BJP, RSS 'ವಿಷಸರ್ಪ': ಅಪ್ಪನ ಹೇಳಿಕೆ ಬೆಂಬಲಿಸಿದ ಪ್ರಿಯಾಂಕ್ ಖರ್ಗೆ; ಅಸ್ಸಾಂ ಸಿಎಂ ವಿರುದ್ಧ ವಾಗ್ದಾಳಿ

"ನಮ್ಮ ಸಮಾಜದಲ್ಲಿ ಕೋಮು ವಿಷದ ಬೀಜಗಳನ್ನು ಬಿತ್ತುತ್ತಿರುವವರು ಯಾರು? ಏಕೆ? ನಾವು ಅಂತಹ ಸಿದ್ಧಾಂತಗಳು ಮತ್ತು ತತ್ವಗಳನ್ನು ಉಳಿಸಿ ಬೆಳೆಸಬೇಕೇ? ಇಲ್ಲ. ಅದನ್ನೇ ಅವರು(ಮಲ್ಲಿಕಾರ್ಜುನ ಖರ್ಗೆ) ಹೇಳಿದ್ದಾರೆ. ನಾವು ಇದನ್ನು ಬಹಳ ಸಮಯದಿಂದ ಹೇಳುತ್ತಿದ್ದೇವೆ, ಈಗಷ್ಟೇ ಅಲ್ಲ" ಎಂದರು.
Priyank Kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ತಮ್ಮ ತಂದೆ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ್ದ ಬಿಜೆಪಿ ಮತ್ತು ಆರ್‌ಎಸ್‌ಎಸ್ "ವಿಷಸರ್ಪ" ಇದ್ದಂತೆ ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ನು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕ್ ಖರ್ಗೆ, ಅವರು "ಹತಾಶೆಗೊಂಡಿದ್ದಾರೆ" ಎಂದರು.

"ಅವರು(ಮಲ್ಲಿಕಾರ್ಜುನ ಖರ್ಗೆ) ಏನು ಹೇಳಿದ್ದಾರೆ? ವಿಷಕಾರಿ ಹಾವು ಎದುರಾದರೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ. ನೀವು ವಿಷಕಾರಿ ಹಾವನ್ನು ನೋಡಿದರೆ, ಅದಕ್ಕೆ ಹಾಲು ನೀಡಿ ಪೋಷಿಸುತ್ತೀರಾ ಅಥವಾ ಓಡಿಸುತ್ತೀರಾ?" ಎಂದು ಖರ್ಗೆ ಪ್ರಶ್ನಿಸಿದರು.

"ನಮ್ಮ ಸಮಾಜದಲ್ಲಿ ಕೋಮು ವಿಷದ ಬೀಜಗಳನ್ನು ಬಿತ್ತುತ್ತಿರುವವರು ಯಾರು? ಏಕೆ? ನಾವು ಅಂತಹ ಸಿದ್ಧಾಂತಗಳು ಮತ್ತು ತತ್ವಗಳನ್ನು ಉಳಿಸಿ ಬೆಳೆಸಬೇಕೇ? ಇಲ್ಲ. ಅದನ್ನೇ ಅವರು(ಮಲ್ಲಿಕಾರ್ಜುನ ಖರ್ಗೆ) ಹೇಳಿದ್ದಾರೆ. ನಾವು ಇದನ್ನು ಬಹಳ ಸಮಯದಿಂದ ಹೇಳುತ್ತಿದ್ದೇವೆ, ಈಗಷ್ಟೇ ಅಲ್ಲ" ಎಂದರು.

Priyank Kharge
RSS ವಿಷಕಾರಿ ಹಾವು ಹೇಳಿಕೆ: ಖರ್ಗೆ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ಆಗ್ರಹ

"ನಮ್ಮ ಸಮಾಜದಲ್ಲಿ ಕೋಮು ವಿಷದ ಬೀಜಗಳನ್ನು ಬಿತ್ತುತ್ತಿರುವವರು ಯಾರು? ಏಕೆ? ನಾವು ಅಂತಹ ಸಿದ್ಧಾಂತಗಳು ಮತ್ತು ತತ್ವಗಳನ್ನು ಉಳಿಸಿ ಬೆಳೆಸಬೇಕೇ? ಇಲ್ಲ. ಅದನ್ನೇ ಅವರು(ಮಲ್ಲಿಕಾರ್ಜುನ ಖರ್ಗೆ) ಹೇಳಿದ್ದಾರೆ. ನಾವು ಇದನ್ನು ಬಹಳ ಸಮಯದಿಂದ ಹೇಳುತ್ತಿದ್ದೇವೆ, ಈಗಷ್ಟೇ ಅಲ್ಲ" ಎಂದರು.

ಆರ್‌ಎಸ್‌ಎಸ್ ಸಿದ್ಧಾಂತ ಮತ್ತು ತತ್ವಗಳು ದೇಶದ ಮತ್ತು ಸಮಾಜದ ಪ್ರಗತಿಗೆ ಹಾನಿಕಾರಕ ಎಂದ ಪ್ರಿಯಾಂಕ್ ಖರ್ಗೆ, ಅವರ ದೃಷ್ಟಿಕೋನವು ಸಂವಿಧಾನ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಆದಿವಾಸಿಗಳು, ದಲಿತರು ಅಥವಾ ಮಹಿಳೆಯರನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಆರೋಪಿಸಿದರು.

"ಅವರು ಮನುಸ್ಮೃತಿಯನ್ನು ನಂಬುತ್ತಾರೆ; ನಾವು ಸಂವಿಧಾನವನ್ನು ಅನುಸರಿಸುತ್ತೇವೆ" ಎಂದು ಖರ್ಗೆ ಹೇಳಿದರು.

ಇದೇ ವೇಳೆ ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ವಯಸ್ಸಾದ ಕಾರಣದಿಂದ ಹುಚ್ಚರಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ ಅಸ್ಸಾಂ ಸಿಎಂ ವಿರುದ್ಧ ಕಿಡಿ ಕಾರಿದ ಖರ್ಗೆ, "ಆರ್‌ಎಸ್‌ಎಸ್ ತರಬೇತಿಯ ನಂತರ ಶರ್ಮಾ ಹೀಗೆ ಆಗಿದ್ದಾರೆ. ಕಾಂಗ್ರೆಸ್‌ನಲ್ಲಿದ್ದಾಗ ಹೀಗೆ ಇರಲಿಲ್ಲ. ಶರ್ಮಾ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಅವರಿಗೆ ಆ ಸವಲತ್ತು ಇದೆ ಮತ್ತು ಅವರು ಏನು ಹೇಳಿದರೂ ಅದು ದಲಿತರ ವಿರುದ್ಧ ಅಥವಾ ದಲಿತ ನಾಯಕರ ವಿರುದ್ಧವಾಗಿರುತ್ತೆ" ಎಂದರು.

"ಪ್ರಧಾನಿ ಮೋದಿ ಇದರ ಬಗ್ಗೆ ಏನು ಹೇಳುತ್ತಾರೆ? ಅವರು ಅದನ್ನು ಸಮರ್ಥಿಸಿಕೊಳ್ಳುತ್ತಾರೆಯೇ? ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನ ವಿರುದ್ಧ ತಮ್ಮ ಮುಖ್ಯಮಂತ್ರಿ ನೀಡಿದ ಹೇಳಿಕೆಗಳನ್ನು ಅವರು ಸ್ವೀಕರಿಸುತ್ತಾರೆಯೇ?" ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

Download the KannadaPrabha News app to follow the latest news updates

Subscribe and Receive exclusive content and updates on your favorite topics

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com