
ದಾವಣಗೆರೆ: ಈಗ ನರೇಂದ್ರ ಮೋದಿ ಇದ್ದಾರೆ ಮುಂದೆ ಯೋಗಿ ಬರ್ತಾರೆ. ಮೋದಿಗಿಂತ ದಿಟ್ಟ ನಿರ್ಧಾರ ಕೈಗೊಳ್ತಾರೆ, ನಾನು ಸಿಎಂ ಆದ್ರೆ ಜೆಸಿಬಿ ಸಹಿತ ಪ್ರಮಾಣ ವಚನ ಸ್ವೀಕರಿಸುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮರಡಿ ಗ್ರಾಮದ ಧರ್ಮ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು ಯಡಿಯೂರಪ್ಪ ಮತ್ತು ಅವರ ಮಗ ಇಬ್ಬರೂ ಲೂಟಿ ಮಾಡುತ್ತಿದ್ದಾರೆ. ತಂದೆ ಮೊದಲು ಲೂಟಿ ಮಾಡಿದ, ಈಗ ಮಗನಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ.
ತಾವು ಬಿಜೆಪಿಯಿಂದ ಉಚ್ಚಾಟನೆಗೊಂಡಾಗ ಅಮಿತ್ ಶಾ ಮರಳಿ ಪಕ್ಷಕ್ಕೆ ಕರೆತಂದರೂ, ಯಡಿಯೂರಪ್ಪ ತಮ್ಮನ್ನು ಮಂತ್ರಿಯಾಗದಂತೆ ನೋಡಿಕೊಂಡರು. ನನ್ನ ಹಿರಿತನ ನೋಡಿದರೆ ನಾನೇ ಸಿಎಂ ಆಗಬೇಕಿತ್ತು. ರಾಜ್ಯದಲ್ಲಿ ಉಚ್ಚಾಟನೆಗೊಂಡವರೆಲ್ಲ ಸಿಎಂ ಆಗಿದ್ದಾರೆ, ನಾನೇಕೆ ಆಗಬಾರದು? ಎಂದು ಪ್ರಶ್ನಿಸಿದರು. ವೀರಶೈವ-ಲಿಂಗಾಯತ ಒಂದೇ ಎಂದು ಕೆಲವರು ಹೇಳುತ್ತಾರೆ.
ಆದರೆ ಯಡಿಯೂರಪ್ಪ, ಶಾಮನೂರು, ಖಂಡ್ರೆ ಕುಟುಂಬಗಳು ತಮ್ಮ ರಾಜಕೀಯಕ್ಕಾಗಿ ಸಮಾಜವನ್ನು ಬಳಸಿಕೊಳ್ಳುತ್ತಿವೆ. ಯಡಿಯೂರಪ್ಪ ಜಗಳ ಬೇಡ ಎನ್ನುತ್ತಾರೆ, ಯಡಿಯೂರಪ್ಪ ತಮ್ಮ ನಿಲುವು ಏನೆಂಬುದು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ಈಗ ಮೋದಿ ಇದ್ದಾರೆ ಮುಂದೆ ಯೋಗಿ ಬರಲಿದ್ದಾರೆ. ಮೋದಿಗಿಂತ ನಿರ್ಧಾರ ತೆಗೆದುಕೊಳ್ತಾರೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಮುಸ್ಲಿಂರ ಓಲೈಕೆ ಮಾಡುತ್ತಿದ್ದಾರೆ. ಇದನ್ನ ಸುಧಾರಿಸಿಕೊಳ್ಳಬೇಕು. ಹಾಗಾದ್ರೆ 2028 ರವರೆಗೆ ಸಿಎಂ ಆಗಿ ಉಳಿತೀರಿ. ಇಲ್ಲವಾದ್ರೆ ಇಷ್ಟರಲ್ಲಿಯೇ ಸರ್ಕಾರ ಪತನವಾಗುತ್ತೆ. ಆದ್ರೆ ಸಿದ್ದರಾಮಯ್ಯ ಮಾತ್ರ ಡಿಕೆ ಶಿವಕುಮಾರ್‌ಗೆ ಸಿಎಂ ಆಗೋಕೆ ಬಿಡೋಲ್ಲ ಎಂದರು.
ದೇಶದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಾಗಬೇಕು. ನಾನು ಸಿಎಂ ಆದ್ರೆ ಮೂವರು ಮಕ್ಕಳು ಇರೋರಿಗೆ ಎಲ್ಲಾ ಉಚಿತ ಸೌಲಭ್ಯ ನೀಡುವೆ. ಮದುವೆಗೆ ಐದು ಲಕ್ಷ ರೂಪಾಯಿ ಸಹ ಉಚಿತವಾಗಿ ಕೊಡುವೆ. ಸಾಬರು 25 ಹಡಿತಾರೆ ನಾವು ಕಟ್ಟಿದ ತೆರಿಗೆಯನ್ನ ಅವರೇ ತಿಂದು ತೇಗುತ್ತಿದ್ದಾರೆ ಎಂದು ಯತ್ನಾಳ್ ವ್ಯಂಗ್ಯವಾಡಿದರು. ಯತ್ನಾಳರ ಭಾಷಣ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಸ್ಲಿಂ ಓಲೈಕೆ ಮಾಡುತ್ತಾರೆ. ಇದಕ್ಕೆ ಸುಧಾರಿಸಿಕೊಳ್ಳಬೇಕು ಅಂದ್ರೆ 2028ರ ವರೆಗೆ ಸಿಎಂ ಆಗಿ ಉಳಿತೀರಿ. ಇಲ್ಲಾದ್ರೆ ಇಷ್ಟರಲ್ಲಿ ಸರ್ಕಾರ ಪತನವಾಗುತ್ತೆ. ಆದ್ರೆ ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್‌ಗೆ ಸಿಎಂ ಆಗೋಕೆ ಬಿಡಲ್ಲ.
ಇದೇ ವೇಳೆ ಮತ್ತೆ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಕೆಜೆಹಳ್ಳಿ-ಡಿಜೆಹಳ್ಳಿ ಕೇಸ್‌ನಲ್ಲಿ ಅಂದಿನ ಸಿಎಂ ಬೊಮ್ಮಾಯಿ ವೈಫಲ್ಯ ಕಾರಣ. ಆರಗ ಜ್ಞಾನೇಂದ್ರ, ಬೊಮ್ಮಾಯಿ ಅವರ ಕೈಗೆ ಅಧಿಕಾರ ಕೊಟ್ಟು ಹಾಳಾಯಿತು ಎಂದು ಕಿಡಿ ಕಾರಿದರು.
Advertisement