ಜ್ಯೋತಿಷ್ಯ ನಂಬುವ ಡಿಕೆಶಿ ಮುಂದಿನ ನಡೆ ಏನು: ಕರ್ನಾಟಕದ ಏಕನಾಥ್ ಶಿಂಧೆ ಅಥವಾ ಹೈಕಮಾಂಡ್ ಆದೇಶ ಪಾಲನೆ?

ಸಾಮಾನ್ಯವಾಗಿ ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟಿರುವ ಡಿ.ಕೆ ಶಿವಕುಮಾರ್ ಅವರ ಸಮಯ ಮುಂಬರುವ ದಿನಗಳಲ್ಲಿ ಚೆನ್ನಾಗಿದೆ ಎಂದು ಹೇಳಲಾಗುತ್ತಿದ್ದು, ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಬೇಡಿಕೆಯಿಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳುತ್ತವೆ.
Former Infosys CFO TV Mohandas Pai calls on Deputy Chief Minister DK Shivakumar at the latter’s residence, in Bengaluru on Saturday
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಇನ್ಫೋಸಿಸ್ ಮಾಜಿ ಸಿಎಫ್ ಒ ಟಿ ವಿ ಮೋಹನ್ ದಾಸ್ ಪೈ
Updated on

ಬೆಂಗಳೂರು: ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಬರುವ ಅಕ್ಟೋಬರ್ ತಿಂಗಳಿಗೆ ಎರಡೂವರೆ ವರ್ಷಗಳನ್ನು ಪೂರೈಸಲಿದ್ದಾರೆ. ಮುಖ್ಯಮಂತ್ರಿಯಾಗುವ ತೀವ್ರ ಬಯಕೆ ಹೊಂದಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಮಂಡಿಸಲು ಮುಂದಾದರೆ ವಿರೋಧ ಪಕ್ಷ ಬಿಜೆಪಿ ಅವರ ಪರವಾಗಿ ನಿಲ್ಲಬಹುದು ಎಂದು ಹೇಳಲಾಗುತ್ತಿದೆ.

ಸಾಮಾನ್ಯವಾಗಿ ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟಿರುವ ಡಿ ಕೆ ಶಿವಕುಮಾರ್ ಅವರ ಸಮಯ ಇನ್ನು ಬರುವ ದಿನಗಳಲ್ಲಿ ಚೆನ್ನಾಗಿದೆ ಎಂದು ಹೇಳಲಾಗುತ್ತಿದ್ದು, ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಬೇಡಿಕೆಯಿಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳುತ್ತವೆ. ಅವರು ತಮ್ಮ ಜಾತಕದ ಭವಿಷ್ಯದ ಪ್ರಕಾರ ಹೋಗುತ್ತಾರೆಯೇ ಅಥವಾ ಪಕ್ಷದ ಹೈಕಮಾಂಡ್‌ನ ಆಜ್ಞೆಯನ್ನು ಅನುಸರಿಸುತ್ತಾರೆಯೇ ಎಂಬುದು ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಬಿಜೆಪಿ ನಾಯಕರ ಅನಿಸಿಕೆಯೇನು?

ರಾಜ್ಯದಲ್ಲಿ ವಿರೋಧ ಪಕ್ಷ ಸ್ಥಾನದಲ್ಲಿರುವ ಬಿಜೆಪಿಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ ಸೇರಿದಂತೆ ಹಲವು ನಾಯಕರು ಡಿ ಕೆ ಶಿವಕುಮಾರ್ ಅವರ ಮಹಾತ್ವಾಕಾಂಕ್ಷೆಗೆ ಉತ್ತೇಜನ ನೀಡುತ್ತಿದ್ದು, ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಶಿವಕುಮಾರ್ ಆಸೆ ಪೂರೈಸದಿದ್ದರೆ ಕಾಂಗ್ರೆಸ್ ನ್ನು ವಿಭಜಿಸಿ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗುವ ಮೂಲಕ ಕರ್ನಾಟಕದಲ್ಲಿ ಮಹಾರಾಷ್ಟ್ರದ ಏಕನಾಥ ಶಿಂಧೆ ಪಾತ್ರ ನಿರ್ವಹಿಸುವುದನ್ನು ನೋಡಲು ಬಯಸುತ್ತಿದ್ದಾರೆ. ಏಕನಾಥ್ ಶಿಂಧೆ ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ವಿಭಜಿಸಿ ಮುಖ್ಯಮಂತ್ರಿಯಾದರು. ಈಗ ಬಿಜೆಪಿ-ಶಿವಸೇನಾ ಸಮ್ಮಿಶ್ರ ಸರ್ಕಾರದ ಎರಡನೇ ಅವಧಿಯಲ್ಲಿ, ಉಪ ಮುಖ್ಯಮಂತ್ರಿಯಾಗಿದ್ದಾರೆ.

