
ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಹಲವು ತಿಂಗಳಿಂದ ಖಾಲಿ ಇದ್ದ ನಾಲ್ಕು ಸದಸ್ಯ ಸ್ಥಾನಗಳಿಗೆ ಆರತಿ ಕೃಷ್ಣ, ರಮೇಶ್ ಬಾಬು, ಎಫ್.ಎಚ್. ಜಕ್ಕಪ್ಪನವರ್ ಮತ್ತು ಶಿವಕುಮಾರ್ ಅವರನ್ನು ನಾಮನಿರ್ದೇಶನ ಮಾಡಿ ಸರ್ಕಾರ ಭಾನುವಾರ ಅಧಿಕೃತ ಆದೇಶ ಹೊರಡಿಸಿದೆ.
ಕರ್ನಾಟಕ ಸರ್ಕಾರದ ಎನ್‌ಆರ್‌ಐ ಫೋರಂನ ಉಪಾಧ್ಯಕ್ಷೆ, ಶಿಕ್ಷಣ ತಜ್ಞೆ, ಕಾರ್ಮಿಕ ನಾಯಕಿ ಮತ್ತು ಎಐಸಿಸಿ ಎಸ್‌ಸಿ ಸೆಲ್‌ನ ಡಾ. ಅಂಬೇಡ್ಕರ್ ಫೌಂಡೇಶನ್‌ನ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಎಐಸಿಸಿ ಎಸ್‌ಸಿ ಸೆಲ್‌ನ ಎಫ್‌ಎಚ್ ಜಕ್ಕಪ್ಪನವರ್, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಹಿರಿಯ ಸಹಾಯಕ ಸಂಪಾದಕ ಶಿವಕುಮಾರ್ ಕೆ ಮತ್ತು ಕೆಪಿಸಿಸಿ ಮಾಧ್ಯಮ ಕೋಶದ ಅಧ್ಯಕ್ಷ ಮತ್ತು ಮಾಜಿ ಜೆಡಿಎಸ್ ಎಂಎಲ್‌ಸಿ ರಮೇಶ್ ಬಾಬು ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ದಿನಾಂಕವನ್ನು ನೀಡಿದ ನಂತರ ಈ ನಾಲ್ವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ರಮೇಶ್ ಬಾಬು ಅವರಿಗೆ ಹತ್ತು ತಿಂಗಳ ಅವಧಿ ದೊರೆಯುತ್ತದೆ, ಅದು ಜುಲೈ 21, 2026 ರವರೆಗೆ ಇರುತ್ತದೆ, ಏಕೆಂದರೆ ಸಿಪಿ ಯೋಗೀಶ್ವರ್ ರಾಜಿನಾಮೆಯಿಂದ ತೆರವಾಗಿದ್ದ ಸ್ಧಾನಕ್ಕ ನೇಮಕ ಮಾಡಲಾಗಿದೆ , ಯೋಗೇಶ್ವರ್ ಈಗ ಚನ್ನಪಟ್ಟಣ ಶಾಸಕರಾಗಿದ್ದಾರೆ. ಇತರ ಮೂವರು ಆರು ವರ್ಷಗಳ ಪೂರ್ಣ ಅಧಿಕಾರಾವಧಿಯನ್ನು ಪಡೆಯುತ್ತಾರೆ.
ನಾಲ್ಕು ಸ್ಥಾನಗಳ ನಾಮ ನಿರ್ದೇಶನಕ್ಕೆ ರಾಜ್ಯಪಾಲರು ಅಂಗೀಕಾರ ಹಾಕಿದ್ದರಿಂದಾಗಿ, ಪರಿಷತ್ತಿನಲ್ಲಿ ಈಗ ಕಾಂಗ್ರೆಸ್ ಏಕೈಕ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ–ಜೆಡಿಎಸ್ ಸೇರಿ 37 ಸದಸ್ಯರ ಬಲ ಹೊಂದಿವೆ. ಮೇಲ್ನೋಟಕ್ಕೆ ಸಮಬಲ ಎನಿಸುವಂತಿದ್ದರೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ತಮ್ಮ ಲಖನ್ ಜಾರಕಿಹೊಳಿ ಪಕ್ಷೇತರ ಸದಸ್ಯರಾಗಿ ಮೇಲ್ಮನೆಯಲ್ಲಿದ್ದಾರೆ. ಹೀಗಾಗಿ, ಪರಿಷತ್ತಿನಲ್ಲಿ ಎದುರಿಸುತ್ತಿದ್ದ ಮುಜುಗರದಿಂದ ಪಾರಾಗುವ ದಾರಿ ಕಾಂಗ್ರೆಸ್ ಸಿಕ್ಕಂತಾಗಿದೆ.
Advertisement