ಕಾಂಗ್ರೆಸ್ ಹೆಸರಲ್ಲಿ ರೆಡ್ಡಿ- ರಾಮುಲು ನಾಟಕ; ನನ್ನ ಮೊಮ್ಮಕ್ಕಳ ಮೇಲೆ ಆಣೆ ಮಾಡಿ ಹೇಳುವೆ, ನಾನು ಎಂದೂ ಜಾತಿ ಮಾಡಿಲ್ಲ: ಜಮೀರ್ ಅಹ್ಮದ್

ನಾನು ಎಂದೂ ಜಾತಿ ಮಾಡಿಲ್ಲ. ನನ್ನ ಮಕ್ಕಳು ,ಮೊಮ್ಮಕ್ಕಳ ಮೇಲೆ ಆಣೆ ಮಾಡಿ ಹೇಳುವೆ. ಜಾತಿ ಮಾಡಿದರೆ ನಿರ್ನಾಮವಾಗುತ್ತೇನೆ. ಅದರ ಬಗ್ಗೆ ಯೋಚನೆಯನ್ನೂ ಮಾಡುವುದಿಲ್ಲ.
Zameer ahmed khan
ಜಮೀರ್ ಅಹ್ಮದ್ ಖಾನ್
Updated on

ಕೊಪ್ಪಳ: ಶಾಸಕ ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲು ನಡುವಿನ ಗುದ್ದಾಟ ಆಂತರಿಕ ವಿಚಾರವಾಗಿದ್ದು, ಇಬ್ಬರೂ ಕಾಂಗ್ರೆಸ್‌ ಹೆಸರಿನಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ವಸತಿ ಸಚಿವ ಜಮೀರ್‌ ಅಹ್ಮದ್‌ಖಾನ್‌ ಆರೋಪಿಸಿದರು.

ಕೊಪ್ಪಳ ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ರಾಮುಲು ಕಾಂಗ್ರೆಸ್‌ ಪಕ್ಷಕ್ಕೆ ಬರುವ ಹಾಗೆ ಕಾಣುತ್ತಿಲ್ಲ. ಆದರೆ ನಮ್ಮ ಪಕ್ಷದ ಹೆಸರಿನಲ್ಲಿ ಬಿಜೆಪಿಯಲ್ಲಿ ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಅವರು ನಾಟಕ ಮಾಡುತ್ತಿದ್ದಾರೆ ಎನಿಸುತ್ತಿದೆ ಎಂದರು.

ನಾನು ಎಂದೂ ಜಾತಿ ಮಾಡಿಲ್ಲ. ನನ್ನ ಮಕ್ಕಳು ,ಮೊಮ್ಮಕ್ಕಳ ಮೇಲೆ ಆಣೆ ಮಾಡಿ ಹೇಳುವೆ. ಜಾತಿ ಮಾಡಿದರೆ ನಿರ್ನಾಮವಾಗುತ್ತೇನೆ. ಅದರ ಬಗ್ಗೆ ಯೋಚನೆಯನ್ನೂ ಮಾಡುವುದಿಲ್ಲ. ಬಡವರ ಸೇವೆಗಾಗಿಯೇ ರಾಜಕೀಯದಲ್ಲಿದ್ದೇನೆ. ಜಾತಿ ಮಾಡುವವರು ಯಾರೂ ರಾಜಕೀಯಕ್ಕೆ ಬರಬೇಡಿ ಎಂದು ಸಲಹೆ ನೀಡಿದರು.

ಸಿದ್ದರಾಮಯ್ಯ ಅವರೇ ಪೂರ್ಣ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ. ಸದ್ಯಕ್ಕೆ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ. ಹಿಂದಿನ ಬಿಜೆಪಿ ಸರ್ಕಾರ ಬಡವರಿಗೆ ಒಂದೇ ಒಂದು ಮನೆ ಕೊಟ್ಟಿಲ್ಲ. ಮನೆ ಕೊಟ್ಟಿದ್ದೇವೆ ಎಂದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ ಎಂದು ಸವಾಲು ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com