ಡಿ ಕೆ ಶಿವಕುಮಾರ್ ಇತ್ತೀಚೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನಾ) ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದರು. ಅಂದು 2023ರಲ್ಲಿ ಸಿದ್ದರಾಮಯ್ಯ ಅವರು ಎರಡೂವರೆ ವರ್ಷಗಳ ನಂತರ ರಾಜೀನಾಮೆ ನೀಡಬೇಕು ಎಂಬ ಒಪ್ಪಂದದ ಭಾಗವಾಗಿದ್ದವರು. ಭೇಟಿ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಒಪ್ಪಂದದ ಬಗ್ಗೆ ಅವರಿಗೆ ನೆನಪಿಸಿದರು. ಸಿದ್ದರಾಮಯ್ಯ ಅವರ ಅನುಯಾಯಿ ವೇಣುಗೋಪಾಲ್ ಅವರಿಗೆ 2028 ರಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದಾಗಿ ಶಿವಕುಮಾರ್ ಭರವಸೆ ನೀಡಿದ್ದಾರೆ ಎಂದು ಮೂಲಗಳು ಹೇಳುತ್ತವೆ.

Former Infosys CFO TV Mohandas Pai calls on Deputy Chief Minister DK Shivakumar at the latter’s residence, in Bengaluru on Saturday
ಸಾವಿರ ಟೀಕೆಗಳು ಬಂದರೂ ನನ್ನ ಧರ್ಮದ ಮೇಲೆ ನಂಬಿಕೆ ಅಚಲ: DK Shivakumar ಖಡಕ್ ಟಾಂಗ್!

ಈಗ ಕೆಲವು ಕಾಂಗ್ರೆಸ್ ನಾಯಕರಿಗೆ, ವಿಶೇಷವಾಗಿ ಸಿದ್ದರಾಮಯ್ಯ ಪಾಳಯದಲ್ಲಿರುವವರಿಗೆ ಇಶಾ ಫೌಂಡೇಶನ್ ನ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ನಿದ್ದೆಗೆಡಿಸಿದೆ. ವೇಣುಗೋಪಾಲ್ ಅವರ ಬೆಂಬಲಿಗ ಮತ್ತು ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್ ಅವರು ತೀವ್ರವಾಗಿ ಟೀಕೆ ಮಾಡಿದ್ದಾರೆ. ಹಿಂದೆ ರಾಹುಲ್ ಗಾಂಧಿ ಅವರನ್ನು ಅಪಹಾಸ್ಯ ಮಾಡಿದ್ದ ಸದ್ಗುರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿ ಕೆ ಶಿವಕುಮಾರ್ ಭಾಗವಹಿಸಿದ್ದಕ್ಕಾಗಿ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ.

ಬಿಜೆಪಿ ಈಗ ಕಾಂಗ್ರೆಸ್‌ನ ಕದಡಿದ ನೀರಿನಲ್ಲಿ ಮೀನು ಹಿಡಿಯಲು ಪ್ರಯತ್ನಿಸುತ್ತಿದೆ ಎಂಬುದು ಸ್ಪಷ್ಟ. ಮುಖ್ಯಮಂತ್ರಿ ಹುದ್ದೆ ನೀಡದಿದ್ದರೆ ಶಿವಕುಮಾರ್ ಕಾಂಗ್ರೆಸ್ ನ್ನು ವಿಭಜಿಸಿ ಅವರ ಬೆಂಬಲಗರೊಂದಿಗೆ ಹೊರಬಂದು ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸುತ್ತಾರೆ ಎಂದು ಬಿಜೆಪಿ ನಿರೀಕ್ಷಿಸುತ್ತಿದೆ. ಡಿ ಕೆ ಶಿವಕುಮಾರ್ ಏಕನಾಥ್ ಶಿಂಧೆ ರೀತಿ ವರ್ತಿಸುತ್ತಾರೆ ಎಂಬ ಊಹಾಪೋಹ ಹೊಸದಲ್ಲ. 2023 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗಿನಿಂದ ಇದೆ ಮಾತುಗಳು ಕೇಳಿಬರುತ್ತಿವೆ ಎಂದು ಸಿದ್ದರಾಮಯ್ಯ ಬೆಂಬಲಿಗರೇ ಹೇಳುತ್ತಿದ್ದಾರೆ.

