ವರ್ಷದಿಂದ ಪರಿಷತ್ತಿನ 4 ಸ್ಥಾನ ಖಾಲಿ: ನೇಮಕಕ್ಕೆ ಆಸಕ್ತಿ ತೋರದ ಕಾಂಗ್ರೆಸ್ ಸರ್ಕಾರ; 'ಬಂಡವಾಳ' ಹೂಡುವ ಅಭ್ಯರ್ಥಿಗಳಿಗಾಗಿ ಶೋಧ!

ಎಂಎಲ್‌ಸಿ ಸ್ಥಾನಕ್ಕೆ ನಾಮನಿರ್ದೇಶನ ಮಾಡಲು ಭಾರಿ ಮೊತ್ತದ ಹಣ ನೀಡುವವರ ಅಗತ್ಯವಿದೆ ಎಂದು ಮೂಲಗಳು ಹೇಳಿವೆ, ಸ್ಥಾನಕ್ಕಾಗಿ ಕೋಟ್ಯಂತರ ರೂಪಾಯಿಗಳವರೆಗೆ ಹಣ ನೀಡಲು ಕೆಲವರು ಸಿದ್ಧರಿದ್ದಾರೆ ಎಂದು ವರದಿಯಾಗಿದೆ.
Vidhana soudha
ವಿಧಾನ ಸೌಧ
Updated on

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ 4 ಸ್ಥಾನಗಳು ಒಂದು ವರ್ಷಕ್ಕೂ ಹೆಚ್ಚು ಕಾಲ ಖಾಲಿ ಉಳಿದಿದ್ದು, ಕಾಂಗ್ರೆಸ್ ಸರ್ಕಾರದ ರಾಜಕೀಯ ಪ್ಲಾನ್ ಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಮೇಲ್ಮನೆಯಲ್ಲಿ ಆಡಳಿತ ಪಕ್ಷವು ತನ್ನ ಎಲ್ಲಾ ವಿಧೇಯಕಗಳಿಗೆ ಅಂಗೀಕಾರ ಪಡೆಯಲು ಬಹುಮತದ ಅವಶ್ಯಕತೆಯಿದೆ. ಆದರೆ ಮೇಲ್ಮನೆಗೆ ತನ್ನ ಸದಸ್ಯರನ್ನು ನೇಮಕ ಮಾಡಲು ಸರ್ಕಾರ ನಿಷ್ಕ್ರಿಯತೆ- ನಿರಾಸಕ್ತಿ ತೋರುತ್ತಿದೆ. ನೇಮಕಾತಿ ವಿಳಂಬದ ಹಿಂದೆ ಕಾಂಗ್ರೆಸ್ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿರಬಹುದು ಎಂಬ ಊಹಾಪೋಹ ವ್ಯಕ್ತವಾಗಿದೆ.

ನಾಲ್ಕು ಸ್ಥಾನಗಳಲ್ಲಿ ಎರಡು ಅಕ್ಟೋಬರ್ 2023 ರಿಂದ, ಇನ್ನೊಂದು ನವೆಂಬರ್ 2023 ರಿಂದ ಮತ್ತು ಜನವರಿ 2024 ರಿಂದ ಖಾಲಿಯಾಗಿ ಉಳಿದಿವೆ. ಆದರೂ, ಅಗತ್ಯ ನಾಮನಿರ್ದೇಶನಗಳನ್ನು ಮಾಡಲು ಕಾಂಗ್ರೆಸ್ ಯಾವುದೇ ಆತುರದಲ್ಲಿಲ್ಲ ಎಂಬುದು ಗಮನಾರ್ಹ ಅಂಶವಾಗಿದೆ.

ಪರಿಷತ್ತಿನಲ್ಲಿ ಪಕ್ಷದ ಸ್ಥಾನವನ್ನು ಗಮನಿಸಿದರೆ ಈ ವಿಳಂಬವು ಬಾರಿ ಗೊಂದಲಕ್ಕೆ ಕಾರಣವಾಗಿದೆ. ಏಕೆಂದರೇ ಬಹುಮತ ಪಡೆಯಲು ಕೇವಲ ಒಂದು ಸ್ಥಾನದ ದೂರದಲ್ಲಿದೆ. ಅದು ಎನ್ ಡಿಎ 36 ಸ್ಥಾನಗಳನ್ನು ಹೊಂದಿದೆ, ಸರ್ಕಾರ ತನ್ನ ಸದಸ್ಯರನ್ನು ನೇಮಕ ಮಾಡಿದರೆ ಎನ್ ಡಿ ಎ ವಿರುದ್ಧ 37 ಸ್ಥಾನಗಳನ್ನು ಪಡೆಯಬಹುದು ಹಾಗೂ ವಿಧಾನ ಪರಿಷತ್ ಮೇಲೆ ಮೇಲೆ ನಿಯಂತ್ರಣ ಸಾಧಿಸಬಹುದಾಗಿದೆ.

ಸ್ವತಂತ್ರ ಶಾಸಕ ಲಖನ್ ಜಾರಕಿಹೊಳಿ ಈ ಮಾಸ್ಟರ್ ಪ್ಲಾನ್ ಗೆ ಒಂದು ಕುತೂಹಲಕಾರಿ ತಿರುವು ನೀಡುವ ಸಾಧ್ಯತೆಯಿದೆ, ಅವರ ಸಹೋದರ ಸತೀಶ್ ಜಾರಕಿಹೊಳಿ ಸಂಪುಟದಲ್ಲಿ ಹಾಲಿ ಸಚಿವರಾಗಿದ್ದಾರೆ. ಕಾಂಗ್ರೆಸ್ ಈ ಸಂಪರ್ಕವನ್ನು ಬಳಸಿಕೊಂಡು ಅವರ ಮತ ಪಡೆಯಲು ಮತ್ತು ಮೇಲ್ಮನೆಯ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸಲು ಪ್ರಯತ್ನಿಸಬಹುದು.

