷ; ಜ್ಯೋತಿಷಿ ಆಗಿದ್ದರೆ ಶಾಸ್ತ್ರ ಹೇಳುತ್ತಿದ್ದೆ: ಪರಮೇಶ್ವರ್

ಮಾರ್ಚ್ ತಿಂಗಳಲ್ಲಿ ರಾಜಕೀಯ ಸ್ಥಿತ್ಯಂತರ ಆಗುವ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಶಾಸ್ತ್ರ ಹೇಳೋಕೆ ಬರಲ್ಲ. ಜ್ಯೋತಿಷಿ ಆಗಿದ್ದರೆ ನಾನು ಹೇಳುತ್ತಿದ್ದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
Published on

ಬೆಂಗಳೂರು: ಸಮುದಾಯಗಳ ಸಭೆಗಳನ್ನು ಪಕ್ಷವೇ ಮಾಡಲಿ.‌ ಅದರಲ್ಲಿ ತಪ್ಪೇನಿದೆ? ನಮಗೆ ನಮ್ಮ ಸಮಸ್ಯೆ ಬಗೆಹರಿಯಬೇಕು. ನಾವೇ ಪಕ್ಷ, ನಾವಿದ್ದರೆ ಪಕ್ಷ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜನಸಮುದಾಯ ಕಟ್ಟಿರುವ ಪಕ್ಷ ಅಲ್ಲವೇ ಕಾಂಗ್ರೆಸ್. ಕಾಂಗ್ರೆಸ್ ಪಕ್ಷವೇ ಒಂದು ಆಂದೋಲನ. ನಮ್ಮದು ಕೇಡರ್ ಪಾರ್ಟಿ ಅಲ್ಲ’ ಎಂದರು. ಮಾರ್ಚ್ ತಿಂಗಳಲ್ಲಿ ರಾಜಕೀಯ ಸ್ಥಿತ್ಯಂತರ ಆಗುವ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಶಾಸ್ತ್ರ ಹೇಳೋಕೆ ಬರಲ್ಲ. ಜ್ಯೋತಿಷಿ ಆಗಿದ್ದರೆ ನಾನು ಹೇಳುತ್ತಿದ್ದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.

ಮತ್ತೆ ದಲಿತ ಸಚಿವರು ಸಭೆ ಸೇರುವ ವಿಚಾರದ ಬಗ್ಗೆ ಚರ್ಚೆ ಮಾಡಿಲ್ಲ. ನಾವೆಲ್ಲ ಸಚಿವರು ಸೇರಿ ಚರ್ಚೆ ಮಾಡಿ, ಮುಂದೆ ಏನು ಅಂತ ನಿರ್ಧಾರ ಮಾಡ್ತೇವೆ ಎಂದರು. ದಲಿತರ ಸಭೆ ಬಗ್ಗೆ ಸುರ್ಜೇವಾಲ ಬೇಸರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಪ್ರಧಾನ ಕಾರ್ಯದರ್ಶಿಗಳು ಹೇಳಿ ಹೋಗಿದ್ದಾರೆ. ನಾವು ಸ್ವಲ್ಪ ಮಾತು ಕಡಿಮೆ ಮಾಡ್ತೇವೆ. ನಾವು ಸಮಸ್ಯೆ ಬಗೆಹರಿಸುವುದಕ್ಕೆ ಮಾಡುತ್ತಿರುವುದು. ಯಾರು ಹೇಗೆ ವ್ಯಾಖ್ಯಾನ ಮಾಡ್ತಾರೆ ಮಾಡಲಿ ಎಂದರು

ದಲಿತ ಸಮುದಾಯಕ್ಕೆ ಸಿಎಂ ವಿಚಾರದ ಬಗ್ಗೆ ಸಚಿವ ಆರ್.ಬಿ.ತಿಮ್ಮಾಪೂರ ನಾನು ಆಕಾಂಕ್ಷಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರು 30 ವರ್ಷ ರಾಜಕೀಯ ಮಾಡಿದ್ದಾರೆ. ಅವರಿಗೂ ಸಾಮರ್ಥ್ಯ ಇದೆ. ಅವರು ಕೇಳೋದ್ರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

Parameshwar
2023ರಲ್ಲಿ ಇದ್ದ Speed ಕಡಿಮೆಯಾಗಿದೆ; KPCC ಗೆ ಪೂರ್ಣಪ್ರಮಾಣದ, ವರ್ಚಸ್ಸು ಇರುವ ಹೊಸ ಅಧ್ಯಕ್ಷರು ಬೇಕು: ಸತೀಶ್ ಜಾರಕಿಹೊಳಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com