ಖರ್ಗೆ ಅನುಭವಸ್ಥರು, ಎಲ್ಲ ಹುದ್ದೆಗಳಿಗೂ ಸಮರ್ಥರು; ಬಿ. ದಯಾನಂದ್ ಗೆ ಆಯುಕ್ತ ಹುದ್ದೆ ಕೊಡೋಲ್ಲ: ಪರಮೇಶ್ವರ್

ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯಲ್ಲಿ ತಪ್ಪೇನಿಲ್ಲ. ಅವರು ಹಿರಿಯರು, ಸುದೀರ್ಘ ಅನುಭವ ಇರುವವರು. ಎಲ್ಲ ಹುದ್ದೆಗಳಿಗೂ ಸಮರ್ಥರು, ಖರ್ಗೆಯವರ ಬಗ್ಗೆ ಈಗ ಯಾರ‍್ಯಾರು ಮಾತಾಡಿದ್ದಾರೋ ಅವರ‍್ಯಾರೂ ಖರ್ಗೆಯವರ ಹಂತಕ್ಕೆ ಬೆಳೆದವರಲ್ಲ.
Dr.G. Parameshwar
ಡಾ. ಜಿ. ಪರಮೇಶ್ವರ್
Updated on

ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆಯವರು ನಮ್ಮ ಪಕ್ಷದಲ್ಲಿ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಮುಖ್ಯಮಂತ್ರಿ ಯಾರು ಆಗಬೇಕೆಂದು ನಿರ್ಧಾರ ಮಾಡುವವರು ಅವರು. ಒಂದು ವೇಳೆ ಅವರು ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂದು ಹೇಳಿದರೆ ಯಾರೂ ತಪ್ಪು ಭಾವಿಸುವ ಅಗತ್ಯ ಇಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯಲ್ಲಿ ತಪ್ಪೇನಿಲ್ಲ. ಅವರು ಹಿರಿಯರು, ಸುದೀರ್ಘ ಅನುಭವ ಇರುವವರು. ಎಲ್ಲ ಹುದ್ದೆಗಳಿಗೂ ಸಮರ್ಥರು ಎಂದರು. ಖರ್ಗೆಯವರ ಬಗ್ಗೆ ಈಗ ಯಾರ‍್ಯಾರು ಮಾತಾಡಿದ್ದಾರೋ ಅವರ‍್ಯಾರೂ ಖರ್ಗೆಯವರ ಹಂತಕ್ಕೆ ಬೆಳೆದವರಲ್ಲ. ಖರ್ಗೆಯವರು ಏನಾದರೂ ಹೇಳಿದಾಗ ತಪ್ಪಾಗಿ ಭಾವಿಸುವ ಅಗತ್ಯ ಇಲ್ಲ. ರಾಜ್ಯಕ್ಕೆ ಬರುತ್ತೇನೆ ಎಂದು ಹೇಳಿದರೆ ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

ಧರ್ಮಸ್ಥಳದಲ್ಲಿ ಎಸ್‌ಐಟಿ ತಂಡ ತನಿಖೆ ಆರಂಭಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಸ್ಐಟಿ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ಮಾಡುತ್ತಿದ್ದಾರೆ. ತ‌ನಿಖೆಯಲ್ಲಿ ನಾವ್ಯಾರೂ ಮಧ್ಯಪ್ರವೇಶ ಮಾಡಲ್ಲ ಎಂದರು.

ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿಗಳ ಅಮಾನತನ್ನು ಸಚಿವ ಸಂಪುಟ ಸಭೆಯ ತೀರ್ಮಾನದಂತೆ ಹಿಂಪಡೆಯಲಾಗಿದೆ. ಇದು ಆಡಳಿತಾತ್ಮಕ ನಿರ್ಧಾರ ಅಷ್ಟೇ. ತನಿಖೆ ಮುಂದುವರೆಯಲಿದೆ. ಪೊಲೀಸ್‌ ಕಮಿಷನರ್‌ ಆಗಿದ್ದ ಬಿ. ದಯಾನಂದ್ ಅವರಿಗೆ ಮತ್ತೆ ಆಯುಕ್ತ ಹುದ್ದೆ ಕೊಡುವುದಿಲ್ಲ. ಸಮಾನಾಂತರ ಹುದ್ದೆ ಕೊಡುತ್ತೇವೆ ಎಂದಿದ್ದಾರೆ.

Dr.G. Parameshwar
ಸಿಎಂ ಸ್ಥಾನಕ್ಕೆ ಖರ್ಗೆ 'ಮೋಸ್ಟ್ ಎಲಿಜಿಬಲ್ ಪರ್ಸನ್': ಸಚಿವ ಸಂತೋಷ್ ಲಾಡ್

ರಸಗೊಬ್ಬರ ಅಭಾವಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, ರಸಗೊಬ್ಬರ ಕಾಳಸಂತೆ ಮಾರಾಟ ತಡೆಯಲು ಕೃಷಿ ಸಚಿವರು ಸೂಚಿಸಿದ್ದಾರೆ. ಈ ಬಾರಿ ಮುಂಗಾರು‌ ಬೇಗ ಬಂದು ರಸ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಕೇಂದ್ರದಿಂದ ನಮಗೆ ಬರಬೇಕಾದ ಗೊಬ್ಬರ ಸಮಯಕ್ಕೆ ಸರಿಯಾಗಿ ಬರಲಿ ಎಂದು ತಿಳಿಸಿದರು.

ನಟಿ ರಮ್ಯಾ ಅವರ ವಿಚಾರದ ಕುರಿತು ಪ್ರತಿಕ್ರಿಯಿಸಿ, ಬಹಳ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಇಂತಹ ಘಟನೆಗಳು ಮುಂದೆ ಆಗಬಾರದು. ಇವತ್ತು ರಮ್ಯಾ ಅವರಿಗೆ ಆಗಿರಬಹುದು, ನಾಳೆ ಬೇರೆಯವರಿಗೂ ಆಗಬಹುದು. ಇದಕ್ಕೆ ಕಡಿವಾಣ ಹಾಕಬೇಕಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರು ಕ್ರಮ ತೆಗೆದುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಡುತ್ತಾರೆ. ನಾನು ಸಹ ಕಮಿಷನರ್‌ಗೆ ಸೂಚನೆ ಕೊಡುತ್ತೇನೆ. ಇಂತದ್ದೆಲ್ಲ ನಡೆಯಬಾರದು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com