ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಕಾಂಗ್ರೆಸ್ ನಾಮನಿರ್ದೇಶನ: ಲಖನ್ ಜಾರಕಿಹೊಳಿ ಮತದತ್ತ ಎಲ್ಲರ 'ಕಣ್ಣು'!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು; ಎನ್‌ಆರ್‌ಐ ಫೋರಂ ಉಪಾಧ್ಯಕ್ಷೆ ಆರತಿ ಕೃಷ್ಣ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ಮತ್ತು ದಲಿತ ಮುಖಂಡ ಸಾಗರ್ ಅವರ ಹೆಸರು ಫೈನಲ್
Lakhan Jarkiholi
ಲಖನ್ ಜಾರಕಿಹೊಳಿ
Updated on

ಬೆಂಗಳೂರು: ರಾಜ್ಯ ವಿಧಾನ ಪರಿಷತ್ತಿಗೆ ಪಕ್ಷದ ನಾಲ್ವರು ನಾಮನಿರ್ದೇಶಿತರನ್ನು ಕಾಂಗ್ರೆಸ್ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು; ಎನ್‌ಆರ್‌ಐ ಫೋರಂ ಉಪಾಧ್ಯಕ್ಷೆ ಆರತಿ ಕೃಷ್ಣ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ಮತ್ತು ದಲಿತ ಮುಖಂಡ ಸಾಗರ್ ಅವರ ಹೆಸರುಗಳನ್ನು ಪಕ್ಷದ ಹೈಕಮಾಂಡ್ ನಿಂದ ಫೈನಲ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ರಾಜ್ಯಪಾಲರ ಒಪ್ಪಿಗೆ ಪಡೆದ ನಂತರ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರ ಪ್ರಮಾಣ ವಚನದೊಂದಿಗೆ 75 ಸದಸ್ಯ ಬಲದ ಸದನದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಂತೆಯೇ ಕಾಂಗ್ರೆಸ್ 37 ಸದಸ್ಯರನ್ನು ಹೊಂದಲಿದೆ.

ಲಖನ್ ಜಾರಕಿಹೊಳಿ ಮತದತ್ತ ಕಣ್ಣು:

ಸಚಿವ ಸತೀಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ ಅವರ ಮತದತ್ತ ಈಗ ಎಲ್ಲರ ಕಣ್ಣು ನೆಟ್ಟಿದೆ. ಲಖನ್ ಅವರಿಗೆ ದೊರೆಯುವ ಮತವು ಸದನದಲ್ಲಿ ಅಧಿಕಾರದ ಸಮತೋಲನವನ್ನು ಛಿದ್ರಗೊಳಿಸಬಹುದು ಅಥವಾ ಗಟ್ಟಿಗೊಳಿಸಬಹುದು. ಕಾಂಗ್ರೆಸ್ ಅವರನ್ನು ಗೆಲ್ಲಿಸಿದರೆ, ಪ್ರಸ್ತುತ ಬಿಜೆಪಿ ಹೊಂದಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ಪಕ್ಷ ವಶಪಡಿಸಿಕೊಳ್ಳಲಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯನ್ನು ಬೆಂಬಲಿಸುವಂತೆ ಅವರನ್ನು ರಮೇಶ್ ಜಾರಕಿಹೊಳಿ ಮನವೊಲಿಸುವ ಸಾಧ್ಯತೆಯಿದೆ.

ಮೇಲ್ಮನೆಗೆ ಬೇರೆ ಪಕ್ಷದವರು ಅಧ್ಯಕ್ಷರಾಗಿರುವ ನಿದರ್ಶನವಿದೆ. ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದಾಗ ಕಾಂಗ್ರೆಸ್ ಸದಸ್ಯ ರೆಹಮಾನ್ ಖಾನ್ ಸುಮಾರು ಎರಡು ವರ್ಷಗಳ ಕಾಲ ಸಭಾಪತಿಯಾಗಿದ್ದರು. ಒಂದು ವೇಳೆ ಕಾಂಗ್ರೆಸ್‌ಗೆ ಲಖನ್‌ ಮತ ಬಿದ್ದರೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಅನುಭವಿ ಬಿ.ಕೆ.ಹರಿಪ್ರಸಾದ್ ಒಂದು ಕಾಲದಲ್ಲಿ ಸಭಾಪತಿ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದವರು. ಈಗ ಅವರನ್ನು ಹರಿಯಾಣದ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಏರಿಸಲಾಗಿದೆ. ಅವರ ಮುಂದಿನ ಪಾತ್ರ ಯಾವುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

Lakhan Jarkiholi
ವಿಧಾನ ಪರಿಷತ್ ಚುನಾವಣೆ: ಮೇಲ್ಮನೆ ಪ್ರಾಬಲ್ಯಕ್ಕೆ ಹೋರಾಟ, ಕಾಂಗ್ರೆಸ್ ಗೆ ನಿರ್ಣಾಯಕ!

ಸಚಿವ ಬೋಸ ರಾಜು, ಮುಖ್ಯ ಸಚೇತಕ ಸಲೀಂ ಅಹಮದ್ ಮತ್ತು ಮಾಜಿ ಸಚಿವ ನಾಸಿರ್ ಅಹಮದ್ ಅವರು ಸಭಾಪತಿ ಸ್ಥಾನಕ್ಕೆ ಆಯ್ಕೆಯಾಗಬಹುದು. ಆದರೆ, ಕಾಂಗ್ರೆಸ್ ತನ್ನ ಆದ್ಯತೆಗ್ಗೆ ತಕ್ಕಂತೆ ಅವರಿಗೆ ಹೊಣೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com