
ಬೆಂಗಳೂರು: ಸಿದ್ದರಾಮಯ್ಯ ಐದು ವರ್ಷ ನಾನೇ ಸಿಎಂ ಎಂದಿದ್ದಾರೆ ಅಂದಮೇಲೆ ಕಾಂಗ್ರೆಸ್‌ನಲ್ಲಿ ಡಿಕೆಶಿಗೆ ನಯಾಪೈಸೆ ಬೆಲೆ ಇಲ್ಲ ಎಂದು ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಾವಿರ ಬಾರಿ ನಾನೇ 5 ವರ್ಷ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಇದೇ ಅವರ ದೌರ್ಬಲ್ಯ. ಡಿಕೆ ಶಿವಕುಮಾರ್ ಸರ್ಕಾರವನ್ನು ನಾನೇ ಅಧಿಕಾರಕ್ಕೆ ತಂದೆ ಎಂದಿದ್ದಾರೆ. ಇನ್ನೂ ಸ್ವಾಮೀಜಿ ಸಹ ಡಿಕೆಶಿ ಸಿಎಂ ಆಗಲಿ ಎಂದು ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಐದು ವರ್ಷ ನಾನೇ ಸಿಎಂ ಎಂದಿದ್ದಾರೆ. ಇದರರ್ಥ ಕಾಂಗ್ರೆಸ್‌ನಲ್ಲಿ ಡಿಕೆಶಿಗೆ ನಯಾ ಪೈಸೆ ಬೆಲೆ ಇಲ್ಲ ಎಂದಿದ್ದಾರೆ
ಡಿಕೆ ಶಿವಕುಮಾರ್ ಗೆ ಶಾಸಕರ ಬೆಂಬಲ ಇಲ್ಲ ಎಂದು ಸಿದ್ದರಾಮಯ್ಯ ಸಂದೇಶ ನೀಡಿದ್ದಾರೆ. ಸಿದ್ದರಾಮಯ್ಯ ತಾವೇ ಐದು ವರ್ಷ ಸಿಎಂ ಅಂತಾರೆ, ಆದರೆ ಇದನ್ನು ಮಲ್ಲಿಕಾರ್ಜುನ ಖರ್ಗೆಯವರು ಘೋಷಣೆ ಮಾಡಬೇಕು. ಖರ್ಗೆಯವರು ಒಂದು ದಿನ ಆದರೂ ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂದಿದ್ದಾರಾ? ಅಥವಾ ಡಿಕೆಶಿ ಹೇಳಿದ್ದಾರಾ? ಯಾರೂ ಹೇಳಿಲ್ಲ. ಖರ್ಗೆ ಮತ್ತು ಡಿಕೆಶಿಯವರಿಂದ ಒಂದೇ ಒಂದು ಹೇಳಿಕೆ ಕೊಡಿಸಿ ನೋಡೋಣ ಎಂದು ಹೇಳಿದ್ದಾರೆ.
ಕನ್ನಡಿಗರು 135 ಸೀಟು ಕೊಟ್ಟು ಗೆಲ್ಲಿಸಿದರೂ ಕರ್ನಾಟಕ್ಕೆ ಒಂದು ಸುಸ್ಥಿರ, ಸುಭದ್ರ ಕೊಡಲಾಗದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ನಾಚಿಕೆಯಾಗಬೇಕು. ಕನ್ನಡಿಗರು ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುವ ದಿನ ಬಹಳ ದೂರವಿಲ್ಲ ಎಂದಿದ್ದಾರೆ.
Advertisement