
ಬೆಂಗಳೂರು: ಸಿಎಂ ರಾಜೀನಾಮೆ ಕೇಳುವ ಕುಮಾರಸ್ವಾಮಿಅವರಿಗೆ ನಾಚಿಕೆ ಆಗಬೇಕು. ಡಾ. ರಾಜ್‌ಕುಮಾರ್ ತೀರಿಕೊಂಡಾಗ 4 ಜನರಿಗೆ ಗುಂಡು ಹೊಡೆಸಿದ್ರಲ್ಲ, ಆಗ ಕುಮಾರಸ್ವಾಮಿ ರಾಜೀನಾಮೆ ಕೊಟ್ರಾ ಅಂತ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ಡಿಸಿಎಂ ರಾಜೀನಾಮೆಗೆ ದೋಸ್ತಿ ನಾಯಕರ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಾ. ರಾಜ್‌ಕುಮಾರ್ ತೀರಿಕೊಂಡಾಗ ನಾಲ್ಕು ಜನರಿಗೆ ಗುಂಡೇಟು ಹೊಡೆಸಿದ್ರು. ಕಂಠೀರವ ಸ್ಟುಡಿಯೋದಲ್ಲಿ ಆಗ ನಾನೂ ಇದ್ದೆ. ಆಗ ಕುಮಾರಸ್ವಾಮಿ ರಾಜೀನಾಮೆ ನೀಡಿದ್ರಾ..? ಹಾವೇರಿ ಗೋಲಿಬಾರ್ ನಲ್ಲಿ ರೈತರು ಸತ್ತರು, ಆಗ ಯಡಿಯೂರಪ್ಪ ರಾಜೀನಾಮೆ ನೀಡಿದ್ರಾ?
ಪಹಲ್ಗಾಮ್ ಉಗ್ರರ ದಾಳಿಯಲ್ಲಿ 26 ಮಂದಿ ಸತ್ರು, ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ ಆಗಿ ಹಲವರು ಸತ್ರು. ಪ್ರಧಾನಿ ಮೋದಿ ಅಮಿತ್ ಶಾ ರಾಜೀನಾಮೆ ನೀಡಿದ್ರಾ..? ಮೋದಿ, ಶಾ ರಾಜೀನಾಮೆ ಕೊಡಿಸಲಿ, ನಾವೂ ಕೂಡ ಸಿಎಂ, ಡಿಸಿಎಂ ರಾಜೀನಾಮೆ ಕೊಡಿಸ್ತೀವಿ ಎಂದು ಸವಾಲು ಹಾಕಿದ್ದಾರೆ. ಇಂತಹ ಘಟನೆ ಆಗಬಾರದಿತ್ತು, ಆದರೆ ಆಗಿಹೋಗಿದೆ. ಅದಕ್ಕೆ ಪೊಲೀಸ್ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿಯ ನೇಮಕ ಹಿಂಪಡೆಯಲಾಗಿದೆ. ೇಇವೆಲ್ಲ ಆಕಸ್ಮಿಕ ಘಟನೆ, ನಾವೂ ಕೂಡ ನೋವಲ್ಲಿ ಇದ್ದೇವೆ. ಗೊಂದಲ ಸೃಷ್ಟಿ ಮಾಡಬಾರದು ಎಂದು ಹೇಳಿದರು.
ಕಾಲ್ತುಳಿತದ ಬೆನ್ನಲ್ಲಿಯೇ ಪ್ರತಿಪಕ್ಷ ನಾಯಕರು ಸರ್ಕಾರದ ಮೇಲೆ ವಾಕ್‌ಪ್ರಹಾರ ಮಾಡಿದ್ದಾರೆ. ಈ ವೇಳೆ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಚಿನ್ನಸ್ವಾಮಿ ಕಾಲ್ತುಳಿತವನ್ನು ಪಹಲ್ಗಾಮ್‌ನಲ್ಲಾದ ಭಯೋತ್ಪಾದಕ ಘಟನೆಗೆ ಹೋಲಿಸಿ ಬೇಳೂರು ಗೋಪಾಲಕೃಷ್ಣ ಮಾತನಾಡಿದ್ದಾರೆ.
Advertisement