ರಾಮ್ ಮಾಧವ್ ಹೇಳಿಕೆಯಿಂದ ಕೇಂದ್ರದ 'ಅಪಾಯಕಾರಿ ಆದ್ಯತೆ' ಬಹಿರಂಗ; ಸ್ವಯಂ ಶರಣಾಗತಿಯ ಲಜ್ಜೆಗೆಟ್ಟ ಕೃತ್ಯ!

ಸಾಮಾಜಿಕ ಮಾಧ್ಯಮ 'ಎಕ್ಸ್' ನಲ್ಲಿ ಆರ್‌ಎಸ್‌ಎಸ್ ನಾಯಕ ರಾಮ್ ಮಾಧವ್ ಅವರ ವಿಡಿಯೋವನ್ನು ಸಿಎಂ ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ.
CM Siddaramaiah
ಮುಖ್ಯಮಂತ್ರಿ ಸಿದ್ದರಾಮಯ್ಯ
Updated on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ "ಕೈಗೊಂಬೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಅವರು ಟೀಕಿಸಿದ್ದು, ಹಿರಿಯ ಬಿಜೆಪಿ ನಾಯಕ ರಾಮ್ ಮಾಧವ್ ಅವರು ಅಮೆರಿಕದಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆ ಮೋದಿ ಸರ್ಕಾರದ "ಅಪಾಯಕಾರಿ" ಆದ್ಯತೆಗಳನ್ನು "ಬಹಿರಂಗಪಡಿಸಿದೆ" ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ 'ಎಕ್ಸ್' ನಲ್ಲಿ ಆರ್‌ಎಸ್‌ಎಸ್ ನಾಯಕ ರಾಮ್ ಮಾಧವ್ ಅವರ ವಿಡಿಯೋವನ್ನು ಸಿಎಂ ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ. ಅದರಲ್ಲಿ ಇರಾನ್ ಮತ್ತು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಭಾರತ ಒಪ್ಪಿಕೊಂಡಿದೆ ಮತ್ತು ಅಮೆರಿಕ ವಿಧಿಸಿದ ಹೆಚ್ಚಿನ ಸುಂಕಗಳಿಗೆ ಒಪ್ಪಿಗಿ ಸೂಚಿಸಿದೆ ಎಂದು ಮಾಧವ್ ಹೇಳಿದ್ದಾರೆ.

ಅಮೆರಿಕದಲ್ಲಿ ಮಾಧವ್ ನೀಡಿದ ಹೇಳಿಕೆಗಳು "ಮೋದಿ ಸರ್ಕಾರದ ಅಪಾಯಕಾರಿ ಆದ್ಯತೆಗಳನ್ನು" ಬಹಿರಂಗಪಡಿಸಿದೆ ಎಂದು ಅವರು ಹೇಳಿದ್ದಾರೆ.

CM Siddaramaiah
'ರಾಷ್ಟ್ರೀಯ ಶರಣಾಗತಿ ಸಂಘ'; ಬಿಜೆಪಿ ನಾಯಕ ರಾಮ್ ಮಾಧವ್ ರಿಂದ RSS ನಿಜವಾದ ಬಣ್ಣ ಬಯಲು

ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರೊಂದಿಗೆ ಮಾಧವ್ ಅಮೆರಿಕಕ್ಕೆ ಭೇಟಿ ನೀಡಿದ್ದು, ವಾಷಿಂಗ್ಟನ್‌ನ ಹಡ್ಸನ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಇವು ರಾಜತಾಂತ್ರಿಕ ನಿರ್ಧಾರಗಳಲ್ಲ - ಅವು "ಸ್ವಯಂ ಶರಣಾಗತಿಯ ಲಜ್ಜೆಗೆಟ್ಟ ಕೃತ್ಯಗಳು" ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

"ರಾಹುಲ್ ಗಾಂಧಿ ಹೇಳಿದಂತೆ, ಇದು 'ರಾಷ್ಟ್ರೀಯ ಶರಣಾಗತಿ ಸಂಘ'ದ ಮಾದರಿ. ರಾಷ್ಟ್ರೀಯತೆ ಒಂದು ಮುಖವಾಡ. ದಾಸ್ಯವೇ ವಾಸ್ತವ" ಎಂದು ಟೀಕಿಸಿದ್ದಾರೆ.

"ದುರದೃಷ್ಟವಶಾತ್, ಈ ರಾಜಿ ನಾಯಕತ್ವಕ್ಕೆ ಭಾರತ ಬೆಲೆ ತೆರುತ್ತಿದೆ" ಎಂದು ಸಿಎಂ ಹೇಳಿದ್ದಾರೆ.

ಆದಾಗ್ಯೂ, ರಾಮ್ ಮಾಧವ್ ನಂತರ ಕ್ಷಮೆಯಾಚಿಸಿದ್ದು, ಅವರು ಹೇಳಿದ್ದು "ವಾಸ್ತವಿಕವಾಗಿ ತಪ್ಪು". ಏಕೆಂದರೆ ಭಾರತ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ಒಪ್ಪಿಲ್ಲ ಮತ್ತು ಟ್ರಂಪ್ ಆಡಳಿತ ಶೇಕಡಾ 50 ರಷ್ಟು ಸುಂಕ ವಿಧಿಸುವುದನ್ನು "ತೀವ್ರವಾಗಿ ಪ್ರತಿಭಟಿಸಿದೆ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com