ಆದರೆ ಸದಸ್ಯರ ನೇಮಕಾತಿ ವಿಳಂಬದ ಬಗ್ಗೆ ಹಲವು ಗುಸುಗುಸು ಕೇಳಿ ಬರುತ್ತಿವೆ. ಎಂಎಲ್‌ಸಿ ಸ್ಥಾನಕ್ಕೆ ನಾಮನಿರ್ದೇಶನ ಮಾಡಲು ಪಡೆಯಲು ಭಾರಿ ಮೊತ್ತದ ಹಣ ನೀಡುವವರ ಅಗತ್ಯವಿದೆ ಎಂದು ಮೂಲಗಳು ಹೇಳಿವೆ, ಇದು ಕೋಟ್ಯಂತರ ರೂಪಾಯಿಗಳವರೆಗೆ ಹೋಗುತ್ತದೆ ಎಂದು ವರದಿಯಾಗಿದೆ.

ವಿವಿಧ ಕ್ಷೇತ್ರಗಳ ಅರ್ಹ ವ್ಯಕ್ತಿಗಳನ್ನು ಗುರುತಿಸಲು ಉದ್ದೇಶಿಸಲಾದ ನೇಮಕಾತಿ ಪ್ರಕ್ರಿಯೆಯು, ಸಾರ್ವಜನಿಕ ಸೇವೆಗಿಂತ ರಾಜಕೀಯ ನಿಷ್ಠೆ ಮತ್ತು ಆರ್ಥಿಕ ಬಲ ಹೊಂದಿರುವವರಿಗೆ ಮನ್ನಣೆ ನೀಡುವ ವ್ಯವಸ್ಥೆಯಾಗಿದೆ ಎಂದು ಆರೋಪಿಸಲಾಗಿದೆ.

ಎಂಎಲ್ ಸಿ ಸ್ಥಾನಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬಿಡ್ಡಿಂಗ್ ಮಾಡುವ ಸಾಧ್ಯತೆಯಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ರಾಜಕಾರಣಿಯೊಬ್ಬರು ಸುಳಿವು ನೀಡಿದ್ದಾರೆ. ಸರ್ಕಾರವು ಅಪಾರ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಬಹುದಾದ ಅಭ್ಯರ್ಥಿಗಳಿಗಾಗಿ ಕಾಯುತ್ತಿದೆ ಎಂದು ಅವರು ಹೇಳಿದ್ದಾರೆ.

Vidhana soudha
ವಿಜಯಪುರ ಮಹಾನಗರ ಪಾಲಿಕೆ 35 ಕಾರ್ಪೊರೇಟರ್‌ಗಳ ಅನರ್ಹತೆ: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿ!

ಖಾಲಿ ಇರುವ ಸ್ಥಾನಗಳಿಗೆ ನೇಮಕ ಮಾಡುವ ನಿರ್ಧಾರವು ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು. ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರು ಮತ್ತು ಹಿರಿಯ ನಾಯಕರು ಈ ಸಂಬಂಧ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು

ಅಕ್ಟೋಬರ್‌ನಲ್ಲಿ ಅಧಿಕಾರಾವಧಿ ಮುಗಿದ ಕಾಂಗ್ರೆಸ್ ನಾಯಕ ಪ್ರಕಾಶ್ ರಾಥೋಡ್ ತಿಳಿಸಿದ್ದಾರೆ. ಇದು ಕೇವಲ ಬಜೆಟ್ ಅಧಿವೇಶನವಾಗಿರುವುದರಿಂದ, ತಕ್ಷಣದ ಆತುರವಿಲ್ಲ. ಆದರೆ ಬಹುಮತವನ್ನು ಪಡೆಯಲು ಜುಲೈ ಮೊದಲು ನಾಮನಿರ್ದೇಶನಗಳು ನಡೆಯಬೇಕು ಎಂದಿದ್ದಾರೆ.

ಪರಿಷತ್ ಗೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಗತ್ಯವಿದೆ. ಮೇಲ್ಮನೆಗೆ ಮೌಲ್ಯ ಹಾಗೂ ಗೌರವ ಸೇರಿಸುವ ವ್ಯಕ್ತಿಗಳು ಬೇಕು. ಕೇವಲ ರಾಜಕೀಯ ಲಾಭಕ್ಕಾಗಿ 'ಅನರ್ಹ ವ್ಯಕ್ತಿಗಳನ್ನು' ನೇಮಿಸುವುದು ತಪ್ಪು" ಎಂದು ಮಾಜಿ ಎಂಎಲ್‌ಸಿ ಪಿಆರ್ ರಮೇಶ್ ಎಚ್ಚರಿಸಿದ್ದಾರೆ.

ಕಾಂಗ್ರೆಸ್ ತನ್ನ ನಾಮನಿರ್ದೇಶನಗಳನ್ನು ಅಂತಿಮಗೊಳಿಸಿದರೂ, ರಾಜ್ಯಪಾಲರ ಅನುಮೋದನೆ ಮುಖ್ಯ. ಅವರು ಸರ್ಕಾರದ ಆಯ್ಕೆಗೆ ಹಸಿರು ನಿಶಾನೆ ಮಾಡಬಹುದು ಅಥವಾ ಮತ್ತೆ ರಾಜ್ಯ ಮತ್ತು ಕೇಂದ್ರದ ನಡುವೆ ಮತ್ತೊಂದು ಜಗಳವಾಗಿ ಬದಲಾಗುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com