
ಮೈಸೂರು: ಮೈಸೂರಿನಲ್ಲಿ ಜು. 19ರಂದು ನಡೆದ ಸರ್ಕಾರದ 2 ವರ್ಷಗಳ ಸಾಧನಾ ಸಮಾವೇಶದಲ್ಲಿ ತಮ್ಮ ಮಾತು ಆರಂಭಿಸುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೇದಿಕೆ ಮೇಲಿದ್ದ ಗಣ್ಯರೆಲ್ಲರನ್ನೂ ಆಹ್ವಾನಿಸಿದರು. ಆದರೆ, ಆ ಸಂದರ್ಭದಲ್ಲಿ ಅವರು ಸರ್ಕಾರದ ಪ್ರಮುಖ ವ್ಯಕ್ತಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸ್ವಾಗತಿಸಿಲ್ಲ.
ಇದನ್ನು ಗಮನಿಸಿದ ವೇದಿಕೆ ಮೇಲಿದ್ದ ಕಾಂಗ್ರೆಸ್ ನಾಯಕರೊಬ್ಬರು ಮುಖ್ಯಮಂತ್ರಿಗಳ ಬಳಿಗೆ ಹೋಗಿ ಕಿವಿಯಲ್ಲಿ ಡಿಸಿಎಂ ಅವರನ್ನು ಮರೆತಿರಿ ಎಂದು ಜ್ಞಾಪಿಸಿದ್ದಾರೆ. ಕೂಡಲೇ ಪ್ರತಿಕ್ರಿಯಿಸಿದ ಸಿಎಂ, ಮನೆಯಲ್ಲಿ ಕೂತಿರುವವರಿಗೆಲ್ಲ ವೆಲ್‌ಕಂ ಮಾಡೋಕೆ ಆಗಲ್ಲ ಎನ್ನುತ್ತಾ ಗರಂ ಆದರು.
ವೇದಿಕೆಯ ಮೇಲಿದ್ದವರನ್ನಷ್ಟೇ ಯಾವಾಗಲೂ ಸ್ವಾಗತ ಮಾಡುತ್ತಾರೆ. ಡಿಕೆ ಶಿವಕುಮಾರ್ ಎಲ್ಲಿದ್ದಾರೆ? ಅವರು ಆಗಲೇ ಬೆಂಗಳೂರಿಗೆ ಹೊರಟು ಹೋದರು. ಅವರನ್ನು ಹೇಗೆ ನಾನು ಈಗ ಸ್ವಾಗತ ಮಾಡಲಿ ಎಂದು ಪ್ರಶ್ನಿಸಿದ್ದಾರೆ. ಮನೆಯಲ್ಲಿ ಕೂತಿರುವವರಿಗೆಲ್ಲ ವೆಲ್‌ಕಮ್ ಮಾಡೋಕೆ ಆಗಲ್ಲ.. ಗೊತ್ತಾಯಿತಾ. ಈ ವಕೀಲರು ಸ್ವಲ್ಪ ಅರ್ಥ ಮಾಡಿಕೊಳ್ಳಬೇಕು ಇದೆಲ್ಲವನ್ನು ಎಂದು ಸಿದ್ದರಾಮಯ್ಯ ಹೇಳಿದರು.
ತಮ್ಮ ಭಾಷಣದ ಆರಂಭದಲ್ಲಿ ವೇದಿಕೆಯಲ್ಲಿದ್ದವರ ಹೆಸರು ಪ್ರಸ್ತಾಪಿಸಿದ ಮುಖ್ಯಮಂತ್ರಿ, ಡಿ.ಕೆ. ಶಿವಕುಮಾರ್ ಹೆಸರನ್ನು ಬಿಟ್ಟಿದ್ದನ್ನು ವಕೀಲರೊಬ್ಬರು ನೆನಪಿಸಿದರು. ಆಗ ಸಿಟ್ಟಾದ ಅವರು, ‘ಇಲ್ಲಿ ಇಲ್ವಲ್ಲರಿ... ಹೊರಟು ಹೋಗಿದ್ದಾರೆ ಎಂದು ಕಿಡಿ ಕಾರಿದರು.
Advertisement