
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಅಭಿವೃದ್ಧಿ ಸಂಬಂಧ ಹಿರಿಯ ಸಚಿವರ ಸಭೆ ನಡೆಸಿದ್ದಾರೆ ಎಂದು ಸರಕಾರದ ಮುಖ್ಯ ಸಚೇತಕ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದ್ದಾರೆ.
ಹಿರಿಯ ಸಚಿವರ ಜೊತೆಗೆ ಸಭೆ ವಿಚಾರ ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ರಾಜ್ಯದ ಅಭಿವೃದ್ಧಿ ಸಲುವಾಗಿ ಸಭೆ ನಡೆದಿದೆ. ಅದಕ್ಕೆ ಯಾವುದೇ ರೀತಿಯ ಅಪಾರ್ಥ ಬೇಡ ಎಂದರು.
ಸಚಿವ ಸ್ಥಾನದ ಆಕಾಂಕ್ಷಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಲೀಂ ಅಹ್ಮದ್, ಕಳೆದ ಬಾರಿಯೇ ನಾನು ಸಚಿವನಾಗಬೇಕಿತ್ತು. ನಾಲ್ಕು ಮಂದಿ ಕೆಪಿಸಿಸಿ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಲ್ಲಿ ನನ್ನನ್ನು ಬಿಟ್ಟು ಉಳಿದವರನ್ನು ಸಚಿವರನ್ನಾಗಿ ಮಾಡಲಾಗಿದೆ. ಆದರೆ, ನನ್ನ ಯಾಕೆ ಬಿಟ್ಟರು ಎಂದು ಗೊತ್ತಿಲ್ಲ. ಈ ಬಾರಿ ನನಗೆ ಸಚಿವನಾಗುವ ಭರವಸೆ ಇದೆ ಎಂದು ಹೇಳಿದರು.
ನವೆಂಬರ್ ನಲ್ಲಿ ಸರ್ಕಾರ ಎರಡೂವರೆ ವರ್ಷ ಪೂರೈಸಲಿದೆ. ಆಗ ಕೆಲವು ಸಚಿವರನ್ನು ಪಕ್ಷ ಸಂಘಟನೆಗೆ ಕಳುಹಿಸುವ ಬಗ್ಗೆ ಸಿಎಂ ಹಾಗೂ ಹೈಕಮಾಂಡ್ ಚಿಂತನೆ ಮಾಡಿದ್ದಾರೆ. ಸಚಿವ ಸಂಪುಟ ಪುನರ್ ರಚನೆ ಆಗಬಹುದು ಎನ್ನುವ ಚರ್ಚೆ ನಡೆದಿದೆ.
ಕಳೆದ ಬಾರಿಯೇ ನಾನು ಸಚಿವನಾಗಬೇಕಿತ್ತು. ನಾನು ವರ್ಕಿಂಗ್ ಕಮಿಟಿ ಅಧ್ಯಕ್ಷನಾಗಿದ್ದೇನೆ. ಕಳೆದ ಬಾರಿ ನನ್ನನ್ನು ಬಿಟ್ಟು ಉಳಿದವರನ್ನು ಸಚಿವರನ್ನಾಗಿ ಮಾಡಿದರು. ಸಚಿವ ಸ್ಥಾನದಿಂದ ನನ್ನ ಯಾಕೆ ಬಿಟ್ಟರು ಗೊತ್ತಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡಿಗೆ ಬಿಟ್ಟಿದ್ದು. ಡಿ ಕೆ ಶಿವಕುಮಾರ್ ಸಿಎಂ ಎನ್ನುವುದು ಶಾಸಕ ಇಕ್ಬಾಲ್ ಹುಸೇನ್ ಅವರ ವೈಯಕ್ತಿಕ ಹೇಳಿಕೆ. ನವಂಬರ್ ಕ್ರಾಂತಿ ಏನು ಇಲ್ಲ; ನವೆಂಬರ್ ಸಚಿವ ಸಂಪುಟ ವಿಸ್ತರಣೆಯೇ ಕ್ರಾಂತಿ ಇರಬಹದು ಎಂದರು.
Advertisement