
ಕಲಬುರಗಿ: ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ನಿಂದ ಒಂದು ಕಾಲು ಹೊರಗಿಟ್ಟಿದ್ದು, ಬಿಜೆಪಿ ಸಹಕಾರದೊಂದಿಗೆ ಸರ್ಕಾರ ರಚಿಸಲು ಮುಂದಾಗಿದ್ದರು ಎಂಬುದಾಗಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸದ್ಯ ಡಿಕೆ ಶಿವಕುಮಾರ್ ಒಂದು ಕಾಲು ಕಾಂಗ್ರೆಸ್ ನಲ್ಲಿದೆ. ಇನ್ನೊಂದು ಕಾಲು ಬಿಜೆಪಿಯಲ್ಲಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರೊಂದಿಗೆ ರಹಸ್ಯ ಸಭೆಯನ್ನು ನಡೆಸಿದ್ದರು. ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆಗೆ ಮುಂದಾಗಿದ್ದರು ಎಂದು ಆರೋಪಿಸಿದ್ದಾರೆ.
ಡಿ.ಕೆ ಶಿವಕುಮಾರ್, ವಿಜಯೇಂದ್ರ ಮಾತುಕತೆಯ ಸಂದರ್ಭದಲ್ಲಿ ಡಿಕೆಶಿ ಮುಖ್ಯಮಂತ್ರಿ, ವಿಜಯೇಂದ್ರ ಉಪಮುಖ್ಯಮಂತ್ರಿ ಆಗುವಂತೆ ಚರ್ಚೆ ನಡೆದಿತ್ತು. ಆದರೇ ಡಿಕೆ ಶಿವಕುಮಾರ್ ಅವರ ಹಿಂದೆ ಹೆಚ್ಚಿನ ಸಂಖ್ಯೆಯ ಶಾಸಕರು ಇರಲಿಲ್ಲ. ಹೀಗಾಗಿ ಸುಮ್ಮನಾಗಿದ್ದಾರೆ ಎಂಬುದಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.
ದೆಹಲಿಯಲ್ಲಿ ನಡೆದ ಸಭೆಯಲ್ಲಿ, ಶಿವಕುಮಾರ್ ಅವರು 60 ರಿಂದ 70 ಕಾಂಗ್ರೆಸ್ ಶಾಸಕರ ಬೆಂಬಲ ಹೊಂದಿದ್ದಾರೆಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಅವರ (ಡಿಕೆಎಸ್) ಹಿಂದೆ 13 ಶಾಸಕರು ಕೂಡ ಇಲ್ಲ ಎಂದು ಆಂತರಿಕ ವರದಿಯ ಮೂಲಕ ಬಿಜೆಪಿ ನಾಯಕರು ತಿಳಿದುಕೊಂಡರು ಎಂದು ಯತ್ನಾಳ್ ಹೇಳಿದರು.
Advertisement