138 ಮಂದಿ ಕಾಂಗ್ರೆಸ್ ಶಾಸಕರಲ್ಲಿ ಮೂರನೇ ಎರಡರಷ್ಟು ಮಂದಿಯನ್ನು ಶಿವಕುಮಾರ್ ಸೆಳೆಯಲು ಸಾಧ್ಯವಿಲ್ಲ. ಅವರು ಅಂತಹ ಕ್ರಮ ಕೈಗೊಂಡರೆ, ಸಿದ್ದರಾಮಯ್ಯ ಅವರ ಬೆಂಬಲಿಗ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಬಿಜೆಪಿಯಲ್ಲಿರುವ ತಮ್ಮ ಸಹೋದರ ರಮೇಶ್ ಜಾರಕಿಹೊಳಿ ಮೂಲಕ ತಮ್ಮದೇ ಆದ ರೀತಿಯಲ್ಲಿ ಆಟವಾಡಲಿದ್ದಾರೆ. ಡಿ ಕೆ ಶಿವಕುಮಾರ್ ಅವರನ್ನು ಚೆಕ್‌ಮೇಟ್ ಮಾಡಲು ಒಪ್ಪಂದ ಮಾಡಿಕೊಳ್ಳಬಹುದು ಎನ್ನುತ್ತಾರೆ ಸಿದ್ದರಾಮಯ್ಯ ಆಪ್ತರು.

62 ವರ್ಷದ ಡಿ ಕೆ ಶಿವಕುಮಾರ್ ಅವರಿಗೆ ಇನ್ನೂ ಒಂದು ದಶಕದ ರಾಜಕೀಯ ಭವಿಷ್ಯವಿದೆ. ಇಂತಹ ಹೊತ್ತಿನಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ. ಸೋನಿಯಾ ಗಾಂಧಿ ಮತ್ತು ಕುಟುಂಬದ ಬಗೆಗಿನ ಅವರ ನಿಷ್ಠೆಯೇ ಶಿವಕುಮಾರ್ ಬಿಜೆಪಿಗೆ ಹೋಗದಿರಲು ಇರುವ ಸಾಧ್ಯತೆಗಳಲ್ಲಿ ಒಂದು ಎಂದು ರಾಜಕೀಯ ವಿಶ್ಲೇಷಕರೊಬ್ಬರು ಹೇಳುತ್ತಾರೆ.

Former Infosys CFO TV Mohandas Pai calls on Deputy Chief Minister DK Shivakumar at the latter’s residence, in Bengaluru on Saturday
ರಾಜ್ಯದಲ್ಲಿ ಬಲಿಷ್ಠ ಸಿದ್ದರಾಮಯ್ಯ ಸರ್ಕಾರವಿದೆ, ನಮ್ಮಲ್ಲಿ ಯಾರೂ ಏಕನಾಥ ಶಿಂಧೆ ಇಲ್ಲ: ಸಚಿವ ಹೆಚ್.ಸಿ ಮಹದೇವಪ್ಪ

2023 ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಗೆ ತೀವ್ರವಾಗಿ ಲಾಬಿ ಮಾಡಿದ್ದರು. ಅವರು ನವೆಂಬರ್‌ ತಿಂಗಳಲ್ಲಿ ಖಂಡಿತವಾಗಿಯೂ ಮುಖ್ಯಮಂತ್ರಿಯಾಗುತ್ತಾರೆ. ಹೆಚ್ಚೆಂದರೆ ಜನವರಿ ತಿಂಗಳವರೆಗೆ ಕಾಯಬೇಕಾಗಿ ಬರಬಹುದು. ಜನವರಿಯವರೆಗೆ ಅಧಿಕಾರದಲ್ಲಿದ್ದರೆ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ್ ಅರಸ್ ಅವರ ಏಳು ವರ್ಷ ಮತ್ತು 238 ದಿನಗಳ ದೀರ್ಘಾವಧಿಯ ಮುಖ್ಯಮಂತ್ರಿ ಎಂಬ ದಾಖಲೆಯನ್ನು ಮುರಿಯಲು ಸಿದ್ದರಾಮಯ್ಯ ಅವರಿಗೆ ಅವಕಾಶ ಇರುತ್ತದೆ ಎಂದು ಶಿವಕುಮಾರ್ ಅವರ ಕಟ್ಟಾ ಬೆಂಬಲಿಗರೊಬ್ಬರು ಹೇಳುತ್ತಾರೆ.

ಹೈಕಮಾಂಡ್ ನಿರ್ಧಾರದ ನಂತರ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಬದಲಿಸಿ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಪಂಜಾಬ್ ನಲ್ಲಿ ಮುಖ್ಯಮಂತ್ರಿ ಮಾಡಿದಂತೆ, ಶಾಸಕರು ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಿ ಬೆಂಬಲಿಸುವಂತೆ ಹೈಕಮಾಂಡ್ ಮಾಡುತ್ತದೆ ಎಂದು ಅವರ ಬೆಂಬಲಿಗರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com